More

    ವಿಪತ್ತು ಪರಿಹಾರ ನಿಧಿ: ದೇಣಿಗೆ ನೀಡಿದ ನಂತರ ಹಿಮಾಚಲ ಪ್ರದೇಶ ಸರ್ಕಾರದ ವಿರುದ್ಧ ಕಂಗನಾ ಗರಂ ಆಗಿದ್ದೇಕೆ?

    ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶಕ್ಕೆ ಸೇರಿದ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಂಗನಾ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಫೇಸ್‌ಬುಕ್ ಮತ್ತು ಎಕ್ಸ್‌ನಲ್ಲಿ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. “ಹಿಮಾಚಲ ಪ್ರದೇಶದ ದುರಂತಕ್ಕಾಗಿ ರಚಿಸಲಾದ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿ-2023 ಗೆ ಕೊಡುಗೆ ನೀಡಲು ಪ್ರಯತ್ನಿಸುತ್ತಿದ್ದೇನೆ. ಆದರೆ ಈ ವಿಪತ್ತು ನಿಧಿ ಪೋರ್ಟಲ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ದಿನಕ್ಕೆ 50-60 ಬಾರಿ ಪ್ರಯತ್ನಿಸಿದ ನಂತರ, ಅರ್ಧದಷ್ಟು ಹಣವನ್ನು ಮಾತ್ರ ದಾನ ಮಾಡಲು ಸಾಧ್ಯವಾಯಿತು. ಇದು ನಾಚಿಕೆಗೇಡಿನ ಸಂಗತಿ” ಎಂದು ಕಂಗನಾ ಹೇಳಿದ್ದಾರೆ.

    ಕಂಗನಾ ತಮ್ಮ ಸಿಎ ಮನೋಜ್ ಅವರೊಂದಿಗೆ ವಾಟ್ಸಾಪ್ ಚಾಟ್‌ನ ಸ್ಕ್ರೀನ್‌ಶಾಟ್ ಅನ್ನು ಸಹ ಹಂಚಿಕೊಂಡಿದ್ದಾರೆ. ಕಂಗನಾ ರಣಾವತ್ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ದೇಣಿಗೆ ನೀಡಲು ಬಯಸಿದ್ದರು, ಆದರೆ ಅವರು ಕೇವಲ 5 ಲಕ್ಷ ರೂ. ಮಾತ್ರ ಕೊಡಲು ಸಾಧ್ಯವಾಯಿತು. ಈ ಮಾಹಿತಿಯನ್ನು ಅವರು ಸಾಮಾಜಿಕ ಜಾಲತಾಣಗಳ ಮೂಲಕವೂ ಹಂಚಿಕೊಂಡಿದ್ದಾರೆ. ರಾಜ್ಯದಲ್ಲಿ ಸಂಭವಿಸಿದ ಅನಾಹುತಕ್ಕೆ ಹಿಮಾಚಲ ಪ್ರದೇಶಕ್ಕೆ ಸೇರಿದ ಕಲಾವಿದರು ಯಾವುದೇ ರೀತಿಯ ನೆರವು ನೀಡಿಲ್ಲ ಎಂಬುದು ಗಮನಾರ್ಹ. ಈ ಬಗ್ಗೆ ಕಲಾವಿದರು ಟೀಕೆಗಳನ್ನೂ ಎದುರಿಸುತ್ತಿದ್ದಾರೆ. ಬಾಲಿವುಡ್ ನಟ ಅಮೀರ್ ಖಾನ್ 25 ಲಕ್ಷ ರೂಪಾಯಿ ದೇಣಿಗೆ ನೀಡಿದ ನಂತರ ಈ ವಿಷಯ ಹೆಚ್ಚು ಬಹಿರಂಗವಾಗಿದೆಯಂತೆ.

    ಕಲಾವಿದರ ನೆರವಿನ ನಿರೀಕ್ಷೆಯಲ್ಲಿ ಜನತೆ…
    ಈಗ ಕಂಗನಾ ರಣಾವತ್ ಸರ್ಕಾರದ ಮೇಲೆ ಪ್ರಶ್ನೆಗಳನ್ನೂ ಎತ್ತಿದ್ದಾರೆ. ಕಂಗನಾ ರಣಾವತ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ವಿಭಿನ್ನ ರೀತಿಯ ಕಾಮೆಂಟ್‌ಗಳು ಸಹ ಕಂಡುಬರುತ್ತಿವೆ. ಇದಲ್ಲದೇ ರಾಜ್ಯಾದ್ಯಂತ ಜನರು ಇದಕ್ಕೆ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿರುವುದು ಕಂಡು ಬರುತ್ತಿದೆ. ಪ್ರಸ್ತುತ, ಈ ನಿಟ್ಟಿನಲ್ಲಿ ಹಿಮಾಚಲ ಪ್ರದೇಶ ಸರ್ಕಾರದ ಉತ್ತರವನ್ನು ನಿರೀಕ್ಷಿಸಲಾಗುತ್ತಿದೆ. ಇದಲ್ಲದೇ ರಾಜ್ಯದ ಇತರ ಕಲಾವಿದರಿಂದಲೂ ಹಿಮಾಚಲದ ಜನತೆ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಬಾಲಿವುಡ್ ನಟ ಅನುಪಮ್ ಖೇರ್, ಯಾಮಿ ಗೌತಮ್, ಬಾಲಿವುಡ್ ಹಿನ್ನೆಲೆ ಗಾಯಕ ಮೋಹಿತ್ ಚೌಹಾಣ್ ಮತ್ತು ಪ್ರಸಿದ್ಧ ಕಿರುತೆರೆ ಕಲಾವಿದೆ ರುಬಿನಾ ದಿಲಾಯಿಕ್ ಹಿಮಾಚಲದವರು. ಇಂತಹ ಸಂಕಷ್ಟದ ಸಮಯದಲ್ಲಿ ರಾಜ್ಯದ ಜನತೆ ಈ ಕಲಾವಿದರ ನೆರವಿನ ನಿರೀಕ್ಷೆಯಲ್ಲಿದ್ದಾರೆ.

    ಇದ್ದಕ್ಕಿದ್ದಂತೆ 95 ಶಾಲಾ ಬಾಲಕಿಯರಲ್ಲಿ ಕಾಣಿಸಿಕೊಂಡ ವಿಚಿತ್ರ ಕಾಯಿಲೆ; ವಿಡಿಯೋ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts