More

    ಒಂದೇ ದಿನ ಬಿಡುಗಡೆಯಾಗಲಿದೆ ‘ಯಶೋದ’ ಮತ್ತು ‘ಕಾಂತಾರ’ … ಒಂದು ಅಮೇಜಾನ್​ನಲ್ಲಿ, ಇನ್ನೊಂದು ನೆಟ್​ಫ್ಲಿಕ್ಸ್​ನಲ್ಲಿ

    ಬೆಂಗಳೂರು: ಒಂದು ಕಾಲದಲ್ಲಿ ಯಾವ ಚಿತ್ರ ಯಾವ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತದೆ ಎಂಬ ಕುತೂಹಲ ಪ್ರೇಕ್ಷಕರ ವಲಯದಲ್ಲಿತ್ತು. ಆದರೆ, ಈಗ ಯಾವ ಚಿತ್ರ ಯಾವ ಓಟಿಟಿಯಲ್ಲಿ ಬಿಡುಗಡೆಯಾಗುತ್ತದೆ ಎಂಬ ಕುತೂಹಲ ಜನರಲ್ಲಿ ಹೆಚ್ಚುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಎರಡು ಜನಪ್ರಿಯ ಚಿತ್ರಗಳು ಇದೀಗ ಓಟಿಟಿಯಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಅದೇ ‘ಕಾಂತಾರ’ ಮತ್ತು ‘ಯಶೋದ’.

    ಇದನ್ನೂ ಓದಿ: IMDb 2022ನೇ ಸಾಲಿನ ಜನಪ್ರಿಯ ಭಾರತೀಯ ಸ್ಟಾರ್​ಗಳ ಪಟ್ಟಿಯಲ್ಲಿ ಯಶ್​!

    ‘ಕಾಂತಾರ’ ಚಿತ್ರವು ಈಗಾಗಲೇ ಅಮೇಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾಗಿದೆಯಲ್ಲ ಎಂದನಿಸಬಹುದು. ಹೌದು, ಚಿತ್ರವು ಈಗಾಗಲೇ ಪ್ರೈಮ್​ನಲ್ಲಿ ಸ್ಟ್ರೀಮ್​ ಆಗುತ್ತಿದೆ. ಆದರೆ, ಬರೀ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಮಾತ್ರ ಬಿಡುಗಡೆಯಾಗಿದೆ. ಹಿಂದೆ ಅವತರಣಿಕೆಯ ಹಕ್ಕುಗಳನ್ನ ನೆಟ್​ಫ್ಲಿಕ್ಸ್​ ಪಡೆದುಕೊಂಡಿದ್ದು, ಡಿ. 9ರ ಶುಕ್ರವಾರದಿಂದ ಚಿತ್ರ ಸ್ಟ್ರೀಮ್​ ಆಗಲಿದೆ.

    ಇದನ್ನೂ ಓದಿ: ಹರಿಪ್ರಿಯಾ-ವಸಿಷ್ಠ ಪ್ರೀತಿಗೆ ಕನ್ನಡಿ ಹಿಡಿದಿದ್ದು ಕ್ರಿಸ್ಟಲ್​ ಅಂತೆ … ಯಾರು ಈ ಕ್ರಿಸ್ಟಲ್​?

    ಇನ್ನು, ಸಮಂತಾ ಅಭಿನಯದ ತೆಲುಗು ಚಿತ್ರವು ನ.11ರಂದು ನ.11ರಂದು ಐದು ಭಾಷೆಗಳಲ್ಲಿ ಪ್ಯಾನ್​ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಿತ್ತು. ಈ ಚಿತ್ರಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುವುದರ ಜತೆಗೆ, ಚಿತ್ರವನ್ನು ನೋಡಿದವರು ಇದು ಸಮಂತಾ ಅಭಿನಯದ ಬೆಸ್ಟ್​ ಚಿತ್ರ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈಗ ಈ ಚಿತ್ರವು ಡಿ.9ರಂದು ಅಮೇಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾಗುತ್ತಿದೆ.

    ಹೊಂಬಾಳೆ ಫಿಲಂಸ್​ ನಿರ್ಮಾಣದ ಬಾಲಿವುಡ್​ ಚಿತ್ರದಲ್ಲಿ ಶಾರೂಖ್​ ಖಾನ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts