More

    ಕನ್ನಡಿಗರಿಗೆ ಕನ್ನಡವೇ ಗತಿ : ಡಾ.ಸಿ.ಪಿ.ಕೃಷ್ಣಕುಮಾರ್

    ಮೈಸೂರು: ಕನ್ನಡಿಗರಲ್ಲಿ ಭಾಷಾಭಿಮಾನದ ಕೊರತೆ ಎದ್ದು ಕಾಣುತ್ತಿದೆ ಎಂದು ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ವಿಷಾದಿಸಿದರು.
    ಶಿವರಾಮಪೇಟೆಯ ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ಸಂಘದ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಭುವನೇಶ್ವರಿದೇವಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.


    ಕನ್ನಡಿಗರಿಗೆ ಕನ್ನಡವೇ ಗತಿ. ಹಿಂದಿಯಾಗಲಿ ಇಂಗ್ಲಿಷ್ ಆಗಲಿ ಅಥವಾ ಇನ್ಯಾವುದೇ ಭಾಷೆಯಾಗಲಿ ಅಲ್ಲ. ಕನ್ನಡ ಕನ್ನಡಿಗರ ಬದುಕಿನ ಭಾಷೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಆದರೆ ಇಂದು ಕನ್ನಡ ಭಾಷೆ ಅವನತಿಯತ್ತ ಸಾಗುತ್ತಿರುವುದು ಕಳವಳದ ಸಂಗತಿ. ನೆರೆಯ ತಮಿಳುನಾಡಿನಲ್ಲಿ ಅಲ್ಲಿನ ಮಾತೃಭಾಷೆ ಪ್ರಾಧಾನ್ಯವಾಗಿ ಕಾಣುತ್ತಿದೆ. ಆದರೆ ನಮ್ಮಲ್ಲಿ ಆಡಳಿತದಲ್ಲಾಗಲಿ, ಫಲಕಗಳಲ್ಲಾಗಲಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ. ಹೀಗಾಗಿ,

    ಕನ್ನಡಿಗರಾದ ನಾವು ಭಾಷೆಯನ್ನು ಬಳಸಿ ಬೆಳೆಸಿ ಉಳಿಸುವ ಕೆಲಸ ಮಾಡಬೇಕಾಗಿದೆ ಎಂದು ಕರೆ ನೀಡಿದರು.
    ಕಾವೇರಿ ವಿಚಾರದಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಕರ್ನಾಟಕದಲ್ಲಿ ಮಳೆ ಆಗದಿದ್ದರೂ, ಜಲಾಶಯಗಳು ಭರ್ತಿಯಾಗದಿದ್ದರೂ, ನಮಗೆ ಕುಡಿಯಲು ನೀರಿಲ್ಲದಿದ್ದರೂ, ರೈತರ ಬೆಳೆಗೆ ನೀರಿಲ್ಲದೆ ಒಣಗುತ್ತಿದ್ದರೂ, ತಮಿಳುನಾಡಿಗೆ ನೀರು ಬಿಡಬೇಕು ಎಂದು ಹೇಳುವುದು ಅನ್ಯಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ಮಹಾಸಭಾದ ಪ್ರಧಾನ ಕಾರ್ಯದರ್ಶಿ, ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ, ಮೈಸೂರು ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ ಅಧ್ಯಕ್ಷ ಕೆ.ಬಿ.ಲಿಂಗರಾಜು, ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ರಘುರಾಮ್ ವಾಜಪೇಯಿ, ವೀರಶೈವ ಸಜ್ಜನ ಸಂಘದ ಸಾಗರ್ ಕುಮಾರ್, ಮಹಾಸಭಾದ ಅಧ್ಯಕ್ಷ ಎನ್. ಬೆಟ್ಟೇಗೌಡ, ಉಪಾಧ್ಯಕ್ಷೆ ಲಕ್ಷ್ಮೀದೇವಿ, ಕೋಶ್ಯಾಧ್ಯಕ್ಷ ಎಂ.ಎನ್.ಚಂದ್ರಶೇಖರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts