More

    ಜಾತಿ ತಾರತಮ್ಯ ಖಂಡಿಸಿದ ಮಹನೀಯ

    ಕನಕಗಿರಿ: ವಿಜಯನಗರ ಅರಸರ ಕಾಲದಲ್ಲಿ 78 ಗ್ರಾಮಗಳಿಗೆ ತಿಮ್ಮಪ್ಪ ನಾಯಕ ಮುಖ್ಯಸ್ಥರಾಗಿದ್ದರು. ಯುದ್ಧದಲ್ಲಿ ಗಾಯಗೊಂಡಿದ್ದರಿಂದ ಪ್ರಾಪಂಚಿಕ ಜೀವನ ತ್ಯಜಿಸಿ, ಸಂತ ಕನಕದಾಸರಾಗಿ ಪರಿವರ್ತನೆಗೊಂಡರು ಎಂದು ಕುರುಬ ಸಮುದಾಯದ ಮಾಜಿ ಜಿಲ್ಲಾಧ್ಯಕ್ಷ ಸಿದ್ದಪ್ಪ ನಿರ್ಲೂಟಿ ಹೇಳಿದರು.

    ತಾಲೂಕಿನ ಮಲ್ಲಿಗೆವಾಡದಲ್ಲಿ ಭಾನುವಾರ ಭಕ್ತ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುದ್ಧದಲ್ಲಾದ ಗಂಭೀರ ಗಾಯದ ಬಳಿಕ ಕನಕದಾಸ ಉತ್ಸಾಹವು ಶ್ರೀಕೃಷ್ಣನ ಕಡೆಗೆ ಸೆಳೆಯಿತು. ದೇಶ ಸಂಚಾರ ಕೈಗೊಂಖಿ ಕನಕದಾಸರಾದರು. ಕರ್ನಾಟಕ ಸಂಗೀತದಲ್ಲಿ ಭಗವಂತನ ಮೇಲೆ ಅಸಂಖ್ಯಾತ ರಚನೆಗಳನ್ನು ಮಾಡಿ ಸಮಾಜ ಸುಧಾರಕ, ದಾರ್ಶನಿಕ ಮತ್ತು ಸಂತರಲ್ಲಿ ಒಬ್ಬರಾದರು. ಜಾತಿ ತಾರತಮ್ಯವನ್ನು ಖಂಡಿಸಿದರು ಎಂದರು.

    ಕನಕದಾಸರು ಹರಿದಾಸ ಚಳವಳಿಯಿಂದ ಪ್ರೇರಿತರಾಗಿ ಅದರ ಸಂಸ್ಥಾಪಕ ವ್ಯಾಸರಾಜರ ಅನುಯಾಯಿಗಳಾದರು. ಉಡುಪಿಯಲ್ಲಿ ಭಕ್ತಿಯಿಂದ ಶ್ರೀಕೃಷ್ಣನನ್ನು ತಮ್ಮ ಕಡೆಗೆ ತಿರುಗಿ ಮಾಡುವಂತೆ ಮಾಡಿದರು. ದೇವರು ಎಲ್ಲ ಭಕ್ತರನ್ನು ಸಮಾನವಾಗಿ ಕಾಣುತ್ತಾನೆ ಎಂಬುದನ್ನು ತೋರಿಸಿಕೊಟ್ಟರು. ಇಂತಹ ದಾರ್ಶನಿಕರನ್ನು ಒಂದು ಜಾತಿ, ಧರ್ಮಕ್ಕೆ ಸೀಮಿತಗೊಳಿಸಬಾರದು. ಎಲ್ಲ ವರ್ಗದವರೂ ಪೂಜಿಸಬೇಕು ಎಂದು ತಿಳಿಸಿದರು.

    ಕನಕದಾಸರ ಭಾವಚಿತ್ರವನ್ನು ಗ್ರಾಮದ ಬೀರಪ್ಪ ದೇವಸ್ಥಾನದಿಂದ ಡೊಳ್ಳು, ವಾದ್ಯಗಳ ಮೂಲಕ ವಾಲ್ಮೀಕಿ ದೇವಸ್ಥಾನ, ದುರ್ಗಾದೇವಿ ದೇವಸ್ಥಾನ ಹಾಗೂ ಗ್ರಾಮದ ಪ್ರಮುಖ ಬೀದಿಗಳ ಮೆರವಣಿಗೆ ಮಾಡಲಾಯಿತು. ಅನ್ನಸಂತರ್ಪಣೆ ನಡೆಯಿತು.

    ಜಿಪಂ ಮಾಜಿ ಸದಸ್ಯ ಹನುಮೇಶ ನಾಯಕ, ಪ್ರಮುಖರಾದ ದೇವಪ್ಪ ತೋಳದ, ಮುದಿಯಪ್ಪ ನಾಯಕ, ಮುದಿಯಪ್ಪ ಕುಂಬಾರ, ಶರಣಪ್ಪ ನವಲಳ್ಳಿ, ಗ್ಯಾನಪ್ಪ ಗಾಣದಾಳ, ಬಸನಗೌಡ ಪಾಟೀಲ, ಯಂಕನಗೌಡ ಕಾಟಾಪುರ, ಬಸವಂತಗೌಡ ಪಾಟೀಲ್, ಗುರುನಾಥ, ಸಿದ್ದೇಶ ಕುಟುಗಮರಿ, ಶರಣಪ್ಪ ಹೆಬ್ಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts