More

    17ರ ವಿದ್ಯಾರ್ಥಿ ಜತೆ ಶಿಕ್ಷಕಿಯ ಲವ್ವಿಡವ್ವಿ? ಬಾಯ್​ಫ್ರೆಂಡ್​ನಿಂದ ಘೋರ ಕೃತ್ಯ, ತನಿಖೆ ದಿಕ್ಕು ತಪ್ಪಿಸಲು ಅಲ್ಲಾ ಹೆಸರು ದುರ್ಬಳಕೆ

    ಲಖನೌ: ಶಿಕ್ಷಕಿ ಮತ್ತು ಆಕೆಯ ಬಾಯ್​ಫ್ರೆಂಡ್​ ಸೇರಿ 17 ವರ್ಷದ ವಿದ್ಯಾರ್ಥಿಯನ್ನು ಕೊಂದು, ಪೊಲೀಸರ ತನಿಖೆಯ ದಿಕ್ಕು ತಪ್ಪಿಸುವ ದುರುದ್ದೇಶದಿಂದ ಪತ್ರವೊಂದರಲ್ಲಿ ಅಲ್ಲಾಹು ಅಕ್ಬರ್​ ಎಂದು ಬರೆದಿದ್ದರು ಎಂದು ಕಾನ್ಪುರ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

    ಪ್ರಕರಣವನ್ನು ಅಪಹರಣ ಎಂದು ಬಿಂಬಿಸಲು ಶಿಕ್ಷಕಿ ಮತ್ತು ಆಕೆಯ ಬಾಯ್​ಫ್ರೆಂಡ್​ ಕೊಲೆಯಾದ ವಿದ್ಯಾರ್ಥಿಯ ಮನೆಗೆ ಬೆದರಿಕೆ ಪತ್ರವನ್ನು ಕಳುಹಿಸಿದ್ದರು. ಆರೋಪಿಗಳನ್ನು ಶಿಕ್ಷಕಿ ರಚಿತಾ ಮತ್ತು ಆಕೆಯ ಬಾಯ್​ಫ್ರೆಂಡ್​ ಪ್ರಭಾತ್​ ಶುಕ್ಲಾ ಎಂದು ಗುರುತಿಸಲಾಗಿದೆ. ಇಬ್ಬರಿಗೂ ಸಹಾಯ ಮಾಡಿದ ಮತ್ತೊಬ್ಬ ಆರೋಪಿ ಆರ್ಯನ್​ ಕೂಡ ಬಂಧನವಾಗಿದ್ದಾನೆ.

    ಪ್ರಭಾತ್​ ಶುಕ್ಲನ ಮನೆಯಲ್ಲಿ ವಿದ್ಯಾರ್ಥಿಯ ಮೃತದೇಹ ಪತ್ತೆಯಾದ ಬಳಿಕ ಆತನನ್ನು ಬಂಧಿಸಲಾಯಿತು. ಶಿಕ್ಷಕಿಯೊಂದಿಗೆ ವಿದ್ಯಾರ್ಥಿ ಅಕ್ರಮ ಸಂಬಂಧ ಹೊಂದಿದ್ದ ಹಿನ್ನೆಲೆಯ ಪ್ರಿಯಕರ ಆತನನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕೊಲೆಯಾದ ವಿದ್ಯಾರ್ಥಿ ಕಾನ್ಪರದ ಪ್ರಖ್ಯಾತ ಜವಳಿ ಉದ್ಯಮಿಯ ಪುತ್ರ. ಕೋಚಿಂಗ್ ತರಗತಿಗೆಂದು ಸಂಜೆ ಸ್ಕೂಟರ್‌ನಲ್ಲಿ ಮನೆಯಿಂದ ಹೊರಟ ವಿದ್ಯಾರ್ಥಿ ವಾಪಸ್ ಮನೆಗೆ ಬಂದಿಲ್ಲ ಎಂದು ಕುಟುಂಬಸ್ಥರು ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

    ಇದಕ್ಕೂ ಮುನ್ನ ವ್ಯಕ್ತಿಯೊಬ್ಬ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಸ್ಕೂಟರ್‌ನಲ್ಲಿ ವಿದ್ಯಾರ್ಥಿಯ ಮನೆಗೆ ಆಗಮಿಸಿ, ತಮ್ಮ ಮಗನನ್ನು ಸುರಕ್ಷಿತವಾಗಿ ಹಿಂದಿರುಗಿಸಲು 30 ಲಕ್ಷ ರೂ. ನೀಡಬೇಕೆಂದು ಬರೆದಿರುವ ಪತ್ರವನ್ನು ಎಸೆದು ಪರಾರಿಯಾಗಿದ್ದ. ಆ ಪತ್ರದಲ್ಲಿ ಅಲ್ಲಾಹು ಅಕ್ಬರ್​ ಎಂತಲೂ ಬರೆಯಲಾಗಿತ್ತು. ಅಲ್ಲಾನಲ್ಲಿ ನಂಬಿಕೆ ಇಡಿ ಎಂಬ ಪದವೂ ಇತ್ತು. ಇಡೀ ತನಿಖೆಯ ದಿಕ್ಕು ತಪ್ಪಿಸಲು ಪತ್ರದಲ್ಲಿ ಅಪಹರಣ ವಿಚಾರವನ್ನು ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ತನಿಖೆಯ ಸಂದರ್ಭದಲ್ಲಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳು ವಿಶ್ಲೇಷಿಸಿದಾಗ ಕೊಲೆಯಾದ ವಿದ್ಯಾರ್ಥಿ, ಶುಕ್ಲನೊಂದಿಗೆ ಸ್ಟೋರ್ ರೂಮ್‌ಗೆ ಸ್ವಇಚ್ಛೆಯಿಂದ ಬಂದಿದ್ದಾನೆ ಎಂದು ಪೊಲೀಸರಿಗೆ ತಿಳಿದು ಬಂದಿದೆ. ನಿಮ್ಮ ಶಿಕ್ಷಕಿ ರಚಿತಾ ನಿನ್ನನ್ನು ಕರೆದುಕೊಂಡು ಬಾ ಎಂದು ಹೇಳಿದ್ದಾರೆ ಎಂದು ಹೇಳಿ ಆತನನ್ನು ಶುಕ್ಲ ಕರೆದುಕೊಂಡು ಹೋಗಿದ್ದ. ಇಬ್ಬರು ಒಟ್ಟಿಗೆ ರೂಮ್​ ಪ್ರವೇಶ ಮಾಡಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿದೆ. ಆದಾಗ್ಯೂ, ನಿಮಿಷಗಳ ನಂತರ, ಶುಕ್ಲಾ ಸ್ಟೋರ್ ರೂಂನಿಂದ ಹೊರಬಂದರೆ, ಹುಡುಗ ಮಾತ್ರ ಹೊರಬರಲಿಲ್ಲ. ನಂತರ ಆರೋಪಿ ಬಟ್ಟೆ ಬದಲಿಸಿ ಬಾಲಕನ ಸ್ಕೂಟರ್‌ನಲ್ಲಿ ಹೋಗುತ್ತಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದೇ ಸಂದರ್ಭದಲ್ಲಿ ರಚಿತಾ, ಅಪರಾಧದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾಳೆ ಮತ್ತು ಬೆದರಿಕೆ ಪತ್ರದ ಕೈಬರಹವು ತನ್ನ ಗೆಳೆಯ ಪ್ರಭಾತ್ ಶುಕ್ಲಾ ಅವರದ್ದಾಗಿದೆ ಎಂದು ಬಹಿರಂಗಪಡಿಸಿದ್ದಾಳೆ. ಪ್ರಾಥಮಿಕ ತನಿಖೆಯ ಪ್ರಕಾರ ಶಿಕ್ಷಕ ಮತ್ತು ವಿದ್ಯಾರ್ಥಿ ನಡುವಿನ ವಿವಾಹೇತರ ಸಂಬಂಧವೇ ಕೊಲೆಯ ಹಿಂದಿನ ಉದ್ದೇಶ ಎಂದು ತೋರುತ್ತದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. (ಏಜೆನ್ಸೀಸ್​)

    ಶ್ರೀಲಂಕಾಗೂ ಆಫರ್ ಕೊಟ್ಟ ಶಿನ್ವಾರಿ: ಈ ಆಫರ್​ ಕೇಳಿ ಲಂಕನ್ನರು ಸೋಲೋದು ಗ್ಯಾರಂಟಿ ಎಂದ ನೆಟ್ಟಿಗರು!

    ಚಿರತೆ ಸೆರೆಗೆ ಆಧುನಿಕ ತಂತ್ರಜ್ಞಾನ ಬಳಕೆ: ಈಶ್ವರ ಖಂಡ್ರೆ

    ಮಹಾರಾಷ್ಟ್ರದಲ್ಲಿ ತೀವ್ರ ಸ್ವರೂಪ ಪಡೆದ ಮರಾಠ ಮೀಸಲು ಕಿಚ್ಚು: ಬೆಂಗ್ಳೂರು-ಮುಂಬೈ ಹೆದ್ದಾರಿ ತಡೆ, ರೈಲು ಸಂಚಾರ ಸ್ಥಗಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts