More

    ಕಲೆಕ್ಷನ್​ನಲ್ಲಿ ‘ಪುಷ್ಪ’ ದಾಖಲೆಯನ್ನು ಹಿಂದಿಕ್ಕಿದ ‘ಕಾಂತಾರ’ …

    ಮುಂಬೈ: ರಿಷಭ್​ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಚಿತ್ರವು ಬಾಕ್ಸ್​ ಆಫೀಸ್​ನಲ್ಲಿ ದಾಖಲೆ ಮೇಲೆ ದಾಖಲೆ ಮಾಡುತ್ತಿದೆ. ಈಗಾಗಲೇ ಗಳಿಕೆ ವಿಷಯದಲ್ಲಿ ಬಾಲಿವುಡ್​ನ ಹಲವು ಚಿತ್ರಗಳನ್ನು ಹಿಂದಿಕ್ಕಿರುವ ‘ಕಾಂತಾರ’ ಚಿತ್ರವು ಇದೀಗ ಅಲ್ಲು ಅರ್ಜುನ್​ ಅಭಿನಯದ ‘ಪುಷ್ಪ – ದಿ ರೈಸ್​’ ಗಳಿಕೆಯನ್ನು ಹಿಂದಿಕ್ಕಿ ಹೊಸ ದಾಖಲೆ ಬರೆದಿದೆ.

    ಇದನ್ನೂ ಓದಿ: ಕಾಂತಾರ ಕರ್ನಾಟಕದಲ್ಲಿ ಒಂದು ಕೋಟಿ ಟಿಕೆಟ್ ಮಾರಾಟ

    ‘ಪುಷ್ಪ’ ಚಿತ್ರದ ಹಿಂದಿ ಅವತರಣಿಕೆಯು 70 ಕೋಟಿ ರೂ.ಗಳಿಗೂಐ ಹೆಚ್ಚು ಕಲೆಕ್ಷನ್​ ಮಾಡಿತ್ತು. ಇದೀಗ, ‘ಕಾಂತಾರ’ ಚಿತ್ರವು 75 ಕೋಟಿ ರೂ. ಗಳಿಕೆ ಮಾಡುವ ಮೂಲಕ, ‘ಪುಷ್ಪ’ ಚಿತ್ರದ ಗಳಿಕೆಯನ್ನು ಹಿಂದಿಕ್ಕಿದೆಯಂತೆ. ಬರೀ ‘ಪುಷ್ಪ’ ಚಿತ್ರದ ಗಳಿಕೆಯಷ್ಟೇ ಅಲ್ಲ, ‘ಕೆಜಿಎಫ್​ 1’ ಚಿತ್ರದ ಒಟ್ಟಾರೆ ಗಳಿಕೆಯನ್ನು ಸಹ ‘ಕಾಂತಾರ’ ಬೀಟ್​ ಮಾಡಿದೆ.

    ಬರೀ, ಹಿಂದಿ ಅವತರಣಿಕೆಯಷ್ಟೇ ಅಲ್ಲ, ಒಟ್ಟಾರೆ ‘ಪುಷ್ಪ’ ಚಿತ್ರವು ಎಲ್ಲ ಭಾಷೆಗಳಿಂದ 350 ಕೋಟಿ ರೂ. ಸಂಗ್ರಹಿಸಿತ್ತು ಎಂದು ಹೇಳಲಾಗುತ್ತಿದೆ. ಈಗ ಅದಕ್ಕಿಂತ ಹೆಚ್ಚು ಮೊತ್ತ ಗಳಿಸುವ ಮೂಲಕ ‘ಕಾಂತಾರ’ ಚಿತ್ರವು ‘ಪುಷ್ಪ’ದ ಹೆಗ್ಗಳಿಕೆಯನ್ನು ಬೀಟ್​ ಮಾಡಿದೆಯಂತೆ. ‘ಪುಷ್ಪ’ ಚಿತ್ರವು 350.30 ಕೋಟಿ ರೂ. ಸಂಗ್ರಹಿಸಿದರೆ, ‘ಕಾಂತಾರ’ ಚಿತ್ರವು 350.70 ಕೋಟಿ ರೂ. ಸಂಗ್ರಹಿಸಿದೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಅವಳಿ ಮಕ್ಕಳಿಗೆ ಹೆಸರಿಟ್ಟ ಅಮೂಲ್ಯ-ಜಗದೀಶ್​; ಹೆಸರೇನು ಗೊತ್ತಾ?

    ‘ಕಾಂತಾರ’ ಚಿತ್ರವನ್ನು ಹೊಂಬಾಳೆ ಫಿಲಂಸ್​ನ ವಿಜಯ್​ ಕುಮಾರ್​ ಕಿರಗಂದೂರು ನಿರ್ಮಿಸಿದ್ದು, ರಿಷಭ್​ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಿಷಭ್​, ಸಪ್ತಮಿ ಗೌಡ, ಅಚ್ಯುತ್​ ಕುಮಾರ್​, ಕಿಶೋರ್​ ಮುಂತಾದವರು ಅಭಿನಯಿಸಿದ್ದು, ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸಿದ್ದಾರೆ.

    ನೆಟ್ಟಿಗರು ಮೆಚ್ಚಿದ ಸಮಂತಾ ಅಭಿನಯದ ‘ಯಶೋದ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts