More

    ಪಾಕಿಸ್ತಾನದ ಕರ್ತಾಪುರದಲ್ಲಿರುವ ಗುರುದ್ವಾರದ ಗೋಪುರಗಳಿಗೆ ಹಾನಿ; ಭಾರತದಿಂದ ಭಾರಿ ಆಕ್ರೋಶ

    ನವದೆಹಲಿ: ಪಾಕಿಸ್ತಾನ ಮತ್ತು ಭಾರತದ ಗಡಿಭಾಗಕ್ಕೆ ಸಮೀಪದ ಕರ್ತಾರ್​ಪುರದಲ್ಲಿ ಇತ್ತೀಚೆಗಷ್ಟೇ ನಿರ್ಮಾಣಗೊಂಡಿದ್ದ ಗುರುದ್ವಾರದ ಎರಡು ಗೋಪುರಗಳು ಹಾನಿಗೊಂಡು ಕುಸಿದಿವೆ. ಶುಕ್ರವಾರ ಬಿದ್ದ ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ ಗೋಪುರಗಳಿಗೆ ಹಾನಿಯಾಗಿರುವುದಾಗಿ ಹೇಳಲಾಗಿದೆ.

    ಇದನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಸರ್ಕಾರ, ಗುರುದ್ವಾರದ ಗೋಪುರಗಳಿಗೆ ಹಾನಿಯಾಗಿರುವುದರಿಂದ, ಸಿಖ್​ ಸಮುದಾಯದವರಿಗೆ ಭಾರಿ ನೋವು, ಸಂಕಟ ಹಾಗೂ ದುಃಖವಾಗಿದೆ. ಇದು ಅವರ ಪವಿತ್ರಸ್ಥಳವಾಗಿರುವುದರಿಂದ, ನೋವು, ಸಂಕಟ ಹಾಗೂ ದುಃಖವಾಗುವುದು ಸಹಜ. ಆದ್ದರಿಂದ, ತಕ್ಷಣವೇ ಗೋಪುರಗಳನ್ನು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಪಾಕಿಸ್ತಾನ ಸರ್ಕಾರವನ್ನು ಆಗ್ರಹಿಸಿದೆ.

    ಗೋಪುರಗಳಿಗೆ ಹಾನಿಯಾಗಿರುವ ವಿಷಯ ಗೊತ್ತಾಗುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ಸಿಖ್​ ಸಮುದಾಯದವರು ಭಾರಿ ಆಕ್ರೋಶ ಹೊರಹಾಕಿದ್ದರು. ಇದಕ್ಕೆ ಕಳಪೆ ನಿರ್ಮಾಣವೇ ಕಾರಣ ಎಂದು ಆರೋಪಿಸಿದ್ದರು. ತಕ್ಷಣವೇ ಅವನ್ನು ದುರಸ್ತಿಗೊಳಿಸುವಂತೆ ಪಾಕಿಸ್ತಾನ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ವಿದೇಶಾಂಗ ಸಚಿವ ಎಸ್​. ಜೈಶಂಕರ್​ ಅವರನ್ನು ಆಗ್ರಹಿಸಿದ್ದರು.

    ಆದರೆ ಗೋಪುರಗಳಿಗೆ ಹಾನಿಯಾಗಿರುವ ಸಂಗತಿಯನ್ನು ದೊಡ್ಡದು ಮಾಡದಂತೆ ಪಾಕಿಸ್ತಾನ ಸಿಖ್​ ಗುರುದ್ವಾರ ಪ್ರಬಂಧಕ ಸಮಿತಿಯ (ಪಿಎಸ್​ಜಿಪಿಸಿ) ಅಧ್ಯಕ್ಷ ಸತ್ವಂತ್​ ಸಿಂಗ್​ ಮನವಿ ಮಾಡಿಕೊಂಡಿದ್ದಾರೆ. ಪಾಕಿಸ್ತಾನದಲ್ಲಿ ಶುಕ್ರವಾರ ಭಾರಿ ಬಿರುಗಾಳಿ ಸಹಿತ ಮಳೆಯಾಯಿತು. ಇದರಿಂದ ಪಾಕಿಸ್ತಾನದ ನಾನಾ ಭಾಗಗಳಲ್ಲಿ ಭಾರಿ ಹಾನಿಯಾಗಿದೆ. ಅದರಂತೆ ಗುರುದ್ವಾರದ ಗೋಪುರಗಳು ಹಾನಿಗೊಂಡಿವೆ. ಇದನ್ನು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಮುದಾಯದವರನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ.

    ಟೀಂ ಇಂಡಿಯಾದ ಪಾಕ್​ ಪ್ರವಾಸದಲ್ಲಿ ಭಾರತದ ಈ ಆಟಗಾರ ಇಮ್ರಾನ್​ ಖಾನ್​ಗಿಂತ ಹೆಚ್ಚು ಜನಪ್ರಿಯರಾಗಿದ್ದರಂತೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts