More

    ಕರೊನಾ ವೈರಸ್ ಹಾವಳಿಗೆ ಹೆದರಿದ ಕೇನ್ ರಿಚರ್ಡ್‌ಸನ್, ಭಾರತ ವಿರುದ್ಧದ ಏಕದಿನ ಸರಣಿಯಿಂದ ಹೊರಕ್ಕೆ..!

    ಸಿಡ್ನಿ: ಕರೊನಾ ಹಾವಳಿ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಇರಲು ಬಯಸಿರುವ ಆಸ್ಟ್ರೇಲಿಯಾ ವೇಗದ ಬೌಲರ್ ಕೇನ್ ರಿಚರ್ಡ್‌ಸನ್ ಭಾರತ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯಿಂದ ಹಿಂದೆ ಸರಿದಿದ್ದಾರೆ. ರಿಚರ್ಡ್‌ಸನ್ ಬದಲಿಗೆ ಆಂಡ್ರ್ಯೂ ಟೈಗೆ ಸ್ಥಾನ ನೀಡಲಾಗಿದೆ. ರಿಚರ್ಡ್‌ಸನ್ ತಮ್ಮ ನಿರ್ಧಾರವನ್ನು ಮಂಗಳವಾರ ರಾಷ್ಟ್ರೀಯ ಆಯ್ಕೆ ಸಮಿತಿಗೆ ತಿಳಿಸಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ‘ಇದೊಂದು ಕಠಿಣ ನಿರ್ಧಾರ, ಇಂಥ ವೇಳೆ ಕೇನ್ ಬೆಂಬಲಕ್ಕೆ ನಿಲ್ಲುವುದು ನಮ್ಮ ಕರ್ತವ್ಯ’ ಎಂದು ರಾಷ್ಟ್ರೀಯ ಆಯ್ಕೆಗಾರ ಟ್ರೆವೊರ್ ಹಾನ್ಸ್ ತಿಳಿಸಿದ್ದಾರೆ.

    ಕೇನ್ ತಮ್ಮ ತವರು ಅಡಿಲೇಡ್‌ನಲ್ಲೇ ಉಳಿಯಲು ಬಯಸಿದ್ದು, ಇತ್ತೀಚೆಗೆ ಜನಿಸಿರುವ ಮಗ ನೈಕಿ ಮತ್ತು ಪತ್ನಿ ಜತೆಗೆ ಸಮಯ ಕಳೆಯಲಿದ್ದಾರೆ. ಅವರಿಗೆ ಹಾಗೂ ಅವರ ಕುಟುಂಬಕ್ಕೆ ಆಯ್ಕೆ ಸಮಿತಿ ಬೆಂಬಲ ನೀಡಲಿದೆ ಎಂದು ಹೇಳಿದ್ದಾರೆ. ಅಡಿಲೇಡ್‌ನಲ್ಲಿ ಕಳೆದ ಒಂದು ವಾರದಿಂದ ಕೋವಿಡ್-19 ಪ್ರಕರಣಗಳು ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ರಿಚರ್ಡ್‌ಸನ್ ಸರಣಿಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಜತೆಗೆ ಅಂತರ ರಾಜ್ಯ ಸಂಪರ್ಕವನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ ಟೆಸ್ಟ್ ತಂಡದ ನಾಯಕ ಟೀಮ್ ಪೈನೆ, ಮಾರ್ನಸ್ ಲಂಬುಶೇನ್ ಅವರನ್ನು ಅಡಿಲೇಡ್‌ನಿಂದ ಸಿಡ್ನಿಗೆ ಏರ್‌ ಲಿಫ್ಟ್ ಮಾಡಲಾಗಿತ್ತು.

    ನವೆಂಬರ್ 27 ರಿಂದ ಏಕದಿನ ಸರಣಿ ಆರಂಭವಾಗಲಿದೆ. ಅಡಿಲೇಡ್‌ನಲ್ಲಿ ನಿಗದಿಯಂತೆ ಡಿ.17 ರಿಂದ ಅಹರ್ನಿಶಿ ಟೆಸ್ಟ್ ಪಂದ್ಯ ನಡೆಯಲಿದೆ ಎಂದು ಈಗಾಗಲೇ ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟಪಡಿಸಿದೆ. ದಕ್ಷಿಣ ಆಸ್ಟ್ರೇಲಿಯಾದಲ್ಲಿರುವ ಪರಿಸ್ಥಿತಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಗಮನಿಸುತಿರುವುದಾಗಿ ಹೇಳಿಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts