More

    ಮಾರ್ಚ್ 8 ರಂದು ಮಹಿಳೆಯರು ಈ ಸ್ಥಳಗಳಿಗೆ ಭೇಟಿ ಕೊಟ್ಟರೆ ಯಾವುದೇ ಶುಲ್ಕವಿಲ್ಲ, ಉಚಿತ

    ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನ (ಐಡಬ್ಲ್ಯೂಡಿ) ವನ್ನು ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ. ಮೊದಲು ಅಧಿಕೃತವಾಗಿ ಅಂತರಾಷ್ಟ್ರೀಯ ಮಹಿಳಾ ದಿನವನ್ನು 1975 ರಲ್ಲಿ ಆಚರಿಸಲಾಯಿತು. ಮಹಿಳಾ ದಿನಾಚರಣೆಯಂದು ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅಂದಹಾಗೆ ಈ ದಿನದಂದು, ಭಾರತದಲ್ಲಿ ಮಹಿಳೆಯರಿಗೆ ಉಚಿತ ಪ್ರವೇಶ ನೀಡುವ ಅನೇಕ ಸ್ಥಳಗಳಿವೆ. ನೀವೂ ಎಲ್ಲಿಗಾದರೂ ಪ್ರಯಾಣಿಸಲು ಯೋಜಿಸುತ್ತಿದ್ದರೆ, ಮಹಿಳಾ ದಿನದಂದು ಇಲ್ಲಿಗೆ ಹೋಗಿ.

    ಸಂಸ್ಕೃತಿ ಸಚಿವಾಲಯವು 2019 ರಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನದಂದು ಮಹಿಳೆಯರಿಗೆ ವಿಶೇಷ ಉಡುಗೊರೆಯನ್ನು ನೀಡಿತು. ಹೌದು, ಈ ದಿನದಂದು ಭಾರತೀಯ ಮಹಿಳಾ ಪ್ರವಾಸಿಗರಿಗೆ ಮಾತ್ರವಲ್ಲದೆ, ವಿದೇಶಿ ಮಹಿಳಾ ಪ್ರವಾಸಿಗರಿಗೆ ಸ್ಮಾರಕಗಳಿಗೆ ಭೇಟಿ ಕೊಡಲು ಉಚಿತ ಪ್ರವೇಶವನ್ನು ಅನುಮತಿಸಲಾಗಿದೆ. ಅಂದಿನಿಂದ, ಪ್ರತಿ ವರ್ಷ ಮಹಿಳೆಯರು ಯಾವುದೇ ಶುಲ್ಕವಿಲ್ಲದೆ ಭಾರತದ ಯಾವುದೇ ಸ್ಮಾರಕಕ್ಕೆ ಭೇಟಿ ನೀಡಬಹುದು.

    ತಾಜ್ ಮಹಲ್
    ಅಂದು ತಾಜ್ ಮಹಲ್ ನೋಡಲು ಹೋದರೆ 200 ರೂ. ಖರ್ಚು ಮಾಡುವ ಅಗತ್ಯವಿಲ್ಲ. ತಾಜ್ ಮಹಲ್ ಪ್ರವೇಶಕ್ಕೆ ಪ್ರತಿಯೊಬ್ಬ ವ್ಯಕ್ತಿಯೂ 50 ರೂ. ಕೊಡಬೇಕು. ತಾಜ್ ಮಹಲ್‌ನ ಮುಖ್ಯ ಸಮಾಧಿಯನ್ನು ಒಳಗಿನಿಂದ ಮತ್ತು ಮೇಲಿನಿಂದ ನೋಡಬೇಕಾದರೆ, ಇದಕ್ಕಾಗಿ ನೀವು ಪ್ರತ್ಯೇಕವಾಗಿ 200 ರೂ. ಕೊಡಬೇಕು. ಆದರೆ ಅಂತರರಾಷ್ಟ್ರೀಯ ಮಹಿಳಾ ದಿನದಂದು ಇದನ್ನು ವೀಕ್ಷಿಸಲು ಮಹಿಳೆಯರು ಶುಲ್ಕ ಪಾವತಿಸಬೇಕಾಗಿಲ್ಲ.

    ಕೆಂಪು ಕೋಟೆ
    ಕೆಂಪು ಕೋಟೆಗೆ ಭೇಟಿ ಕೊಡಲು ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ವ್ಯಕ್ತಿಗೆ 60 ರೂ.ನಿಗದಿಪಡಿಸಲಾಗಿದೆ. ಶನಿವಾರ ಮತ್ತು ಭಾನುವಾರವಾದರೆ 80 ರೂ. ಆದರೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಮಹಿಳೆಯರಿಂದ ಪ್ರವೇಶ ಶುಲ್ಕವನ್ನು ಪಡೆಯುವುದಿಲ್ಲ.

    ಕುತುಬ್ ಮಿನಾರ್‌
    ಕುತುಬ್ ಮಿನಾರ್​​​ಗೆ ಬೇಟಿ ಕೊಡಲು ಪ್ರತಿ ವ್ಯಕ್ತಿಗೆ 35 ರಿಂದ 40 ರೂ. ಇದಲ್ಲದೇ ವಿದೇಶಿಗರಿಂದ 500 ರೂ. ಆದರೆ ಅಂತರರಾಷ್ಟ್ರೀಯ ಮಹಿಳಾ ದಿನದಂದು ಕುತುಬ್ ಮಿನಾರ್‌ಗೆ ಎಲ್ಲಾ ಮಹಿಳೆಯರಿಗೆ ಪ್ರವೇಶವನ್ನು ಉಚಿತವಾಗಿ ನೀಡಲಾಗುತ್ತದೆ.

    ಅಂತೆಯೇ, ಅಂತರರಾಷ್ಟ್ರೀಯ ಮಹಿಳಾ ದಿನದಂದು ಮಹಿಳೆಯರು ಪ್ರವೇಶ ಶುಲ್ಕವನ್ನು ಪಾವತಿಸಬೇಕಾಗಿಲ್ಲದ ಅನೇಕ ಸ್ಮಾರಕಗಳಿವೆ ಎಂಬುದನ್ನು ನೀವು ಗಮನಿಸಬೇಕು.

    ವಿರಾಟ್ ಕೊಹ್ಲಿ ತನ್ನ ಮಗನೊಂದಿಗಿರುವ ಈ ಫೋಟೋವನ್ನು ನೀವು ನೋಡಿದ್ದೀರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts