More

    ಮೊದಲ ದಿನ ಭರಪೂರ ಕಾರ್ಯಕ್ರಮ


    ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಆವರಣದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣ (ಸಮಾನಾಂತರ ವೇದಿಕೆ-1)ದಲ್ಲಿ ಬುಧವಾರ ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಂಗಭೂಮಿ ಹಾಗೂ ಹಿರಿಯ ನಟ ಡಾ. ಮುಖ್ಯಮಂತ್ರಿ ಚಂದ್ರು ಉದ್ಘಾಟಿಸುವರು. ಖಾಜಾ ಬಂದೇ ನವಾಜ್ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಸೈಯದ್ ಶಾಹ ಖುಸ್ರೋ ಹುಸೇನಿ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.
    ಸಂಜೆ 6.30ರಿಂದ ರಾತ್ರಿ 11ರವರೆಗೆ ಶ್ರೀ ವಿಜಯ ಪ್ರಧಾನ ವೇದಿಕೆಯಲ್ಲಿ ಕಲಬುರಗಿಯ ಮಾಲಾಶ್ರೀ ಕಣವಿ- ಸುಗಮ ಸಂಗೀತ, ರಾಘವೇಂದ್ರ ಬಡಶೇಷಿ- ದಾಸವಾಣಿ, ಭೀಮಣ್ಣ ಜಾಧವ್- ಸುಂದರಿವಾದನ, ಕೋಟನೂರ (ಡಿ) ಸಿದ್ಧಶ್ರೀ ಪ್ರೌಢ ಶಾಲೆಯಿಂದ ಡೊಳ್ಳಿನ ಕುಣಿತ, ಡಾ.ಶುಭಾಂಗಿ ಅವರಿಂದ ಭರತನಾಟ್ಯ, ಜಯತೀರ್ಥ ಕುಲಕಣರ್ಿ- ಕೊಳಲು ವಾದನ, ಜಡೇಶ ಹೂಗಾರ- ತಬಲಾ ವಾದನ, ಧಾರವಾಡದ ಗಂಗಾಧರ ಮಾಂತ- ಭಾವಗೀತೆ, ಮಾನ್ವಿಯ ಅಂಬಯ್ಯ ನೂಲಿ- ವಚನ ಸಂಗೀತ, ಬೆಂಗಳೂರಿನ ಪಂ. ನಾಗರಾಜರಾವ್ ಹವಾಲ್ದಾರ್- ಹಿಂದೂಸ್ತಾನಿ ಸಂಗೀತ, ರಾಯಚೂರಿನ ಡಾ.ಪಂಡಿತ ನರಸಿಂಹಲು ವಡವಾಟಿ- ಕ್ಲಾರಿಯೋನೆಟ್ ವಾದನ, ದಾದಾಪೀರ್- ತತ್ವಪದ, ಮೈಸೂರಿನ ಸುನೀತಾ ಚಂದ್ರಕುಮಾರ- ಕೃಷ್ಣ ಸಖಿ ನೃತ್ಯರೂಪಕ, ಬೆಂಗಳೂರಿನ ಸತೀಶ ಹಂಪಿಹೊಳೆ ತಂಡ- ಸುಗಮ ಸಂಗೀತ, ಕೊಪ್ಪಳದ ದಾವಲ್ ಸಾಬ್ ಅತ್ತಾರ್- ಗೀಗಿ ಪದ, ಕೋಲಾರದ ಶ್ರೀಜಯ ನಾಟ್ಯ ಕಲಾ ಅಕಾಡೆಮಿ- ನೃತ್ಯರೂಪಕ ನಡೆಸಿಕೊಡಲಿದ್ದಾರೆ.
    ಸಂಜೆ 6.40ರಿಂದ ರಾತ್ರಿ 10.30ಕ್ಕೆ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣ (ಸಮಾನಾಂತರ ವೇದಿಕೆ-1)ದಲ್ಲಿ ಕಲಬುರಗಿಯ ನಿವೇದಿತಾ ಹೊನ್ನಳ್ಳಿ- ಸಿತಾರವಾದನ, ದತ್ತರಾಜ ಕಲಶೆಟ್ಟಿ- ತತ್ವಪದ ಗಾಯನ, ಶಿವಶರಣಪ್ಪ ಎಂ.ಪೂಜಾರಿ- ಹಿಂದೂಸ್ತಾನಿ ಸಂಗೀತ, ಮಲ್ಲಿಕಾಜರ್ುನ ಭಜಂತ್ರಿ- ಸುಗಮ ಸಂಗೀತ, ಗಂಗಾಂಬಿಕಾ ಮಠಪತಿ- ಸುಗಮ ಸಂಗೀತ, ಸುಧಾರಾಣಿ- ಭಾವಗೀತೆ, ಬೆಂಗಳೂರಿನ ಉಷಾ.ಬಿ- ಭರತನಾಟ್ಯ, ಪದ್ಮಿನಿ- ಭಾವಗೀತೆ, ಗದಗಿನ ಸಣ್ಣ ಮುದಿಯಪ್ಪ ಭಜಂತ್ರಿ- ಶಹನಾಯಿ ವಾದನ, ವಿಜಯಪುರದ ಪ್ರಕಾಶ ಸಿಂಗ್ ರಜಪುತ- ಗಜಲ್ ಗಾಯನ, ಹೊಸಪೇಟೆಯ ವಿಜಯಲಕ್ಷ್ಮೀ- ಸುಗಮ ಸಂಗೀತ, ಹಗರಿಬೊಮ್ಮನಹಳ್ಳಿಯ ಭೀರಪ್ಪ ಬಾಣದ- ಭಾವಗೀತೆ, ಬೀದರ್ನ ಉಷಾ ಪ್ರಭಾಕರ- ನೂಪುರ ನೃತ್ಯ, ಬೆಂಗಳೂರಿನ ಲಕ್ಷ್ಮೀ ಮತ್ತು ತಂಡದಿಂದ ಜಾನಪದ ಸಮೂಹ ನೃತ್ಯ, ವಿಜಯಪುರದ ದಿವ್ಯಾ ಹಾಗೂ ದಿಕ್ಷಾ ಭಿಸೆ- ಕೂಚಪುಡಿ ನೃತ್ಯ, ರವಿಕಾಂತ ಪೂಜಾರಿ- ಕಥಕ ನೃತ್ಯ, ಪ್ರಿಯಾಂಕ್ ಸರಶೇಟ್- ಭರತನಾಟ್ಯ, ತುಮಕೂರಿನ ಚಿಕ್ಕಪೇಟೆಯ ಎಸ್.ಎನ್.ರಮಾನಂದ- ಪೌರಾಣಿಕ ನಾಟಕ ಏರ್ಪಡಿಸಲಾಗಿದೆ. ಅಂದು ಸಂಜೆ 5.30 ರಿಂದ ರಾತ್ರಿ 10.30 ಗಂಟೆಯವರೆಗೆ ಮಹಾತ್ಮಗಾಂಧಿ ಸಭಾಂಗಣ (ಸಮಾನಾಂತರ ವೇದಿಕೆ-2)ಯಲ್ಲಿ ಕಲಬುರಗಿಯ ದಿಗಂಬರ ಪಂಚಾಳ- ಜಾನಪದ ಗೀತೆ, ಎಂಜಲ್- ಭರತನಾಟ್ಯ, ಗಣಪತರಾವ್ ಶಿಂಗಶೆಟ್ಟಿ- ಜಾನಪದ ಗೀತೆ, ಇಂಡಿಯನ್ ಕಲ್ಚರಲ್ ಸೆಂಟರ್ ಮತ್ತು ಚಾರಿಟೇಬಲ್ ಟ್ರಸ್ಟ್- ನೃಪತುಂಗ ನಾಟಕ, ಸೂರ್ಯನಗರಿ ಸ್ವತಂತ್ರ ಕಲಾ ಸಂಘ- ಸುರಪುರ ವೆಂಕಟಪ್ಪ ನಾಯಕ ನಾಟಕ ಪ್ರದರ್ಶನ, ಬೆಳಗಾವಿಯ ಬಸವರಾಜ ತಿಮ್ಮಾಪುರ- ಸುಗಮ ಸಂಗೀತ, ಕೊಡಗಿನ ಅನುಷಾ ಕಲಾ ತಂಡ- ಭಾವಗೀತೆ, ಹಾಸನದ ನೃತ್ಯಂಜಲಿ ಕಲಾ ನಿಕೇತನ- ಭರತ ನಾಟ್ಯ, ಕೊಪ್ಪಳದ ಭೀಮವ್ವ ದೊಡ್ಡಬಾಳಪ್ಪ- ಬೊಂಬೆಯಾಟ ವಿರಾಟ ಪರ್ವ, ಧಾರವಾಡದ ಸಮುದಾಯ ರಂಗತಂಡ- ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.
    ಜ್ಯೋತಿರ್ಲಿಂ ಗ ದರ್ಶನಕಲಬುರಗಿ: ನಗರದ ಸೇಡಂ ರಸ್ತೆಯಲ್ಲಿರುವ ಅಮೃತ ಸರೋವರದಲ್ಲಿ ಸಾಹಿತ್ಯಾಸಕ್ತರಿಗಾಗಿ ಜ್ಯೋತಿರ್ಲಿಂಗ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಮುಖ್ಯಸ್ಥೆ ಬಿ.ಕೆ. ವಿಜಯಾ ತಿಳಿಸಿದ್ದಾರೆ. ಹಿತೇನ ಸಹಿತಂ ಸಾಹಿತ್ಯ ಎಂದು ಹೇಳಲಾಗಿದೆ. ಸಾಹಿತ್ಯದ ಮೂಲ ಶಿವ. ಹೀಗಾಗಿ ಅಕ್ಷರ ಜಾತ್ರೆಗೆ ಬರುವ ಜನರಿಗಾಗಿ ಜ್ಯೋತಿರ್ಲಿಂಗ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಭಾರತ ಹಾಗೂ ಕರ್ನಾಟಕದ ವಿವಿಧ ಭಾಗಗಳಿಂದ ಬರುವವರು ಹನ್ನೆರಡು ಜ್ಯೋತಿಲರ್ಿಂಗ, ಬೃಹತ್ ಶಿವಲಿಂಗ, ಜಾನಕಿ ಜಲಧಾರೆ ಹಾಗೂ ಅಧ್ಯಾತ್ಮದ ಕಂಪನ್ನು ಸೂಸುವ ಪರಿಸರಕ್ಕೆ ಭೇಟಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts