More

    ಬಾಲಿವುಡ್​ಗೆ ಬಂದ ಜೋ ಬಿಡೆನ್​; ಹೇಗೆ, ಏನು ಎನ್ನುವುದಕ್ಕೆ ಕಂಗನಾ ಬಳಿ ಇದೆ ಉತ್ತರ

    ಮುಂಬೈ: ಇತ್ತೀಚಿನ ದಿನಗಳಲ್ಲಿ ಹಲವಾರು ಕಾಂಟ್ರವರ್ಸಿಗಳ ಮೂಲಕ ಸುದ್ದಿಯಾಗುತ್ತಿರುವ ನಟಿ ಕಂಗನಾ ರಣಾವತ್​ ಇದೀಗ ಅಮೆರಿಕ ಅಧ್ಯಕ್ಷ ಜೋ ಬಿಡೆನ್​ ಅವರನ್ನೂ ಬಾಲಿವುಡ್​ಗೆ ಕರೆತಂದಿದ್ದಾರೆ. ಬಾಲಿವುಡ್​ನ ಪ್ರಸಿದ್ಧ ಸಿನಿಮಾ ಗಜನಿಯಲ್ಲಿ ಅಮಿರ್​ ಖಾನ್​ ಪಾತ್ರಕ್ಕೂ, ಅಧ್ಯಕ್ಷ ಜೋ ಬಿಡೆನ್​ಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ ಮುಂಬೈ ರಣಜಿ ತಂಡದ ಮಾಜಿ ಆಟಗಾರ ಬಂಧನ

    ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್​ ಪಕ್ಷದ ಜೋ ಬಿಡೆನ್​ ಜಯಭೇರಿ ಬಾರಿಸಿದ್ದಾರೆ. ಇವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರೆ, ಭಾರತ ಮೂಲದ ಕಮಲಾ ಹ್ಯಾರಿಸ್​ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಲ್ಲಿನ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಭಾರತದಲ್ಲಿ ಭಾರಿ ಪ್ರಮಾಣದ ಪರ, ವಿರೋಧ ಮಾತುಗಳು ಕೇಳಿಬಂದಿವೆ. ಕಮಲಾ ಬಗ್ಗೆ ಬಹುತೇಕರು ಸಂತಸ ವ್ಯಕ್ತಪಡಿಸಿದ್ದರೆ, ಟ್ರಂಪ್​ ಅಭಿಮಾನಿಗಳು ಬಿಡೆನ್​ ಗೆದ್ದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ಹಾದಿಯಲ್ಲಿ ನಟಿ ಕಂಗನಾ ಕೂಡ, ಬಿಡೆನ್​ ಅವರನ್ನು ಹೀಯಾಳಿಸಿ, ಕಮಲಾ ಅವರನ್ನು ಹೊಗಳಿದ್ದಾರೆ.

    ಜೋ ಬಿಡೆನ್​ ಗಜನಿ ಇದ್ದಂತೆ. ಅವರು ಪ್ರತಿ ಐದು ನಿಮಿಷಕ್ಕೆ ಎಲ್ಲವನ್ನೂ ಮರೆತುಬಿಡುತ್ತಾರೆ. ಅವರಿಗೆ ವರ್ಷಕ್ಕಿಂತ ಹೆಚ್ಚು ಕಾಲ ನೆನಪುಗಳು ಉಳಿಯುವುದು ಖಚಿತವಿಲ್ಲ. ಆದರೆ ಕಮಲಾ ಹ್ಯಾರಿಸ್​ ಸ್ಪಷ್ಟವಾಗಿ ಅಧಿಕಾರವನ್ನು ನಡೆಸುತ್ತಾರೆ. ಒಬ್ಬ ಮಹಿಳೆ ಮೇಲೇರಿದರೆ ಆಕೆ ಬೇರೆಲ್ಲ ಮಹಿಳೆಯರಿಗೂ ದಾರಿ ಮಾಡಿಕೊಡುತ್ತಾಳೆ ಎಂದು ಕಂಗನಾ ಟ್ವಿಟ್ಟರ್​ನಲ್ಲಿ ಹೇಳಿದ್ದಾರೆ.

    ಇದನ್ನೂ ಓದಿ: ನನ್ನ ಸಾವಿಗೆ ಉದ್ಧವ್​ ಠಾಕ್ರೆಯೇ ಕಾರಣ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡ ಕಂಡಕ್ಟರ್​!

    ಅದರ ಜತೆಯಲ್ಲಿ ಕಮಲಾ ಹ್ಯಾರಿಸ್​ ಅವರ ಭಾಷಣದ ತುಣುಕನ್ನೂ ಕಂಗನಾ ಹಂಚಿಕೊಂಡಿದ್ದಾರೆ. ಕಂಗನಾ ಅವರ ಈ ಹೋಲಿಕೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ಡೈರಿಯ ಹಾಲು ಕೊಳ್ಳುವ ಮುನ್ನ ಎಚ್ಚರ! ಡೈರಿಯ ಹಾಲಿನಲ್ಲೇ ಸ್ನಾನ ಮಾಡಿದ್ದಾನೆ ಈ ಭೂಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts