ಸಿದ್ದು ವಳಕಲದಿನ್ನಿಗೆ ಗೌರವ ಡಾಕ್ಟರೇಟ್ ಪ್ರಧಾನ

0 Min Read
GOWRAVA
ಕಾರಟಗಿಯ ಎಸ್‌ಡಿಎಂ ಮತ್ತು ಆಕ್ಸ್‌ಫರ್ಡ್ ವಿದ್ಯಾಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಸಿದ್ದು ಟಿ.ವಳಕಲದಿನ್ನಿ ಅವರಿಗೆ ತಮಿಳುನಾಡು ಹೊಸೂರಿನ ಏಷ್ಯಾ ಇಂಟರ್‌ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಲಾಯಿತು. ಶ್ರೀಹೇಮಂತ ಯೋಗಿ ಜಗದೀಶ ನಾಥ ಸ್ವಾಮೀಜಿ, ತಮಿಳುನಾಡು ಐಎನ್‌ಟಿಯುಸಿ ಕಾರ್ಯಾಧ್ಯಕ್ಷ (ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ಹಾಗೂ ಮಾಜಿ ಶಾಸಕ ಡಾ.ಕೆ.ಎ.ಮನೋಕರನ್, ನಿವೃತ್ತ ನ್ಯಾಯಾಧೀಶ ಡಾ.ಜೆ.ಹರಿಡೋಸ್ ಇದ್ದರು.

ಕಾರಟಗಿ: ರಾಜ್ಯ ನವೋದಯ ತರಬೇತಿದಾರರ ಸಂಘದ ಅಧ್ಯಕ್ಷ ಹಾಗೂ ಪಟ್ಟಣದ ಎಸ್‌ಡಿಎಂ ಮತ್ತು ಆಕ್ಸ್‌ಫರ್ಡ್ ವಿದ್ಯಾಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಸಿದ್ದು ಟಿ.ವಳಕಲದಿನ್ನಿ ಅವರಿಗೆ ತಮಿಳುನಾಡು ಹೊಸೂರಿನ ಏಷ್ಯಾ ಇಂಟರ್‌ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿಯನ್ನು ಭಾನುವಾರ ಪ್ರಧಾನ ಮಾಡಲಾಯಿತು.

ಶಿಕ್ಷಣ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ಗುರುತಿಸಿ ವಿಶ್ವವಿದ್ಯಾಲಯ ಸಿದ್ದು ಟಿ.ವಳಕಲದಿನ್ನಿ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಿದೆ. ಏಷ್ಯಾ ಇಂಟರ್‌ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿಯ ಮಾಸ್ಟರ್ ವಿ.ಬಾಬು ವಿಜಯನ್, ಸಮಾಜಸೇವಕಿ ಡಾ.ಶ್ರೀಲತಾ ಶೆಟ್ಟಿ ಇತರರಿದ್ದರು.

See also  ಕನ್ನಡ ಉಳಿಸುವುದು ನಮ್ಮೆಲ್ಲರ ಕೆಲಸ; ಕರ್ನಾಟಕ ಸಂಸ್ಕೃತ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಹೇಳಿಕೆ
Share This Article