More

    ಕನ್ನಡ ಎಲ್ಲರನ್ನೂ ಒಗ್ಗೂಡಿಸುವ ಭಾಷೆ

    ಬೆಳಗಾವಿ: ಭಾಷೆ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಸಾಹಿತಿ ಡಾ.ಪಿ.ಜಿ.ಕೆಂಪಣ್ಣವರ ಹೇಳಿದರು. ಸಮೀಪದ ಬಸವನ ಕುಡಚಿಯ ಭರತೇಶ ಶಿಕ್ಷಣ ಸಂಸ್ಥೆಯ ಭರತೇಶ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯದ ಸಾಂಸ್ಕೃತಿಕ ವಿಭಾಗ ಹಾಗೂ ಭರತೇಶ ಕನ್ನಡ ಬಳಗದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸಿರಿಗನ್ನಡ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಕನ್ನಡ ಭಾಷೆ ಎಲ್ಲರನ್ನು ಒಗ್ಗೂಡಿಸುತ್ತದೆ. ಎಲ್ಲ ಸಮುದಾಯ, ಎಲ್ಲ ಭಾಷಿಕರು, ಎಲ್ಲ ಜಾತಿಯವರನ್ನೂ ಒಂದಾಗಿಸುವ ಶಕ್ತಿ ಕನ್ನಡ ಭಾಷೆಗಿದೆ ಎಂದರು. ಹಿರಿಯ ಕಲಾವಿದೆ ಶಾಂತಾ ಆಚಾರ್ಯ ಮಾತನಾಡಿ, ಕನ್ನಡ ಭಾಷೆಯು ಸಾಹಿತ್ಯದ ಜತೆಗೆ ಕಲೆಯಲ್ಲಿಯೂ ತನ್ನದೆಯಾದ ವಿಶೇಷ ಸ್ಥಾನಮಾನ ಪಡೆದುಕೊಂಡಿದೆ ಎಂದರು. ಪತ್ರಕರ್ತೆ ಸುನೀತಾ ದೇಸಾಯಿ, ಹಿರಿಯ ಪತ್ರಕರ್ತ ಕುಂತಿನಾಥ ಕಲಮನಿ ಮಾತನಾಡಿದರು.

    ಮಹಾ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷೆ ಡಾ. ಸಾವಿತ್ರಿ ದೊಡ್ಡಣ್ಣವರ ಅಧ್ಯಕ್ಷತೆ ವಹಿಸಿದ್ದರು. ಡಾ.ಆರ್.ಎಸ್.ಕುರ್ಸೆ, ಡಾ. ಶೈಲಾ ಉಡಚನಕರ, ಡಾ.ವಾಣಿ ಮಗದುಮ್ಮ, ಡಾ.ಗೀತಾ ಆದಿ, ಡಾ. ಬಸವರಾಜ ಆದಿ, ಡಾ.ದೀಪಕ, ಡಾ.ಜಮದಾಡೆ, ಡಾ.ಮಹೇಶ, ಡಾ.ಕವಿತಾ, ಡಾ.ವರೂರ, ಡಾ.ಗಾಯತ್ರಿ ಇತರರಿದ್ದರು.

    ವಿದ್ಯಾರ್ಥಿನಿ ಪ್ರಿಯಾ ಹಿತ್ತಲಕೇರಿ ಸ್ವಾಗತಿಸಿದರು. ಕಮಲಾಕ್ಷಿ ಪ್ರಾರ್ಥಿಸಿದರು. ಅಭಿನಯ ಹೆಬ್ಬಳ್ಳಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts