More

    ಕಿಟ್​ಗಳ ವ್ಯವಸ್ಥಿತ ವಿತರಣೆಗೆ ಸೂಚನೆ


    ಕಲಬುರಗಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ನೋಂದಣಿ ಪ್ರತಿನಿಧಿಗಳಿಗೆ ಕಿಟ್ ವಿತರಿಸುವ ಸಂದರ್ಭದಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದ ನೀಡದಂತೆ ವ್ಯವಸ್ಥಿತ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯರೂ ಆದ ನೋಂದಣಿ ಸಮಿತಿ ಅಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ ಸೂಚಿಸಿದರು.
    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ನೋಂದಣಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನಕ್ಕೆ ನೋಂದಣಿಯಾದ 22,252 ಮಂದಿಗೆ ಕಿಟ್ ವಿತರಿಸಲಾಗುವುದು. ವಿಶೇಷ ಪ್ರತಿನಿಧಿಗಳಿಗೆ 72 ಬ್ರಿಫ್ ಕೇಸ್ ನೀಡಲಾಗುವುದು. ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ಪೆನ್, ಬ್ಯಾಡ್ಜ್ ಮತ್ತು ನೋಟ್ಬುಕ್ಗಳನ್ನೊಳಗೊಂಡ ಗುಣಮಟ್ಟದ ಕಿಟ್ ವಿತರಿಸಲಾಗುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಫೆ.3 ಅಥವಾ 4ರೊಳಗಾಗಿ ಕಿಟ್ ನೀಡಲಾಗುವುದು. 5ರಂದು ಬೆಳಗ್ಗೆ 6ಕ್ಕೆ ನೋಂದಣಿ ಕೌಂಟರ್ ತೆರೆಯಬೇಕು ಎಂದು ಸೂಚನೆ ನೀಡಿದರು.
    ಜಿಪಂ ಸದಸ್ಯ ಶಿವರಾಜ ಪಾಟೀಲ್ ರದ್ದೇವಾಡಗಿ, ಶಿವರುದ್ರ ಭೀಣಿ, ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ಕೋಶಾಧ್ಯಕ್ಷ ದೌಲತ್ರಾವ್ ಮಾಲಿಪಾಟೀಲ್, ಅಧಿಕಾರಿಗಳಾದ ರಮೇಶ್ ಜಿ. ಸಂಗಾ, ಯುಸೂಫ್ ಅಲಿ, ಬನ್ಸಿ ಪವಾರ್, ವೆಂಕಯ್ಯ ಇನಾಂದಾರ್, ಪ್ರಮುಖರಾದ ಅಂಬಾಜಿ ಕೌವಲಗಾ, ಡಿ.ಎಂ. ನದಾಫ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts