More

    ಕಂಗನಾಗೆ ವೈಪ್ಲಸ್​ ಸೆಕ್ಯುರಿಟಿ ಕೊಟ್ಟಿದ್ದು ಯಾಕೆ?

    ಮುಂಬೈ: ಬಾಲಿವುಡ್​ ನಟಿ ಕಂಗನಾ ರಣಾವತ್​ ಅವರಿಗೆ ಕೇಂದ್ರ ಸರ್ಕಾರವು ವೈಪ್ಲಸ್​ ಸೆಕ್ಯುರಿಟಿ ಕೊಟ್ಟಿದ್ದರ ಬಗ್ಗೆ ದೇಶಾದ್ಯಂತೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ತೆರಿಗೆದಾರರ ಹಣವನ್ನು ಈ ತರಹ ಪೋಲು ಮಾಡುತ್ತಿರುವುದು ಏಕೆ? ಈ ವೆಚ್ಚವನ್ನು ಯಾರು ಭರಿಸುತ್ತಾರೆ? ಎಂಬ ಪ್ರಶ್ನೆಗಳು, ಕೆಲವು ದಿನಗಳಿಂದ ಕೇಳಿ ಬರುತ್ತಲೇ ಇವೆ.

    ಏಕೆಂದರೆ, ವೈಪ್ಲಸ್​ ಭದ್ರತೆ ವಿಭಾಗದಲ್ಲಿ 10ರಿಂದ 11 ಕಮಾಂಡೋಗಳು ಇರಲಿದ್ದು, ಮೂರು ಶಿಫ್ಟ್​ಗಳಲ್ಲಿ ಕೆಲಸ ಮಾಡಲಿದ್ದಾರೆ. ಇನ್ನು ಇಬ್ಬರು ಅಥವಾ ಮೂವರು ಭದ್ರತಾ ಅಧಿಕಾರಿಗಳು 24 ಗಂಟೆಗಳ ಕಾಲ ಜತೆ ಇದ್ದರೆ, ಒಬ್ಬರನ್ನು ಮನೆಯ ಹತ್ತಿರ ನಿಯೋಜಿಸಲಾಗಿರುತ್ತದೆ.

    ಇದನ್ನೂ ಓದಿ: ರೆಹಮಾನ್, ಕಮಲ್ ಹಾಸನ್​ ಕಡೆಯಿಂದ ಸತತ ಆರು ಗಂಟೆ ಸಂಗೀತ ಸಂಜೆ ಕಾರ್ಯಕ್ರಮ

    ಇಷ್ಟಕ್ಕೂ ಕಂಗನಾ ವೈಪ್ಲಸ್​ ಸೆಕ್ಯುರಿಟಿ ಕೊಟ್ಟಿದ್ದು ಯಾಕೆ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಈ ವಿಷಯವಾಗಿ ಕೇಂದ್ರ ಸಚಿವ ಜಿ ಕಿಶನ್​ ರೆಡ್ಡಿ ಮಾತನಾಡಿದ್ದು, ಹಿಮಾಚಲ ಪ್ರದೇಶ ಸರ್ಕಾರವು ಭದ್ರತೆ ಕೊಡುವುದಕ್ಕೆ ಕೇಂದ್ರಕ್ಕೆ ಸೂಚಿಸಿದ್ದರಿಂದ, ಕೊಡಲಾಗಿದೆ ಎಂದು ಅವರು ಹೇಳಿದ್ದಾರೆ.

    ಕಿಶನ್​ ರೆಡ್ಡಿ ಹೇಳಿರುವ ಪ್ರಕಾರ, ಕಂಗನಾ ಇತ್ತೀಚೆಗೆ ಸಾಮಾಜಿಕ ವಿಷಯಗಳ ಕುರಿತು ಮಾತನಾಡಿದ್ದು, ಈ ಬಗ್ಗೆ ಹಲವರಿಗೆ ಅಸಮಾಧಾನವಾಗಿದೆಯಂತೆ. ಈ ಹಿನ್ನೆಲೆಯಲ್ಲಿ ತಮ್ಮ ಮಗಳಿಗೆ ಎಲ್ಲಿ ತೊಂದರೆಯಾಗಬಹುದೋ ಎಂಬ ಭಯದಿಂದ ಕಂಗನಾ ಅವರ ತಂದೆ, ಇತ್ತೀಚೆಗೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್​ ಥಾಕುರ್​ ಅವರನ್ನು ಭೇಟಿ ಮಾಡಿದ್ದಾರೆ. ತಮ್ಮ ಮಗಳಿಗೆ ಸೂಕ್ತ ಭದ್ರತೆ ಕೊಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.

    ಇದನ್ನೂ ಓದಿ: ಬೋಸ್ಟನ್​ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ‘ಅಮೃತಮತಿ’

    ಈ ಹಿನ್ನೆಲೆಯಲ್ಲಿ, ಹಿಮಾಚಲ ಪ್ರದೇಶ ಮುಖ್ಯಮಂತ್ರಿಗಳು ಕೇಂದ್ರಗೆ ಮನವಿ ಮಾಡಿ, ಕಂಗನಾಗೆ ಭದ್ರತೆ ಒದಗಿಸಬೇಕೆಂದು ಕೇಳಿಕೊಂಡರಂತೆ. ಈ ಕಾರಣದಿಂದ ಕಂಗನಾಗೆ ಭದ್ರತೆ ಒದಿಗಿಸಲಾಗಿದೆ ಎಂದು ಕಿಶನ್​ ರೆಡ್ಡಿ ಹೇಳಿಕೊಂಡಿದ್ದಾರೆ.

    ಹಾಗಾದರೆ, ಭದ್ರತೆ ಒದಿಗಿಸಿದ್ದಿಕ್ಕೆ ಯಾರು ಹಣ ಕೊಡುತ್ತಾರೆ? ರಾಜ್ಯ ಸರ್ಕಾರ ಭರಿಸುತ್ತದೆಯೋ ಅಥವಾ ಕೇಂದ್ರ ಸರ್ಕಾರವೇ ಭರಿಸುತ್ತದೆಯೋ ಎಂಬ ವಿಷಯವಾಗಿ ಕೇಂದ್ರ ಸಚಿವರು ಉತ್ತರ ನೀಡಿಲ್ಲ.

    ಯಾರ ಸೆಲ್​ ಪಕ್ಕ ರಿಯಾಳನ್ನು ಇರಿಸಲಾಗಿದೆ ಗೊತ್ತೆ?; ಅಲ್ಲಿ ಫ್ಯಾನ್​ ಇಲ್ಲ, ಹಾಸಿಗೆಯೂ ಇಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts