More

    ತಾಪ್ಸಿಗೆ ಹಾರೈಸಿದ್ದಕ್ಕೆ ಹೃತಿಕ್​ ಕಾಲೆಳೆದ ಕಂಗನಾ

    ಕಂಗನಾ ಮತ್ತು ತಾಪ್ಸಿ ಪನ್ನು ನಡುವೆ ಯುದ್ಧ ನಡೆಯುತ್ತಿರುವುದು ಗೊತ್ತೇ ಇದೆ. ತನ್ನ ಮಾತು ಒಪ್ಪಲಿಲ್ಲ ಎಂಬ ಕಾರಣಕ್ಕೆ, ಆಕೆಯನ್ನು ಕಂಗನಾ ಬಾಯಿಗೆ ಬಂದ ಹಾಗೆ ಬಯ್ಯುತ್ತಲೇ ಇದ್ದಾರೆ. ಅಷ್ಟೇ ಅಲ್ಲ, ಆಕೆಯನ್ನು ಬಿ-ಗ್ರೇಡ್​​ ನಟಿ ಎಂದು ಸಹ ಕಂಗನಾ ಕರೆದಿದ್ದಾರೆ.

    ಈಗ ತಾಪ್ಸಿಗೆ ಹೃತಿಕ್​ ರೋಶನ್​ ಶುಭ ಹಾರೈಸಿದರು ಎಂಬ ಕಾರಣಕ್ಕೆ, ಕಂಗನಾ ಮತ್ತೆ ವ್ಯಘ್ರರಾಗಿದ್ದಾರೆ. ಬರೀ ತಾಪ್ಸಿ ಮತ್ತು ಕಂಗನಾ ಮಾತ್ರವಲ್ಲ, ಬಾಲಿವುಡ್​ನ ಇನ್ನಷ್ಟು ಜನಪ್ರಿಯ ಸೆಲೆಬ್ರಿಟಿಗಳಿಗೂ ಕಾಲೆಳೆದಿದ್ದಾರೆ.

    ಇದನ್ನೂ ಓದಿ: ಚಿರು ಸಿನಿಮಾಗಳ ಡಬ್ಬಿಂಗ್​ನಲ್ಲಿ ಧ್ರುವ ಸರ್ಜಾ ಭಾಗಿಯಾಗುವುದು ಯಾವಾಗಿನಿಂದ?

    ಇಷ್ಟಕ್ಕೂ ಆಗಿದ್ದೇನೆಂದರೆ, ಇತ್ತೀಚೆಗೆ ತಾಪ್ಸಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಹೃತಿಕ್​ ರೋಶನ್​ ಸಹಜವಾಗಿಯೇ ಶುಭ ಹಾರೈಸಿದ್ದಾರೆ. ಅಷ್ಟೇ ಅಲ್ಲ, ತಾನು ತಾಪ್ಸಿಯ ಫ್ಯಾನ್​ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಸಿಟ್ಟಾಗಿರುವ ಟೀಮ್​ ಕಂಗನಾ, ಅವರಿಬ್ಬರಿಗೂ ಚಳಿ ಬಿಡಿಸಿದ್ದಾರೆ. ಮೊದಲೇ ಕಂಗನಾ, ಹೃತಿಕ್​ ರೋಶನ್​ ಅವರನ್ನು ಯಾವಾಗಲೂ ನನ್ನ ಎಕ್ಸ್​-ಬಾಯ್​ಫ್ರೆಂಡ್​ ಎಂದು ಹೇಳುತ್ತಿರುತ್ತಾರೆ. ಈ ಬಾರಿ ಹೃತಿಕ್​ಗೆ ಸಿಲ್ಲಿ ಅಂತಲೂ ಕರೆದಿದ್ದಾರೆ.

    ‘ತಾಪ್ಸಿ ಪನ್ನುಗೆ ಕಳೆದ 10 ವರ್ಷಗಳಲ್ಲಿ ಇಷ್ಟೊಂದು ಪ್ರೀತಿ ಯಾವತ್ತೂ ಸಿಕ್ಕಿರಲಿಲ್ಲ. ಕರಣ್​ ಜೋಹರ್​, ಅನುಷ್ಕಾ ಶರ್ಮಾ, ಆಲಿಯಾ ಭಟ್​, ಕತ್ರೀನಾ ಕೈಫ್​, ಹೃತಿಕ್​ ರೋಶನ್​ ಮುಂತಾದ ಯಾವ ಸೆಲೆಬ್ರಿಟಿ ಸಹ ಇಷ್ಟೊಂದು ಪ್ರೀತಿ ತೋರಿಸಿರಲಿಲ್ಲ. ಈಗ ತಾಪ್ಸಿ ನನ್ನ ವಿರುದ್ಧ ಮಾತಾಡುತ್ತಿದ್ದಾಳೆ ಅಂತ ಅವಳ ಮೇಲೆ ದಿಢೀರ್​ ಪ್ರೀತಿ ಶುರುವಾಗಿದೆ’ ಎಂದು ಟ್ವೀಟ್​ ಮಾಡಿದೆ.

    ಇದನ್ನೂ ಓದಿ: ಇನ್ನೆಷ್ಟು ದಿನ ಹೆದರಿಕೊಂಡು ಮನೆಯಲ್ಲೇ ಕೂರೋದು? ಅಕ್ಷಯ್​ ಪ್ರಶ್ನೆ

    ‘ಬಾಲಿವುಡ್​ ಮಾಫಿಯಾವನ್ನು ವಹಿಸಿಕೊಂಡು ಮಾತನಾಡುವುದರಿಂದ ಬಹಳ ಲಾಭವಿದೆ. ಈ ತರಹ ಫೇಕ್​ ಪ್ರೀತಿ ಸಿಗುತ್ತದೆ. ಹೊಸ ಚಿತ್ರಗಳು, ಪ್ರಶಸ್ತಿಗಳು ಎಲ್ಲವೂ ಹುಡುಕಿಕೊಂಡು ಬರುತ್ತದೆ’ ಎನ್ನುವ ಟೀಮ್​ ಕಂಗನಾ, ಹೊಸಬರಿಗೆ ಸಲಹೆಯನ್ನೂ ನೀಡಿದೆ.

    ‘ಹೊಸಬರಿಗೆ ಒಂದು ಸಲಹೆ. ಬಾಲಿವುಡ್​ನ ಗ್ಯಾಂಗ್​ಗಳಿಂದ ನಿಮಗೆ ಮೆಚ್ಚುಗೆ ಸಿಗುವುದು ಬಹಳ ಕಷ್ಟವಾಗಬಹುದು. ಏಕೆಂದರೆ, ಇಲ್ಲಿ ಬ್ಲಾಕ್​ಬಸ್ಟರ್​ಗಳು, ರಾಷ್ಟ್ರ ಪ್ರಶಸ್ತಿಗಳು, ಪದ್ಮಶ್ರೀ ಯಾವುದೂ ಅವರ ಗ್ಯಾಂಗ್​ಗೆ ಸೇರಿಕೊಳ್ಳುವುಕ್ಕೆ ಸಾಧ್ಯವಾಗುವುದಿಲ್ಲ. ಅದಕ್ಕೆ ಇನ್ನೇನೋ ಬೇಕಾಗುತ್ತದೆ’ ಎಂದು ಟೀಮ್​ ಕಂಗನಾ ಟ್ವೀಟ್​ ಮಾಡಿದೆ.

    ಸುಶಾಂತ್​ ಒಡೆತನದ ಫಾರ್ಮ್​ಹೌಸ್​ನಲ್ಲಿ ರಿಯಾ ಕುಟುಂಬದಿಂದ ಹೋಮ- ಹವನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts