More

    ಉಡುಪಿ ಕೃಷ್ಣ ಮಠದಲ್ಲಿ ಕನ್ನಡ ನಾಮಫಲಕ ಅಳವಡಿಕೆ

    ಉಡುಪಿ: ಶ್ರೀ ಕೃಷ್ಣ ಮಠದ ದಕ್ಷಿಣ ದ್ವಾರದಲ್ಲಿ ತುಳು ಮತ್ತು ಸಂಸ್ಕೃತ ಭಾಷೆಯ ಜತೆಗೆ ಕನ್ನಡದ ನಾಮಫಲಕವನ್ನು ಗುರುವಾರ ಅಳವಡಿಸಲಾಗಿದೆ. ಹಳೆಯ ಪ್ಲಾಸ್ಟಿಕ್ ಬೋರ್ಡ್ ತೆರವುಗೊಳಿಸಿ ತುಳು ಮತ್ತು ಸಂಸ್ಕೃತ ಭಾಷೆ ಮರದ ನಾಮಫಲಕವನ್ನು ಮಂಗಳವಾರ ಅಳವಡಿಸಲಾಗಿತ್ತು. ಇದರಲ್ಲಿ ಕನ್ನಡ ಭಾಷೆ ಬಿಟ್ಟಿರುವ ಬಗ್ಗೆ ಕನ್ನಡ ಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು.

    ಈ ವಿವಾದಕ್ಕೆ ಸ್ಪಷ್ಟೀಕರಣ ನೀಡಿದ್ದ ಮಠದ ಆಡಳಿತ ಮಂಡಳಿ ಕನ್ನಡದ ಫಲಕವೂ ಸಿದ್ಧವಾಗುತ್ತಿದೆ. ಶೀಘ್ರದಲ್ಲಿ ಅಳವಡಿಸಲಾಗುತ್ತದೆ ಎಂದು ತಿಳಿಸಿತ್ತು. ಅದರಂತೆ ರಾಜಗೋಪುರದ ಕೆಳಗೆ ‘ವಿಶ್ವಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀಕೃಷ್ಣ ಮಠ, ಉಡುಪಿ’ ಎಂಬ ಫಲಕ ಹಾಕಲಾಗಿದೆ.

    ಕನ್ನಡ ಕೈಬಿಟ್ಟು ತುಳು ನಾಮಫಲಕ, ಕೃಷ್ಣ ಮಠದ ಕ್ರಮಕ್ಕೆ ಉಡುಪಿ ಜಿಲ್ಲಾ ಕಸಾಪ ಆಕ್ಷೇಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts