More

    ಗೋವಾ ಚಿತ್ರೋತ್ಸವದ ಪನೋರಮಾದಲ್ಲಿ ‘ ಪಿಂಕಿ ಎಲ್ಲಿ?’ ಪ್ರದರ್ಶನ

    ಪಣಜಿ: ಇತ್ತೀಚಿನ ದಿನಗಳಲ್ಲಿ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾದ ಚಿತ್ರಗಳ ಪೈಕಿ ಕೃಷ್ಣೇಗೌಡ ನಿರ್ಮಾಣ ಹಾಗೂ ಪೃಥ್ವಿ ಕೊಣನೂರು ನಿರ್ದೇಶನದ ‘ಪಿಂಕಿ ಎಲ್ಲಿ?’ ಚಿತ್ರ ಸಹ ಒಂದು. ಈ ಚಿತ್ರವು ಇದೀಗ ಇಂಟರ್​ನ್ಯಾಷನಲ್​ ಫಿಲ್ಮ್​ ಫೆಸ್ಟಿವಲ್​ ಆಫ್​ ಇಂಡಿಯಾದ (ಇಫಿ) ಪನೋರಮಾ ವಿಭಾಗದಲ್ಲಿ ಪ್ರದರ್ಶನಗೊಂಡಿದೆ.

    ಇದನ್ನೂ ಓದಿ: ಐದು ದಿನಗಳಿಗೆ 150 ಕೋಟಿ ಗಳಿಸಿ ದಾಖಲೆ ಮಾಡಿದ ‘ಮಾಸ್ಟರ್​’!

    ಗೋವಾದ ಪಣಜಿಯಲ್ಲಿ ಈ ತಿಂಗಳ 16ರಿಂದ 24ರವರೆಗೂ ಇಫಿ ನಡೆಯುತ್ತಿದ್ದು, ಈ ಚಿತ್ರೋತ್ಸವಕ್ಕೆ ಆಯ್ಕೆಯಾದ ಭಾರತದ ವಿವಿಧ ಭಾಷೆಗಳ ಒಟ್ಟು 23 ಸಿನಿಮಾಗಳ ಪೈಕಿ ಕನ್ನಡದಿಂದ ಆಯ್ಕೆಯಾದ ಏಕೈಕ ಚಿತ್ರ ಎಂದರೆ ಅದು ‘ಪಿಂಕಿ ಎಲ್ಲಿ?’ ಮಾತ್ರ. ಈ ಚಿತ್ರದ ಪ್ರದರ್ಶನದ ಸಂದರ್ಭದಲ್ಲಿ ಹಾಜರಿದ್ದ ಕೃಷ್ಣೇಗೌಡ ಮತ್ತು ತಂಡದವರನ್ನು ಚಿತ್ರೋತ್ಸವದ ವತಿಯಿಂದ ಸನ್ಮಾಸಲಾಗಿದೆ.

    ಎಂಟು ತಿಂಗಳ ಮಗುವೊಂದು ಕಳೆದುಹೋದಾಗ, ಏನೆಲ್ಲಾ ನಡೆಯುತ್ತದೆ ಎಂಬುದು ಈ ಚಿತ್ರದ ಕಥೆ. ನೈಜ ಘಟನೆಯೊಂದನ್ನು ಆಧರಿಸಿ ಮಾಡಿರುವ ಈ ಚಿತ್ರದ ಇದು. ನಗರಗಳಲ್ಲಿ ವಾಸಿಸುವ ಗಂಡ-ಹೆಂಡತಿ ಇಬ್ಬರೂ ಉದ್ಯೋಗಕ್ಕೆ ಹೊರಗೆ ಹೋದಾಗ, ಮನೆಗೆಲಸದವರು ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಾರೆ, ಆ ಮಗು ಏನೆಲ್ಲಾ ಅನುಭವಿಸುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ.

    ಇದನ್ನೂ ಓದಿ: PHOTO GALLERY| ಮಾಲ್ಡೀವ್ಸ್​​ನಲ್ಲಿ ಯಶ್​- ರಾಧಿಕಾ ಸುತ್ತಾಟ; ಅಪ್ಪನ ತೋಳಲ್ಲಿ ಐರಾ, ಯಥರ್ವ

    ಈ ಚಿತ್ರದ ವಿಶೇಷತೆಯೆಂದರೆ, ನಟನೆ ಬಗ್ಗೆ ಏನೂ ಗೊತ್ತಿಲ್ಲದವರನ್ನು ಕರೆತಂದು, ಅವರಿಗೆ ಒಂದಷ್ಟು ತರಬೇಡಿ ಕೊಟ್ಟು ನಂತರ ಕ್ಯಾಮೆರಾ ಮುಂದೆ ನಿಲ್ಲಿಸಿ ಅವರಿಂದ ಅಭಿನಯ ತೆಗೆಸಲಾಗಿದೆ. ಮಿಕ್ಕಂತೆ ಅಕ್ಷತಾ ಪಾಂಡವಪುರ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ.

    ಏಜೆಂಟ್​ ಅಗ್ನಿಯಾಗಿ ಕತ್ತಿ ಝಳಪಿಸಿದ ಕಂಗನಾ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts