More

    ಮಗು ಸತ್ತೇ ಹೋಯ್ತು ಅಂತ ಅಳುತ್ತಿದ್ದವರಿಗೆ ಕಾದಿತ್ತು ಅಚ್ಚರಿ! ಪೊಲೀಸ್ ಪವಾಡದಿಂದ ಮಗುವಿಗೆ ಸಿಕ್ತು ಮರುಜನ್ಮ

    ಕಣ್ಣೂರು: ಮಗು ಸತ್ತೇ ಹೋಗಿದೆ ಅಂದುಕೊಂಡಿದ್ದರು. ಆದರೆ ಪೊಲೀಸ್​ ಅಧಿಕಾರಿಯೊಬ್ಬರು ಕೊನೇ ಕ್ಷಣದಲ್ಲಿ ಸಿಪಿಆರ್​ ಮಾಡುವ ಮೂಲಕ 9 ತಿಂಗಳ ಮಗುವಿನ ಮರುಜನ್ಮ ನೀಡಿದ್ದಾರೆ.

    ಮುಹಮ್ಮದ್​ ಫಾಜಿಲ್​ ಅವರು ಕೊಲಚೇರಿಯ ಪಟ್ಟಾಯಂನಲ್ಲಿ ಹೊಸ ಪಾಸ್​ಪೋರ್ಟ್ಸ್​ ಪರಿಶೀಲನೆ ನಡೆಸುತ್ತಿದ್ದು. ಈ ವೇಳೆ ಮನೆಯೊಂದರಿಂದ ಜೋರಾಗಿ ಅಳುವ ಶಬ್ದ ಕೇಳಿಸಿತು. ತಕ್ಷಣ ಫಾಜಿಲ್​ ಅಲ್ಲಿಗೆ ಹೋದರು. ಆ ಕ್ಷಣದಲ್ಲಿ 9 ತಿಂಗಳು ಮಗು ಪ್ರಜ್ಞೆಯಿಲ್ಲದೆ ಬಿದ್ದಿತ್ತು. ಕುಟುಂಬಸ್ಥರು ಮತ್ತು ಪಾಲಕರು ಮಗು ಸತ್ತಿದೆ ಎಂದು ಭಾವಿಸಿ ಅಳುತ್ತಿದ್ದರು.

    ಇದನ್ನೂ ಓದಿ: ಮದ್ವೆ ದಿನವೇ ಹೃದಯಾಘಾತಕ್ಕೆ ವಧು ಸಾವು: ನಿಲ್ಲದ ವಿವಾಹ, ಮೃತಳ ತಂಗಿಗೆ ತಾಳಿ ಕಟ್ಟಿದ ವರ!

    ಎಲ್ಲರು ಅಳುತ್ತಿರುವಾಗ ಪೊಲೀಸ್​ ಅಧಿಕಾರಿ ಫಾಜಿಲ್​ ಒಂದು ಪ್ರಯತ್ನ ಮಾಡೇ ಬಿಡೋಣ ಅಂತಾ ಮಗುವಿಗೆ ಸಿಪಿಆರ್​ ಮಾಡಿದರು. ಪವಾಡ ಎಂಬಂತೆ ಮಗು ಸಿಪಿಆರ್​​ಗೆ ಸ್ಪಂದಿಸಿ, ಮತ್ತೆ ಉಸಿರಾಡಲು ಆರಂಭಿಸಿತು. ಈ ವೇಳೆ ಅಳುತ್ತಿದ್ದವರಲ್ಲ ತಕ್ಷಣ ಅಳು ನಿಲ್ಲಿಸಿ ಮಗುವನ್ನು ನೋಡಲು ಧಾವಿಸಿದರು.

    ಸಿಪಿಆರ್​ ಬಳಿಕ ಮಗುವನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಇದೀಗ ಮಗು ಚೇತರಿಸಿಕೊಳ್ಳುತ್ತಿದೆ. ಸಮಯ ಪ್ರಜ್ಞೆ ಮೆರೆದ ಫಾಜಿಲ್​ಗೆ ಪೊಲೀಸ್​ ಇಲಾಖೆ ಸೇರಿದಂತೆ ಕೇರಳದ ಜನರು ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ. (ಏಜೆನ್ಸೀಸ್​)

    7.9 ಲಕ್ಷ ರೂ. ಖರ್ಚು ಮಾಡಿ ವಿಶ್ವದಲ್ಲೇ ಅತಿ ದೊಡ್ಡ ತುಟಿ ಪಡೆದ ಯುವತಿ!

    ಸಲಿಂಗ ಕಾಮದ ಅನುಭವವಿದೆಯೇ? ನೆಟ್ಟಿಗನ ಪ್ರಶ್ನೆಗೆ ಅನಸೂಯ ಕೊಟ್ಟ ಬೋಲ್ಡ್​ ಉತ್ತರ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts