More

    ಅಂಬಾರಿ ಆನೆ ‘ಅರ್ಜುನ’ನ ಬಲಿ ಪಡೆದ ಕಾಡಾನೆ ಹಿಡಿಯೋಕೆ ಕ್ಯಾಪ್ಟನ್ ಅಭಿಮನ್ಯು ಎಂಟ್ರಿ

    ಹಾಸನ: ಮಲೆನಾಡಲ್ಲಿ ಕಾಡಾನೆ ಉಪಟಳ ಮತ್ತೆ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಶುಕ್ರವಾರದಿಂದ ಕಾರ್ಯಾಚರಣೆ ಪ್ರಾರಂಭವಾಗಿದೆ. ಈಗಾಗಲೇ ಬೇಲೂರು ತಾಲ್ಲೂಕಿನ, ಬಿಕ್ಕೋಡು ಆನೆ ಕ್ಯಾಂಪ್‌ಗೆ ಸಾಕಾನೆಗಳು ಬಂದಿವೆ.

    ಗುರುವಾರ (ಜ.11) ಕ್ಯಾಂಪಿಗೆ ಹರ್ಷ, ಸುಗ್ರೀವ, ಧನಂಜಯ, ಅಶ್ವತ್ಥಾಮ, ಪ್ರಶಾಂತ ಬಂದಿದ್ದು, ಇಂದು ಅಭಿಮನ್ಯು ಸೇರಿದಂತೆ ಕರ್ನಾಟಕ ಭೀಮ, ಮಹೇಂದ್ರ, ಸೇರಿ ಇನ್ನೂ ಕೆಲವು ಸಾಕಾನೆಗಳು ಬರುವ ನಿರೀಕ್ಷೆಯಿದೆ. ಈ ಬಾರಿ 10 ಸಾಕಾನೆ ಬಳಸಿ ಕಾಡಾನೆ ಸೆರೆ ಹಿಡಿಯುವ ಕಾರ್ಯಚರಣೆ ನಡೆಸಲಾಗುತ್ತದೆ.

    ಎಲ್ಲರಿಗೂ ಗೊತ್ತಿರುವಂತೆ ಕಳೆದ ನವೆಂಬರ್ 23, 2024ರಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದವಳೆಕಟ್ಟೆ ಅರಣ್ಯ ವಲಯ ಪ್ರದೇಶದಲ್ಲಿ ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆ ವೇಳೆಯಲ್ಲಿ ದಸರಾ ಆನೆ ಅರ್ಜುನ ಹೋರಾಡಿ ವೀರಮರಣ ಹೊಂದಿದ್ದ.

    ಈ ನೆಲೆಯಲ್ಲಿ ಇದೀಗ ಹಾಸನ ಜಿಲ್ಲೆಯ ಬೇಲೂರು ಭಾಗದಲ್ಲಿ ಇಂದಿನಿಂದ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯಲಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ಸಕಲ ಸಿದ್ಧತೆ ಮಾಡಿಕೊಂಡಿವೆ.

    ದಸರಾ ಆನೆ ಅಭಿಮನ್ಯು ನೇತೃತ್ವದಲ್ಲಿ ಕಾಡಾನೆ ಸೆರೆ ಹಿಡಿಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಹಾಸನ ಜಿಲ್ಲೆಯ ನೂತನ ಅರಣ್ಯ ಉಪ ಸಂರಕ್ಷಣಾಧಿಕಾರಿಯಾಗಿ ಸೌರಭ್ ಕುಮಾರ್ ಅವರನ್ನು ನೇಮಕ ಮಾಡಿ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದ್ದು ಅವರ ನೇತೃತ್ವದಲ್ಲಿ ಆನೆ ಸೆರೆ ಕಾರ್ಯಾಚರಣೆ ಆರಂಭವಾಗಲಿದೆ.

    ‘ಅದೇ ಆನೆ ಕೊಡಿ, ದಸರಾದಲ್ಲಿ ಅಂಬಾರಿ ಹೊರಿಸ್ತೀನಿ….’ ಶಪಥ ಮಾಡಿದ ಮಾವುತ ವಿನು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts