More

    ಕ್ವಾರಂಟೈನ್​ಗೆ ಒಳಗಾಗದ ಗಾಯಕಿ ಕನ್ನಿಕಾ ಕಪೂರ್​ ಪರವಾಗಿ ನಿಂತ ಕೆಲವು ನೆಟ್ಟಿಗರು: ಸಿಟ್ಟು ಬಿಟ್ಟು ಸಹಾನುಭೂತಿ ತೋರಿಸಿ ಎಂದ ಗುಂಪು

    ಲಖನೌ : ಕರೊನಾ ವೈರಸ್​ ಸೋಂಕು ಹರಡಿರುವುದು ದೃಢಪಟ್ಟರೂ ಗಾಯಕಿ ಕನ್ನಿಕಾ ಕಪೂರ್​ ಕ್ವಾರಂಟೈನ್​ಗೆ ಒಳಪಡದ ಹಿನ್ನೆಲೆಯಲ್ಲಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

    ಆದರೆ ಮತ್ತೊಂದು ಗುಂಪು ಕನ್ನಿಕಾ ಕಪೂರ್​ ಅವರ ಪರವಾಗಿ ನಿಂತಿದೆ. ಹಲವು ಕಷ್ಟಗಳನ್ನು ಅನುಭವಿಸಿರುವ ಕನ್ನಿಕಾ ಕಪೂರ್​ ಅವರನ್ನು ಟೀಕಿಸಬೇಡಿ. ಅವರಿಗೆ ಸಹಾನುಭೂತಿ ತೋರಿಸಿ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.

    ಲಂಡನ್​ನಲ್ಲಿ ಇದ್ದ ಕನ್ನಿಕಾ ಕಪೂರ್​ ಇತ್ತೀಚೆಗೆ ಅವರು ಲಖನೌಗೆ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಪಟ್ಟ ವೇಳೆ ಕರೊನಾ ಸೋಂಕು ಇರುವುದು ಪತ್ತೆಯಾಗಿ ಕ್ವಾರಂಟೈನ್​ನಲ್ಲಿ ಇರುವಂತೆ ವೈದ್ಯರು ಸೂಚಿಸಿದ್ದರು. ಇದನ್ನು ಧಿಕ್ಕರಿಸಿ ಅವರು ಹಲವು ಸಭೆ ಸಮಾರಂಭಗಳಲ್ಲಿ ಪಾಲ್ಗೊಂಡಿದ್ದರು.

    ಲಖನೌನಲ್ಲಿ ನಡೆದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಅವರು ರಾಜಸ್ಥಾನ ಮಾಜಿ ಸಿಎಂ ವಸುಂಧರಾ ರಾಜೆ ಅವರ ಪುತ್ರ ಸಂಸದ ದುಶ್ಯನ್​ಸಿಂಗ್​ ಸೇರಿದಂತೆ ಹಲವರು ಕನ್ನಿಕಾ ಕಪೂರ್​ ಸಂಪರ್ಕಕ್ಕೆ ಬಂದಿದ್ದರು. ಕನ್ನಿಕಾ ಕಪೂರ್​ ಅವರಿಗೆ ಕರೊನಾ ಸೋಂಕು ಇರುವುದು ಬಯಲಾದ ನಂತರ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

    ಸೋಂಕು ಹರಡಿರುವುದು ಗೊತ್ತಿದ್ದರೂ ಅವರು ಜನರನ್ನು ಸಂಪರ್ಕಿಸಿರುವುದು ಸರಿಯಲ್ಲ ಎಂದಿದ್ದರು. ಆದರೆ ಕೆಲವು ಮಂದಿ ಅವರ ಪರವಾಗಿ ನಿಂತು ಮೂವರು ಮಕ್ಕಳ ತಾಯಿಯಾಗಿ ಈಗ ಪತಿಯಿಂದ ಬೇರ್ಪಟ್ಟಿರುವ ಕನ್ನಿಕಾ ಕಪೂರ್​ ಬಗ್ಗೆ ಕೋಪ ಬೇಡ. ಸಹಾನುಭೂತಿ ಇರಲಿ ಎಂದು ಟ್ರೋಲ್​ ಮಾಡಿದ್ದಾರೆ. (ಏಜೆನ್ಸೀಸ್​)

    ಕರೊನಾ ವೈರಸ್​ ಸೋಂಕಿತ ಬಾಲಿವುಡ್​ ಗಾಯಕಿ ವಿರುದ್ಧ ವೈದ್ಯರಿಂದ ಸ್ಪೋಟಕ ಮಾಹಿತಿ ಬಹಿರಂಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts