More

    ಕಣ್ಣೂರಹಳ್ಳಿ ಕೆರೆ ಮಣ್ಣಿಗೆ ಕನ್ನ, ಇಟ್ಟಿಗೆ ಕಾರ್ಖಾನೆ, ಮನೆ ನಿರ್ಮಾಣಕ್ಕೆ ಮಾರಾಟ, ಗ್ರಾಮಸ್ಥರ ಆತಂಕ

    ಸೂಲಿಬೆಲೆ: ಹೊಸಕೋಟೆ ತಾಲೂಕಿನ ಕಣ್ಣೂರಹಳ್ಳಿ ಕೆರೆ ಒಡಲು ಬರಿದಾಗುತ್ತಿದೆ. ಹಾಡಹಗಲೇ ಅಕ್ರಮವಾಗಿ ಮಣ್ಣು ಸಾಗಣೆ ನಡೆಯುತ್ತಿದ್ದರೂ ಅಧಿಕಾರಿಗಳು ತಡೆಯಲು ಮುಂದಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
    30 ಎಕರೆಗೂ ಅಧಿಕವಾಗಿರುವ ಕೆರೆಯ ಮಣ್ಣು ಬಗೆದು ಸಾಗಿಸುವ ದಂಧೆ ಅವ್ಯಾಹತವಾಗಿದೆ. ಕೆರೆಯಂಗಳದಲ್ಲಿ ದೊಡ್ಡ ಕಂದಕ ನಿರ್ಮಾಣವಾಗಿವೆ. ಆಳವಾದ ಕಂದಕಗಳಲ್ಲಿ ನೀರು ತುಂಬಿಕೊಂಡಿದ್ದು, ದನಗಾಹಿಗಳು ಬಿದ್ದು ಸಾವನ್ನಪ್ಪಿರುವ ಘಟನೆಯೂ ನಡೆದಿದೆ ಎನ್ನಲಾಗಿದೆ.

    ವಿದ್ಯುತ್ ಕಂಬಕ್ಕೂ ಕುತ್ತು: ಕೆರೆಯಲ್ಲಿ ವಿದ್ಯುತ್ ಕಂಬಗಳು ಹಾದುಹೋಗಿವೆ. ಮಣ್ಣು ತೆಗೆಯುತ್ತಿರುವುದರಿಂದ ವಿದ್ಯುತ್ ಕಂಬಗಳು ಬೀಳುವ ಹಂತದಲ್ಲಿವೆ. ಬೆಸ್ಕಾಂ ಅಧಿಕಾರಿಗಳು ಈ ಬಗ್ಗೆ ಗಮನ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಕೆರೆ ಒತ್ತುವರಿ: ಕೆರೆ ಕಣ್ಣೂರಹಳ್ಳಿಗೆ ಹೊಂದಿಕೊಂಡಂತಿದ್ದು ಕೆಲವರು ಕೆರೆಯಂಗಳ ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಿಕೊಂಡಿರುವುದಲ್ಲದೆ ಅಕ್ರಮ ದಾಖಲೆ ಸೃಷ್ಟಿಸಿದ್ದಾರೆ. ಈ ಬಗ್ಗೆ ಗ್ರಾಮದ ಕೆಲವು ಮುಖಂಡರು ಸಣ್ಣ ನೀರಾವರಿ ಇಲಾಖೆ, ಲೋಕಾಯುಕ್ತ, ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.

    ದಂಧೆಕೋರರು ಕೆರೆಯಿಂದ ಲೂಟಿ ಮಾಡುತ್ತಿರುವ ಮಣ್ಣನ್ನು ಇಟ್ಟಿಗೆ ಕಾರ್ಖಾನೆಗಳಿಗೆ, ಮನೆ ನಿರ್ಮಾಣಕ್ಕೆ ಮಾರಿಕೊಳ್ಳುತ್ತಿದ್ದಾರೆ. ಟ್ರ್ಯಾಕ್ಟರ್ ಲೋಡ್‌ಗೆ ಇಂತಿಷ್ಟು ಎಂದು ಹಣ ಮಾಡುತ್ತಿದ್ದಾರೆ. ದಂಧೆಕೋರರಿಂದ ಗ್ರಾಪಂ ಜನಪ್ರತಿನಿಧಿಗಳು ಕೈಜೋಡಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ.

    ಸ್ಥಳೀಯ ಗ್ರಾಪಂನವರು ಶಾಮೀಲಾಗಿ ಕೆರೆ ಒಡಲಿಗೆ ಕನ್ನ ಹಾಕುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಕೆರೆಯಲ್ಲಿ ದೊಡ್ಡ ದೊಡ್ಡ ಕಂದಕಗಳು ನಿರ್ಮಾಣವಾಗಿದೆ. ಜತೆಗೆ ಕೊಳಚೆ ನೀರು ಸಂಗ್ರಹ ತೊಟ್ಟಿಯಾಗಿ ರೂಪ ಪಡೆಯುತ್ತಿದೆ.
    ಶ್ರೀಧರ್, ಕಣ್ಣೂರಹಳ್ಳಿ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts