More

  ವಿರಾಟ್ ಕೊಹ್ಲಿ ತನ್ನ ಮಗನೊಂದಿಗಿರುವ ಈ ಫೋಟೋವನ್ನು ನೀವು ನೋಡಿದ್ದೀರಾ?

  ನವದೆಹಲಿ: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಎರಡನೇ ಮಗುವಿನ ಆಗಮನದ ಶುಭ ಸುದ್ದಿಯನ್ನು ಘೋಷಿಸಿದಾಗಿನಿಂದ, ಅಭಿಮಾನಿಗಳು ನಿರಂತರವಾಗಿ ಅಭಿನಂದಿಸುತ್ತಿದ್ದಾರೆ. ಜೂನಿಯ‌ರ್ ಕೊಹ್ಲಿ ಬಂದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಹೆಚ್ಚಾಗಿದ್ದು, ಸಾವಿರಾರು ಫ್ಯಾನ್ ಪೇಜ್ ಗಳು ಸೃಷ್ಟಿಯಾಗಿವೆ. ಈಗ AI ಕ್ರಿಯೇಟ್ ಮಾಡಿರುವ ವಿರಾಟ್ ಮತ್ತು ಮಗನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

  ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳಿಗೆ ದೊಡ್ಡ ಸರ್​​​​ಪ್ರೈಸ್ ನೀಡಿದರು. ಜನವರಿ 15 ರಂದು ತಮ್ಮ ಮಗ ಜನಿಸಿದರು ಎಂದು ರಿವೀಲ್ ಮಾಡಿದರು. ತಮ್ಮ ಮಗನಿಗೆ ಕೊಹ್ಲಿ ದಂಪತಿ ಅಕಾಯ್​ ಕೊಹ್ಲಿ ಎಂದು ಹೆಸರಿಸಿದ್ದು, ಸಾಕಷ್ಟು ವಿಶಿಷ್ಟವಾಗಿದೆ. ವಿರಾಟ್-ಅನುಷ್ಕಾ ತಮ್ಮ ನವಜಾತ ಶಿಶುವಿನ ಲುಕ್ ತೋರಿಸದಿದ್ದರೂ, ಅಭಿಮಾನಿಗಳು ತಂತ್ರಜ್ಞಾನವನ್ನು ಬಳಸಿಕೊಂಡು ಜೂನಿಯ‌ರ್ ಕೊಹ್ಲಿಯ ಫೋಟೋಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದ್ದಾರೆ.

  ವಿರಾಟ್ ಕೊಹ್ಲಿ ತನ್ನ ಮಗನೊಂದಿಗಿರುವ ಈ ಫೋಟೋವನ್ನು ನೀವು ನೋಡಿದ್ದೀರಾ?

  Al ಫೋಟೋ ವೈರಲ್
  ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಫೋಟೋದಲ್ಲಿ, ಕಿಂಗ್ ಕೊಹ್ಲಿ ನಿಜವಾಗಿಯೂ ರಾಜನಂತೆ ಕಾಣುತ್ತಿದ್ದಾರೆ. ತಲೆಯ ಮೇಲೆ ಕಿರೀಟವನ್ನು ಸಹ ಧರಿಸಿದ್ದಾರೆ. ಕುತ್ತಿಗೆಯಲ್ಲಿ ಭಾರವಾದ ಆಭರಣಗಳು ಮತ್ತು ಕಿವಿಯಲ್ಲಿ ಕಿವಿಯೋಲೆಗಳಿವೆ. ಕೊಹ್ಲಿ ಪುಟ್ಟ ಮಗುವನ್ನು ಕೈಯಲ್ಲಿ ಹಿಡಿದಿದ್ದಾರೆ. ತನ್ನ ಮಗನತ್ತ ಪ್ರೀತಿಯಿಂದ ನೋಡುತ್ತಿರುವುದು ಫೋಟೋದಲ್ಲಿ ಕಂಡುಬಂದಿದೆ. ಇಲ್ಲಿರುವ ವಿಸ್ಮಯಕಾರಿ ಸಂಗತಿಯೆಂದರೆ ಟೀಂ ಇಂಡಿಯಾದ ನೀಲಿ ಜೆರ್ಸಿಯಂತೆಯೇ ಅಕಾಯ್ ಡ್ರೆಸ್ ತೊಟ್ಟಿದ್ದಾರೆ.

  ಅಭಿಮಾನಿಗಳು ಕ್ರಿಯೇಟ್ ಮಾಡಿರುವ ವಿರಾಟ್ ಮತ್ತು ಮಗುವಿನ ಫೋಟೋಗಳು ವೈರಲ್ ಆಗುತ್ತಿವೆ. ಕಿಂಗ್ ಕೊಹ್ಲಿ ಪುತ್ರನನ್ನು ಪ್ರಿನ್ಸ್ ಕೊಹ್ಲಿ ಎಂದು ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಿದ್ದಾರೆ. ಮತ್ತೊಂದು ಫೋಟೋದಲ್ಲಿ, ವಿರಾಟ್ ಟೀಮ್ ಇಂಡಿಯಾದ ಜೆರ್ಸಿಯಲ್ಲಿ ಮೈದಾನದಲ್ಲಿ ನಿಂತಿರುವಂತೆ ಕಾಣಿಸುತ್ತದೆ. ತನ್ನ ಹೆಸರಿನ ಜರ್ಸಿಯನ್ನು ಧರಿಸಿ, ಮಡಿಲಲ್ಲಿ ಮಗುವನ್ನು ಹಿಡಿದಿದ್ದಾರೆ.

  ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಎರಡನೇ ಮಗುವಿನ ಬಗ್ಗೆ ಹಲವು ದಿನಗಳಿಂದ ಊಹಾಪೋಹಗಳು ಇದ್ದವು. ನಂತರ ನಿನ್ನೆ ಅಂದರೆ ಫೆಬ್ರವರಿ 20 ರಂದು ಇಬ್ಬರೂ ಸಾಮಾಜಿಕ ಮಾಧ್ಯಮದ ಮೂಲಕ ಸುದ್ದಿಯನ್ನು ಖಚಿತಪಡಿಸಿದರು. ಫೆಬ್ರವರಿ 15 ರಂದು ತಮ್ಮ ಎರಡನೇ ಮಗುವಿನ ಆಗಮನವಾಯಿತು ಎಂದು ಘೋಷಿಸಿದರು. ವಮಿಕಾ ಅವರ ಕಿರಿಯ ಸಹೋದರ ಜಗತ್ತಿಗೆ ಬಂದಿದ್ದಾನೆ ಎಂದು ಬರೆದು ಅವರು ಪೋಸ್ಟ್ ಮಾಡಿದ್ದಾರೆ.

  “ಅವರ ಭಾವನೆಗಳನ್ನು ನೋಯಿಸಿದ್ದರೆ ಕ್ಷಮಿಸಿ”: ತ್ರಿಷಾ ಬಳಿ ಕ್ಷಮೆಯಾಚಿಸಿದ ತಮಿಳುನಾಡಿನ ರಾಜಕಾರಣಿ ಎವಿ ರಾಜು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts