More

    ಈ ಬಾರಿ ‘ಬಿಗ್​ ಬಾಸ್​’ನ ನಿರೂಪಣೆಯ ಜವಾಬ್ದಾರಿ ಕರಣ್​ ಜೋಹರ್​ ಹೆಗಲಿಗೆ …

    ಮುಂಬೈ: ಮೂರು ದಿನಗಳ ಹಿಂದಷ್ಟೇ, ‘ಬಿಗ್​ ಬಾಸ್​’ನ ಹೊಸ ಪ್ರೋಮೋ ಬಿಡುಗಡೆಯಾಗಿತ್ತು. ಈ ಬಾರಿ, ಟಿವಿಗಿಂತ ಮೊದಲು ವೂಟ್​ನಲ್ಲಿ ‘ಬಿಗ್​ ಬಾಸ್​’ ಪ್ರಸಾರವಾಗಲಿದೆ ಎಂದು ಸಲ್ಮಾನ್​ ಖಾನ್​ ಹೇಳಿದ್ದರು. ಆಗಸ್ಟ್​ 8ಕ್ಕೆ ಈ ಕಾರ್ಯಕ್ರಮ ಪ್ರಸಾರವಾಗುವುದರ ಕುರಿತು ಸಹ ಈ ಪ್ರೋಮೋದಲ್ಲಿ ಹಿಂಟ್​ ಕೊಡಲಾಗಿತ್ತು.

    ಇದನ್ನೂ ಓದಿ: ‘ಗುಚಿ’ಯೊಂದಿಗೆ ರಣವೀರ್​ ಸಿಂಗ್​ರ ಆಕರ್ಷಕ ಲುಕ್ಸ್​ ನೋಡಿ!

    ಈಗ ಬಂದಿರುವ ಸುದ್ದಿಯ ಪ್ರಕಾರ, ಒಟಿಟಿಯಲ್ಲಿ ಪ್ರಸಾರವಾಗಲಿರುವ ‘ಬಿಗ್​ ಬಾಸ್​’ ಕಾರ್ಯಕ್ರಮವನ್ನು ಸಲ್ಮಾನ್​ ಖಾನ್​ ಬದಲು ಕರಣ್​ ಜೋಹರ್​ ನಡೆಸಿಕೊಡಲಿದ್ದಾರಂತೆ. ಈ ಕಾರ್ಯಕ್ರಮ ಆರು ಕಾಲಗಾಳ ವೂಟ್​ನಲ್ಲಿ ಮೊದಲು ಪ್ರಸಾರವಾಗಲಿದ್ದು, ಆ ನಂತರ ಸೆಪ್ಟೆಂಬರ್​ನಿಂದ ಟಿವಿಯಲ್ಲಿ ‘ಬಿಗ್​ ಬಾಸ್​’ನ 15ನೇ ಸೀಸನ್​ ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು ಎಂದಿನಂತೆ ಸಲ್ಮಾನ್​ ಅವರೇ ನಡೆಸಿಕೊಡಲಿದ್ದಾರೆ.

    ಈ ವಿಷಯವನ್ನು ಸ್ವತಃ ಕರಣ್​ ಜೋಹರ್​ ಸಹ ಸ್ಪಷ್ಟಪಡಿಸಿದ್ದಾಎ. ಅಷ್ಟೇ ಅಲ್ಲ, ತಾನು ಈ ಕಾರ್ಯಕ್ರಮದ ದೊಡ್ಡ ಫ್ಯಾನ್​ ಎಂದು ಹೇಳಿಕೊಂಡಿದ್ದಾರೆ. ‘ನಾನು ಮತ್ತು ನನ್ನ ತಾಯಿ ‘ಬಿಗ್​ ಬಾಸ್​’ನ ದೊಡ್ಡ ಅಭಿಮಾನಿಗಳು. ಒಂದು ದಿವಸಕ್ಕೂ ನಾವು ಮಿಸ್​ ಮಾಡಿಕೊಳ್ಳುವುದಿಲ್ಲ. ಈ ಕಾರ್ಯಕ್ರಮವನ್ನು ನಡೆಸಿಕೊಡುವ ಜವಾಬ್ದಾರಿ ಇದೀಗ ನನ್ನ ಮೇಲೆ ಬಂದಿದೆ. ಒಮ್ಮೆಯಾದರೂ ‘ಬಿಗ್​ ಬಾಸ್​’ ಕಾರ್ಯಕ್ರಮವನ್ನು ನಾನು ನಡೆಸಿಕೊಡಬೇಕು ಎಂಬುದು ನನ್ನ ಅಮ್ಮನ ಆಸೆಯಾಗಿತ್ತು. ಅದೀಗ ಈಡೇರಿದೆ’ ಎಂದು ಕರಣ್​ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: 407 ಸಿನಿಮಾದ ಹೆಸರುಗಳನ್ನು ಬಳಸಿ ನೆಚ್ಚಿನ ನಟನ ಫೋಟೋ ಸಿದ್ಧಪಡಿಸಿದ ಅಭಿಮಾನಿ!

    ಒಟಿಟಿಯಲ್ಲಿ ಪ್ರಸಾರವಾಗಲಿರುವ ‘ಬಿಗ್​ ಬಾಸ್​’ ಇನ್ನಷ್ಟು ಸೆನ್ಸೇಷನಲ್​ ಆಗಿರಲಿದೆ ಎಂದು ಹೇಳಿಕೊಂಡಿರುವ ಕರಣ್​, ವಾರಾಂತ್ಯದ ಕಾರ್ಯಕ್ರಮವನ್ನು ತಮ್ಮದೇ ರೀತಿಯಲ್ಲಿ ವಿಶೇಷವಾಗಿ ನಡೆಸಿಕೊಡುವ ನಂಬಿಕೆ ಇದೆ ಎಂದು ಹೇಳಿಕೊಂಡಿದ್ದಾರೆ. ‘ಬಿಗ್​ ಬಾಸ್​’ನ ಒಟಿಟಿ ಸ್ಪಷೆಲ್​ ಎಷ್ಟು ವಿಶೇಷವಾಗಿರುತ್ತದೆ ಎಂಬುದು ಗೊತ್ತಾಗಬೇಕಿದ್ದರೆ, ಇನ್ನೂ ಎರಡು ವಾರಗಳ ಕಾಲ ಕಾಯಬೇಕು.

    ನಾಲ್ಕನೇ ಬಾರಿಗೆ ಮದುವೆಯಾದ್ರಾ ವನಿತಾ ವಿಜಯ್​ಕುಮಾರ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts