More

    ಕನ್ನಡ ಜ್ಯೋತಿ ರಥಯಾತ್ರೆಗೆ ಸ್ವಾಗತ

    ಕುಕನೂರು: ಸಂಭ್ರಮ-50ರ ಹಿನ್ನಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜನೆಗೊಂಡ ಕನ್ನಡ ರಥಯಾತ್ರೆಯನ್ನು ತಾಲೂಕಿನ ಭಾನಾಪುರದಲ್ಲಿ ತಹಸೀಲ್ದಾರ್ ಎಚ್.ಪ್ರಾಣೇಶ ಪುಷ್ಪ ಅರ್ಪಿಸುವ ಮೂಲಕ ಮಂಗಳವಾರ ಸ್ವಾಗತಿಸಿದರು.

    ಇದನ್ನೂ ಓದಿ: ನಾಳೆ ಸಿರಗುಪ್ಪಕ್ಕೆ ಜ್ಯೋತಿ ರಥಯಾತ್ರೆ ಪ್ರವೇಶ

    ಕರ್ನಾಟಕ ಸಂಭ್ರಮ-50ರ ‘ಹೆಸರಾಯಿತು ಕರ್ನಾಟಕ ಉಸಿಗಾಗಲಿ ಕನ್ನಡ’ ಧ್ಯೇಯ ವಾಕ್ಯದೊಂದಿಗೆ ವರ್ಷವಿಡಿ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿಕ ಹಾಗೂ ನುಡಿಗೆ ಸಂಬಂಧಿಸಿದಂತೆ ಮತ್ತು ಯುವ ಜನತೆಯಲ್ಲಿ ಕರ್ನಾಟಕದ ಅರಿವು ಮೂಡಿಸುವ ಉದ್ದೇಶ ಹೊಂದಿದೆ.

    ರಥಯಾತ್ರೆಯಲ್ಲಿರುವ ನಾಡದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ತಾಲೂಕಿನ ತಳಕಲ್, ಮಸಬಹಂಚಿನಾಳ, ಇಟಗಿ, ಮಂಡಲಗೇರಿ ಗ್ರಾಮಗಳಿಗೆ ತೆರಳಿತು. ಬೆಂಗಳೂರು ಶ್ರೀಕಲಾ ತಂಡ ಹಾಗೂ ಕೊಮಲಾಪೂರ ಗ್ರಾಮದ ಹವ್ಯಾಸಿ ಕಲಾ ಮಕ್ಕಳಿಂದ ಕೋಲಾಟ ಮತ್ತು ಜಾನಪದ ನೃತ್ಯಗಳ ಪ್ರದರ್ಶನ ನಡೆಯಿತು.

    ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ, ತಾಪಂ ಇಒ ಸಂತೋಷ ಬಿರಾದರ್, ಗ್ರೇಡ್-2 ತಹಸೀಲ್ದಾರ್ ಮುರಳಿಧರರಾವ್ ಕುಲಕರ್ಣಿ, ತಾಪಂ ಸಹಾಯಕ ನಿರ್ದೇಶಕರಾದ ವೆಂಕಟೇಶ್ ವಂದಾಲ್, ಶರಣಪ್ಪ ಕೆಳಗಿನಮನಿ, ಗ್ರಾಪಂ ಅಧ್ಯಕ್ಷ ಕರಿಯಪ್ಪ ಹಳ್ಳಿಕೇರಿ,

    ಉಪಾಧ್ಯಕ್ಷೆ ಪವಿತ್ರಾ ಪ್ರಕಾಶ ಬಂಗೇರ, ಗ್ರಾಪಂ ಪಿಡಿಓ ರಮೇಶ ತಿಮ್ಮಾರಡ್ಡಿ, ಸದಸ್ಯರಾದ ನೀಲಕಂಠಯ್ಯ ಸಸಿಮಠ, ರಾಮಣ್ಣ ಕೊಮಲಾಪುರ, ದೇವೆಂದ್ರಪ್ಪ ಕಮ್ಮಾರ, ಕಸಾಪ ಅಧ್ಯಕ್ಷ ಕಳಕಪ್ಪ ಕುಂಬಾರ, ನೌಕರರ ಸಂಘದ ಖಜಾಂಚಿ ಅಶೋಕ ಮಾದಿನೂರು,

    ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಮೇಟಿ, ಕಸಾಪ ಕಾರ್ಯದರ್ಶಿ ಫೀರಸಾಬ್ ದಪೇದಾರ, ಶಿಕ್ಷಣ ಸಂಯೋಜಕರಾದ ಶರಣಪ್ಪ ರ‌್ಯಾವಣಕಿ, ಸುರೇಶ ಮಾದಿನೂರು, ಪ್ರಮುಖರಾದ ಶಾಂತವೀರಯ್ಯ ಲಕಮಾಪುರಮಠ, ಮಲ್ಲಿಕ್‌ಸಾಬ್ ನೂರಬಾಷಾ, ಮರ್ದಾನಸಾಬ್ ನದಾಫ್, ಪರಶುರಾಮ ಮಡಿವಾಳರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts