More

    ವೆಂಕಟಪತಿ ಬಾವಿಯಲ್ಲಿ ವಿದ್ಯಾರ್ಥಿಗಳ ಸಲ್ಲಾಪ; ಅಕ್ರಮ ಚಟುವಟಿಕೆಗಳಗೆ ಕಡಿವಾಣ ಹಾಕಲು ಒತ್ತಾಯ


    ಕನಕಗಿರಿ: ಪಟ್ಟಣದ ಐತಿಹಾಸಿಕ ಸ್ಮಾರಕಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೂ ಯಾರು ಸಹ ಗಮನಹರಿಸುತ್ತಿಲ್ಲ. ಮೂರ‌್ನಾಲ್ಕು ದಿನಗಳ ಹಿಂದೆ ವೆಂಕಟಪತಿ ಬಾವಿಯಲ್ಲಿ ಕಾಲೇಜು ವಿದ್ಯಾರ್ಥಿಗಳು ಪ್ರೇಮ ಸಲ್ಲಾಪದಲ್ಲಿ ತೊಡಗಿರುವ ವಿಡಿಯೋ ವೈರಲ್ ಆಗಿರುವುದು ಅದಕ್ಕೆ ಸಾಕ್ಷಿ.

    ಪಿಯು, ಪದವಿ ಕಾಲೇಜು ಶಿಕ್ಷಣಕ್ಕಾಗಿ ತಾಲೂಕಿನ ಹಳ್ಳಿಗಳು ಹಾಗೂ ನೆರೆಯ ತಾಲೂಕಿನ ವಿದ್ಯಾರ್ಥಿಗಳು ಪಟ್ಟಣಕ್ಕೆ ಬರುತ್ತಾರೆ. ಕೆಲವರು ವಸತಿ ನಿಲಯಗಳಲ್ಲಿ ಉಳಿದು ಶಿಕ್ಷಣ ಪಡೆದರೆ, ಇನ್ನೂ ಕೆಲವರು ಬಸ್‌ಪಾಸ್ ತೆಗೆಸಿ ಊರಿಂದ ಓಡಾಡುತ್ತಾರೆ. ಆದರೆ, ಕೆಲ ಹುಡುಗ-ಹುಡಗಿಯರು ಕಾಲೇಜಿಗೆ ಬರುವ ನೆಪದಲ್ಲಿ, ತರಗತಿಗಳಿಗೆ ಚಕ್ಕರ್ ಹೊಡೆದು ಕದ್ದು ಮುಚ್ಚಿ ಸುತ್ತಾಡುತ್ತಿದ್ದಾರೆ. ಪ್ರೇಮಪಾಶಕ್ಕೆ ಬಿದ್ದ ಕೆಲವರು, ಐತಿಹಾಸಿಕ ಸ್ಮಾರಕಗಳಲ್ಲಿ ಸುತ್ತಾಡಿ ಮೈಮರೆತು ವರ್ತಿಸುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಮೂರ‌್ನಾಲ್ಕು ದಿನಗಳ ಹಿಂದೆ ಐತಿಹಾಸಿಕ ವೆಂಕಟಪತಿ ಬಾವಿಯಲ್ಲಿ ಕಾಲೇಜು ಸಮವಸ್ತ್ರದಲ್ಲೇ ಹುಡುಗ-ಹುಡುಗಿ ಅಪ್ಪಿ ಮುದ್ದಾಡಿದ್ದಾರೆ. ಹಲವರು ವಿಶ್ರಾಂತಿ ಪಡೆಯಲು ಕುಳಿತಿದ್ದರೂ ಕ್ಯಾರೆ ಎನ್ನದೆ ಪ್ರೇಮಿಗಳು ತಮ್ಮ ಲೋಕದಲ್ಲಿ ಮುಳುಗಿದ್ದು, ವ್ಯಕ್ತಿಯೊಬ್ಬ ಮೊಬೈಲ್‌ನಲ್ಲಿ ವಿಡಿಯೋ ಸೆರೆ ಹಿಡಿದು ಹರಿಬಿಟ್ಟಿದ್ದಾರೆ. ಪದವಿ ಕಾಲೇಜಿನ ವಿದ್ಯಾರ್ಥಿಗಳು ಎನ್ನಲಾಗಿದೆ. ನ್ಯಾಕ್ ಕಮಿಟಿ ಬರುವ ನಿರೀಕ್ಷೆಯಲ್ಲಿ ಸಿದ್ಧತೆ ನಡೆಸಿದ್ದ ಉಪನ್ಯಾಸಕ ವರ್ಗಕ್ಕೂ ತಲೆನೋವಾಗಿದೆ. ಮಕ್ಕಳ ಕೃತ್ಯದಿಂದ ಪಾಲಕರು ತಲೆ ತಗ್ಗಿಸುವಂತಾಗುತ್ತದೆ.

    ಭದ್ರತೆ ಕೊರತೆಯೇ ಕಾರಣ
    ಕನಕಗಿರಿಯಲ್ಲಿ ಹಲವು ಸ್ಮಾರಕಗಳಿವೆ. ಇಂತಹ ಐತಿಹಾಸಿಕ ಸ್ಥಳಗಳಿಗೆ ರಕ್ಷಣೆ ಇಲ್ಲದ ಕಾರಣ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಬೀಳುತ್ತಿಲ್ಲ. ಹೀಗಾಗಿ ಇಂಥ ಚಟುವಟಿಕೆಗಳಲ್ಲಿ ರಾಜಾರೋಷವಾಗಿ ನಡೆಯಲು ಕಾರಣ ಎಂಬುದು ಸ್ಥಳೀಯರ ಆರೋಪವಾಗಿದೆ. ಹೀಗೆ ಬಹಿರಂಗವಾಗಿ ಲವ್ವಿಡವ್ವಿ ನಡೆಸಿರುವುದರಿಂದ ಪ್ರವಾಸಿಗರು ಹಾಗೂ ಸ್ಥಳೀಯರ ಮುಜುಗರಕ್ಕೆ ಕಾರಣವಾಗಿದೆ.

    ವೆಂಕಟಪತಿ ಬಾವಿ ಪಟ್ಟಣ ಪಂಚಾಯಿತಿಗೆ ಬರುವುದಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ವ್ಯಾಪ್ತಿಗೆ ತೆಗೆದುಕೊಂಡು ಅಭಿವೃದ್ಧಿಪಡಿಸಿ ಇಂತಹ ಚಟುವಟಿಕೆಗಳು ನಡೆಯದಂತೆ ಕಾವಲುಗಾರನನ್ನು ನೇಮಿಸಲಾಗುವುದು.
    | ದತ್ತಾತ್ರೇಯ ಹೆಗಡೆ, ಮುಖ್ಯಾಧಿಕಾರಿ, ಪಪಂ, ಕನಕಗಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts