More

    ಜುಲೈಗೆ ಹೊಸಬರ ವೇಷ; ಶೂಟಿಂಗ್​ ಮುಕ್ತಾಯ

    ಬೆಂಗಳೂರು: ಹಂಸಿನಿ‌ ಕ್ರಿಯೇಷನ್ಸ್ ಲಾಂಛನದಲ್ಲಿ ರಾಘು ಡಿ.ಜಿ‌ ಅವರು ನಿರ್ಮಿಸುತ್ತಿರುವ ವೇಷ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ‌ಸದ್ಯದಲ್ಲೇ ಮಾತಿನ‌ ಜೋಡಣೆ ಆರಂಭವಾಗಲಿದೆ. ಜುಲೈ ವೇಳೆಗೆ ಚಿತ್ರ ತೆರೆಗೆ ಬರಲಿದೆ.

    ಇದನ್ನೂ ಓದಿ: ಲಕ್ಷುರಿ ಕ್ಯಾರವಾನ್​ ಖರೀದಿಸಿದ ಮಹೇಶ್​ ಬಾಬು: ಟಾಲಿವುಡ್​ನಲ್ಲೇ ದುಬಾರಿ ವ್ಯಾನಿಟಿ ವ್ಯಾನ್​ ಇದು!

    ಚಿಕ್ಕಮಗಳೂರು, ತೀರ್ಥಹಳ್ಳಿ, ಶಿವಮೊಗ್ಗ, ಕುಂದಾಪುರ ಹಾಗೂ ಆಗುಂಬೆಯ ಸುಂದರ ಸ್ಥಳದಲ್ಲಿ ವೇಷ ಚಿತ್ರದ ಚಿತ್ರೀಕರಣ ನಡೆದಿದೆ. ಕನ್ನಡದ ಕೆಲವು ನಿರ್ದೇಶಕರ ಜೊತೆ ಕಾರ್ಯನಿರ್ವಹಿಸಿರುವ ಹಾಗೂ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಕೃಷ್ಣ ಈ ಚಿತ್ರದ ನಿರ್ದೇಶಕರು. ಕುತೂಹಲ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ವೇಷಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿದ್ದಾರೆ.

    ಮೂರು ಹಾಡುಗಳಿರುವ ಈ ಚಿತ್ರಕ್ಕೆ ಉತ್ತಮ್ ಸಾರಂಗ್ ಸಂಗೀತ ನೀಡಿದ್ದಾರೆ. ಸುರೇಂದ್ರ ಪಣಿಯೂರ್ ಛಾಯಾಗ್ರಹಣ, ಸನತ್ ಉಪ್ಪುಂದ ಸಂಕಲನ ಹಾಗೂ ಜಾಗ್ವಾರ್ ಸಣ್ಣಪ್ಪ ಅವರು ಸಾಹಸ ನಿರ್ದೇಶನವಿರುವ ವೇಷದ ಮಾತುಗಳನ್ನು ಪವನ್ ಕುಮಾರ್ ಬರೆದಿದ್ದಾರೆ.

    ಇದನ್ನೂ ಓದಿ: ಗಳಗಳನೇ ಅತ್ತ ಪ್ರಶಾಂತ್ ಸಂಬರಗಿ​: ಬಿಗ್​ಬಾಸ್​ ಮನೆಯಲ್ಲಿ ಅವರಿಗೆ ಕಾಡಿದ್ದೇನು?

    ರಘು ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿ ಸೌಖ್ಯ ಗೌಡ. ನಿಧಿ ಮಾರೊಲಿ, ಮಂಜು ಪಾವಗಡ, ಪ್ರಿಯಾಂಕ ಕಾಮತ್, ವಾಣಿಶ್ರೀ, ಜಯ್ ಶೆಟ್ಟಿ, ಶಿಲ್ಪ ಕುಮಟಾ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts