More

  ಬಿಜೆಪಿ ಅಭ್ಯರ್ಥಿ ಸಚ್ಚಿದಾನಂದ ಪರ ಕಿರುತೆರೆ ಕಲಾವಿದರಿಂದ ಮತಯಾಚನೆ

  ಮಂಡ್ಯ: ಶ್ರೀರಂಗಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಇಂಡುವಾಳು ಸಚ್ಚಿದಾನಂದ ಪರವಾಗಿ ಕಿರುತೆರೆ ಕಲಾವಿದರು ಹಲವೆಡೆ ಮಯಾಚನೆ ಮಾಡಿದರು.
  ತಾಲೂಕಿನ ಕಾರಸವಾಡಿ, ಸಂತೆಕಸಲಗೆರೆ, ಹನಿಯಂಬಾಡಿ, ಮಂಗಲ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಿರುತೆರೆ ಕಲಾವಿದರಾದ ಪದ್ಮಜಾ ರಾವ್, ನೇಹಾಗೌಡ, ರಾಘವೇಂದ್ರ, ಚಂದು ಸೇರಿದಂತೆ ಹಲವರು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಮಾತ್ರವಲ್ಲದೆ ಎತ್ತಿನಗಾಡಿಯಲ್ಲಿ ತೆರಳಿ ಮತಯಾಚಿಸುವ ಮೂಲಕ ಗಮನಸೆಳೆದರು.
  ಅಭ್ಯರ್ಥಿ ಇಂಡುವಾಳು ಸಚ್ಚಿದಾನಂದ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ, ರಾಜ್ಯಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts