More

    ವಿದೇಶದಲ್ಲೂ ಮೊಳಗಿತು ಕನ್ನಡದ ಕಹಳೆ; ಥಾಯ್ಲೆಂಡ್​ನಲ್ಲೂ ತಾಯ್ನಾಡ ಅಭಿಮಾನ ಮೆರೆದ ಕನ್ನಡಿಗರು

    ಥಾಯ್ಲೆಂಡ್: ಕನ್ನಡ ರಾಜ್ಯೋತ್ಸವದಂದು ಕರ್ನಾಟಕದಾದ್ಯಂತ ಕನ್ನಡದ ಕಲರವ ಕೇಳಿಬರುವುದು ಸರ್ವೇಸಾಮಾನ್ಯ. ಆದರೆ ರಾಜ್ಯೋತ್ಸವ ದಿನವಾದ ಇಂದು ಕರ್ನಾಟಕದಾಚೆಗೂ ಕನ್ನಡದ ಕಹಳೆ ಮೊಳಗಿದೆ. ಆ ಮೂಲಕ ಈ ಕನ್ನಡಿಗರು ‘ಎಲ್ಲಾದರು ಇರು, ಎಂತಾದರು ಇರು; ಎಂದೆಂದಿಗು ನೀ ಕನ್ನಡವಾಗಿರು..’ ಎಂಬುದನ್ನು ಸಾಬೀತುಪಡಿಸಿದ್ದಾರೆ.

    ಹೀಗೆ ರಾಜ್ಯವಲ್ಲ, ದೇಶದಾಚೆಗೆ ಕನ್ನಡದ ಕಹಳೆ ಮೊಳಗಿದ್ದೆಲ್ಲಿ ಎಂದರೆ ದೂರದ ಥಾಯ್ಲೆಂಡ್​ನಲ್ಲಿ. ಥಾಯ್ಲೆಂಡ್​ನ ರಾಜಧಾನಿ ಬ್ಯಾಂಕಾಕ್​ನಲ್ಲಿ ಕನ್ನಡಿಗರಾದ ಡಾ.ಲೇಖನಾ, ಕಲಾ, ಲತಾ, ಶಿಲ್ಪಾ, ಚಂದ್ರಶೇಖರ್‌, ಅಮೋಘವರ್ಷ, ಸಂಭ್ರಮ, ಮೌನಿಶಾ ಮತ್ತು ಭಾವನಾ ಅವರು “ಹಚ್ಚೇವು ಕನ್ನಡದ ದೀಪ” ಎಂಬ ಗೀತೆಯ ಗಾಯನದ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಿದರು. ಆ ಮೂಲಕ ಥಾಯ್ಲೆಂಡ್​ನಲ್ಲಿದ್ದರೂ ತಾಯ್ನಾಡ ಮರೆಯಲಾರೆವು ಎಂಬುದಕ್ಕೆ ಸಾಕ್ಷಿಯಾದರು.

    ವಿದೇಶದಲ್ಲೂ ಮೊಳಗಿತು ಕನ್ನಡದ ಕಹಳೆ; ಥಾಯ್ಲೆಂಡ್​ನಲ್ಲೂ ತಾಯ್ನಾಡ ಅಭಿಮಾನ ಮೆರೆದ ಕನ್ನಡಿಗರು

    ಅಂದು ಅಪ್ಪಾಜಿಗೆ, ಇಂದು ‘ಅಪ್ಪು’ಗೆ; ರಾಜ್​ ಕುಟುಂಬಕ್ಕೆ 3 ದಶಕಗಳಲ್ಲಿ 2 ಕರ್ನಾಟಕ ರತ್ನ

    ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಮುಂದಿನ ವರ್ಷ ಮಹತ್ವದ ಬದಲಾವಣೆ; ಸಿಎಂ ಘೋಷಣೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts