More

    ಕನ್ನಡ ಭಾಷೆ ಸಾಂಸ್ಕೃತಿಕ ಅಸ್ಮಿತೆಯ ಪ್ರತೀಕ

    ಬೆಳಗಾವಿ: ಕನ್ನಡ ಭಾಷೆ ಸಾಂಸ್ಕೃತಿಕ ಅಸ್ಮಿತೆಯ ಪ್ರತೀಕವಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಜಶೇಖರ ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.

    ಬೆಳಗಾವಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಕನ್ನಡ ವಿಷಯ ಪ್ರಾಚಾರ್ಯರ ಮತ್ತು ಉಪನ್ಯಾಸಕರ ವೇದಿಕೆ ಆಶ್ರಯದಲ್ಲಿ ಹಿರೇಬಾಗೆವಾಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕನ್ನಡ ವಿಷಯ ಪುನಶ್ಚೇತನ ಕಾರ್ಯಾಗಾರ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಕನ್ನಡ ಸಾಂಸ್ಕೃತಿಕ ದೀರ್ಘ ಪರಂಪರೆ ಹೊಂದಿರುವ ಭಾಷೆಯಾಗಿದೆ. ಮಾತೃ ಹೃದಯದ ಸಹಜ ಗುಣ ಹೊಂದಿದೆ. ಇಂತಹ ವಿಶಿಷ್ಟ ಭಾಷೆಯನ್ನು ಗಡಿ ಭಾಗದಲ್ಲಿ ವೃದ್ಧಿಗೊಳಿಸುವ ಜವಾಬ್ದಾರಿ ಕನ್ನಡ ಅಧ್ಯಾಪಕರ ಮುಖ್ಯ ಜವಾಬ್ದಾರಿಯಾಗಿದೆ. ಗುಣಮಟ್ಟದ ಭಾಷಾ ಬೋಧನೆಯಿಂದ ಪಿಯುಸಿ ಫಲಿತಾಂಶ ವೃದ್ಧಿಸುವ ಜತೆಗೆ ವಿದ್ಯಾರ್ಥಿಗಳಲ್ಲಿ ಕನ್ನಡತ್ವ ಮಮಕಾರ ಬೆಳೆಸುವಲ್ಲಿ ಅಧ್ಯಾಪಕರು ಗುರುತರ ಜವಾಬ್ದಾರಿ ನಿರ್ವಹಿಸಬೇಕಾದ ಅಗತ್ಯವಿದೆ ಎಂದರು. ಶಿಗ್ಗಾಂವಿಯ ಚನ್ನಪ್ಪ ಕಣ್ಣೂರ ಪ.ಪೂ. ಕಾಲೇಜಿನ ಪ್ರಾಚಾರ್ಯ ಡಾ. ನಾಗರಾಜ ದ್ಯಾಮನಕೊಪ್ಪ ಮಾತನಾಡಿ, ಕನ್ನಡ ಭಾಷಾ ಪಠ್ಯ ಮಾನವೀಯ ಸೆಲೆ ಹೊಂದಿದ್ದು, ಮಕ್ಕಳಿಗೆ ಈ ಕಂಪನ್ನು ಉಣಬಡಿಸಲು ಪರಿಣಾಮಕಾರಿ ಬೋಧನೆ ರೂಢಿಸಿಕೊಳ್ಳಬೇಕು ಎಂದರು.

    ಇದೇ ವೇಳೆ 2019-20ನೇ ಸಾಲಿನಲ್ಲಿ ಕನ್ನಡ ವಿಷಯದಲ್ಲಿ ಪ್ರತಿಶತ ನೂರರಷ್ಟು ಫಲಿತಾಂಶ ಪಡೆದ ಕಾಲೇಜಿನ ಉಪನ್ಯಾಸಕರನ್ನು ಹಾಗೂ ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ಸವದತ್ತಿಯ ಎಸ್.ಕೆ.ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಅನಿತಾ ಕಲ್ಲೇದ ಅವರನ್ನು ಸನ್ಮಾನಿಸಲಾಯಿತು. ಕನ್ನಡ ವೇದಿಕೆ ಅಧ್ಯಕ್ಷ ಡಾ. ವೈ.ಎಂ. ಯಾಕೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯ ಎಸ್.ಎಸ್. ಸಿದ್ನಾಳ, ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಜಿ.ಎ. ತಿಗಡಿ, ಪ್ರಾಚಾರ್ಯ ಡಿ.ಎಂ.ಹಿರೇಮಠ, ಕೆ.ಎನ್.ದೊಡ್ಡಮನಿ, ಆರ್.ಕೆ. ಮುರಂಕರ ಇತರರಿದ್ದರು.

    ಸಮಾಜಶಾಸ್ತ್ರ ಉಪನ್ಯಾಸಕರಿಗೆ ತರಬೇತಿ

    ಬೆಳಗಾವಿ ಜಿಲ್ಲಾ ಪದವಿಪೂರ್ವ ಸಮಾಜಶಾಸ್ತ್ರ ವಿಷಯದ ಪ್ರಾಚಾರ್ಯರು ಹಾಗೂ ಉಪನ್ಯಾಸಕರ ವೇದಿಕೆಯಿಂದ ಒಂದು ದಿನದ ಕಾರ್ಯಾಗಾರ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಕೆಎಲ್ಇ ಜಿಎ ಕಾಲೇಜಿನಲ್ಲಿ ಜರುಗಿತು. ಡಿಡಿಪಿಯು ರಾಜಶೇಖರ ಪಟ್ಟಣಶೆಟ್ಟಿ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿ ಟಿ.ಸಿ.ಮಲ್ಲಾಪುರಮಠ ಪ್ರಶ್ನೆಪತ್ರಿಕೆ ಕುರಿತು ತರಬೇತಿ ನೀಡಿದರು. ಬೆಳಗಾವಿ ಜಿಲ್ಲೆಯ ಪದವಿಪೂರ್ವ ವಿಭಾಗದ ಉಪನ್ಯಾಸಕರು ಭಾಗವಹಿಸಿದ್ದರು. ಪ್ರಾಚಾರ್ಯ ಆರ್.ಎಸ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಅಧ್ಯಕ್ಷ ಪಿ.ಎಸ್.ಪಾಟೀಲ ಭಾಗವಹಿಸಿದ್ದರು. ಎಸ್. ಟಿ.ಕಾಂಬಳೆ ಸ್ವಾಗತಿಸಿದರು. ಜಯರಾಜ ದರೂರ ಪ್ರಸ್ತಾವಿಕವಾಗಿ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts