More

    ಕಸಾಪ: ರಾಜ್ಯೋತ್ಸವದ ಅಂಗವಾಗಿ ವಿಶೇಷ ಉಪನ್ಯಾಸ ಮಾಲಿಕೆ

    ವಿಜಯವಾಣಿ ಸುದ್ದಿಜಾಲ ಗದಗ
    19ನೇ ಶತಮಾನದ ಆರಂಭದಲ್ಲಿ ಮುಂಬೈ ಕರ್ನಾಟಕ ಹಲವು ಭಾಗಗಳಲ್ಲಿ ಕನ್ನಡ ಭಾಷೆಯು ಮರಾಠಿಯ ಪ್ರಾಬಲ್ಯದಿಂದ ನಲುಗಿ ಹೋಗಿತ್ತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸತಿಗಳನ್ನು ಉಳಿಸಿ ಬೆಳೆಸುವ ಮಹಾ ಕಾರ್ಯವನ್ನು ಕನ್ನಡ ಶಾಲೆಗಳನ್ನು ಸ್ಥಾಪಿಸುವ ಮೂಲಕ ಡೆಪ್ಯುಟಿ ಚನ್ನಬಸಪ್ಪನವರು ಕನ್ನಡ ಊಳಿವಿ ಶ್ರಮಿಸಿದ ಮಹಾತ್ಮರು ಎಂದು ಗದುಗಿನ ಪಿಪಿಜಿ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ರಾಜಶೇಖರ ದಾನರಡ್ಡಿ ಹೇಳಿದರು.
    ತೋಂಟದ ಸಿದ್ಧಲಿಂಗ ಶ್ರೀಗಳ ಕನ್ನಡ ಭವನ ಗದಗದಲ್ಲಿ ರಾಜ್ಯೋತ್ಸವದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
    ಕನ್ನಡದ ಕುಲ ನೆಲಗಳ ಉಜ್ವಲ ಅಭಿಮಾನಿಗಳಾಗಿ, ಶಿಣ ಇಲಾಖೆಯ ದ ಅಧಿಕಾರಿಯಾಗಿ ಕನ್ನಡ ಕಟ್ಟುವ ಮಹೋನ್ನತ ಕಾರ್ಯವನ್ನು ಡೆಪ್ಯುಟಿ ಚನ್ನಬಸಪ್ಪನವರು ಮಾಡಿದರು. ವಿದ್ಯಾಥಿರ್ಗಳಾಗಿ ಉಚಿತ ಪ್ರಸಾದ ನಿಲಯವನ್ನು ಸ್ಥಾಪಿಸಿ ಅನೇಕ ಬಡ ಪ್ರತಿಭಾವಂತ ಮಕ್ಕಳಿಗೆ ಸಹಾಯ ಕಲ್ಪಿಸಿದರು. ಕನ್ನಡ ಭಾಷೆಯ ಉಜ್ಜೀವನಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ನಾಡು ಬೆಳಗಿದ ಪುಣ್ಯಜಿವಿ ಚನ್ನಬಸಪ್ಪನವರು. ಅವರನ್ನು “ಕನ್ನಡದ ದೀಪ’ ಎಂದು ಹಿರಿಯರು ಕರೆದಿದ್ದಾರೆ ಎಂದು ತಿಳಿಸಿದರು.
    ಡಿ.ಬಿ.ಹುಯಿಲಗೋಳ ಮಾತನಾಡಿ ಹಿರಿಯರ ಪರಿಶ್ರಮದಿಂದ ಕಟ್ಟಿದ ವಿದ್ಯಾಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಇದಕ್ಕೆ ಅನೇಕ ಮಹನೀಯರು ತನುಮನಧನದಿಂದ ಕಾರ್ಯಮಾಡಿದ್ದಾರೆ. ಅದರ ಲವಾಗಿ ಇಂದು ಅಸಂಖ್ಯಾತ ವಿದ್ಯಾಥಿರ್ಗಳು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಗ್ರಾಮೀಣ ವಿದ್ಯಾಥಿರ್ಗಳ ವಿದ್ಯಾರ್ಜನೆಗೆ ಕಟ್ಟಿದ ಒಂದು ವಿದ್ಯಾ ಸಂಸ್ಥೆ ನೂರು ವರ್ಷಗಳ ಅವಧಿಯನ್ನು ದಾಟಿ ಬಂದಿರುವುದರ ಹಿಂದೆ ಅರ್ಪಣಾ ಮನೋಭಾವದ ಶಿಕರ ಶ್ರಮವಿದೆ ಎಂದು ತಿಳಿಸಿದರು.
    ಕಸಾಪ ಜಿಲ್ಲಾಧ್ಯ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಮರಾಠಿ ಶಾಲೆಗಳನ್ನು ಕಡಿಮೆ ಮಾಡಿ ಕನ್ನಡ ಶಾಲೆಗಳನ್ನು ನಡೆಸಬೇಕೆನ್ನುವ ಡೆಪ್ಯುಟಿ ಚನ್ನಬಸಪ್ಪನವರು, ಬ್ರೀಟಿಷ್​ ಅ-ಧಿಕಾರಿಗಳಿಗೆ ಕನ್ನಡ ಶಾಲೆಗಳ ಸ್ಥಾಪನೆಯ ಮಹತ್ವನ್ನು ಮನವರಿಕೆ ಮಾಡಿಕೊಟ್ಟು, ಸಾಹಿತಿಗಳನ್ನು ಒಂದುಗೂಡಿಸಿ ಶಾಲಾ ಪಠ್ಯಪುಸ್ತಕಗಳನ್ನು ರೂಪಿಸಿದರು. ಶಿಕರ ನೇಮಕಾತಿ ಅವಕಾಶಗಳನ್ನು ಮಾಡಿಕೊಟ್ಟು ಕನ್ನಡದ ವಾತಾವರಣ ನಿರ್ಮಾಣ ಮಾಡಿ ಕನ್ನಡದ ಬೆಳವಣಿಗೆಗೆ ಕಾರಣರಾದರು ಎಂದರು. ಶ್ರೀನಿವಾಸ ಹೂಯಿಲಗೋಳ ಮಾತನಾಡಿದರು.
    ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾದಾನ ಸಂಸ್ಥೆಗೆ 2023 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯ ಗೌರವ ಲಭಿಸಿದ ಹಿನ್ನೆಲೆ ಸಂಸ್ಥೆಯ ಅಧ್ಯ ಡಿ.ಬಿ. ಹುಯಿಲಗೋಳ ಹಾಗೂ ಕಾರ್ಯದಶಿರ್ ಶ್ರೀನಿವಾಸ ಹುಯಿಲಗೋಳ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
    ಮಾಜಿ ಸಚಿವ ಎಸ್​.ಎಸ್​. ಪಾಟೀಲ, ಕಿಶೋರಬಾಬು ನಾಗರಕಟ್ಟಿ, ದತ್ತಪ್ರಸನ್ನ ಪಾಟೀಲ, ಶಿವಾನಂದ ಗಿಡ್ನಂದಿ, ಪ್ರೊ. ಚಂದ್ರಶೇಖರ ವಸ್ತ್ರದ, ಡಾ. ಜಿ.ಬಿ.ಪಾಟೀಲ, ಡಾ. ನಾಗಪ್ಪ ಸುರಳಿಕೇರಿ, ಡಾ. ಶಂಕರ ಬಾರಿಕೇರ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts