More

    ಟ್ವಿಟ್ಟರ್‌ನಲ್ಲಿ ಪ್ರಶಂಸೆಗೊಳಗಾದ ಶೌಚಗೃಹ

    ಕನಕಗಿರಿ: ತಾಲೂಕಿನ ಗೌರಿಪುರ ಗ್ರಾಪಂ ವ್ಯಾಪ್ತಿಯ ಅಡವಿಬಾವಿ ದೊಡ್ಡತಾಂಡಾ ಸಹಿಪ್ರಾ ಶಾಲೆಯಲ್ಲಿ ಉದ್ಯೋಗ ಖಾತ್ರಿಯಡಿ ನಿರ್ಮಾಣವಾದ ಶೌಚಗೃಹ ರಾಜ್ಯ ನರೇಗಾ ಟ್ವಿಟರ್‌ನಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

    2021-22ನೇ ಸಾಲಿನ ನರೇಗಾ ಯೋಜನೆಯ 4.14 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಶೌಚಗೃಹವು ಹೈ ಟೆಕ್ ಆಗಿದ್ದು, ಗೋಡೆಗೆ ಸ್ವಚ್ಛತೆ, ಮಕ್ಕಳು ಕೈ ತೊಳೆಯುವುದು, ಗಿಡ ಬೆಳೆಸುವುದು, ಡಸ್ಟ್‌ಬಿನ್ ಬಳಕೆ ಸೇರಿ ಇನ್ನಿತರ ಚಿತ್ರ ಬಿಡಿಸಲಾಗಿದೆ.

    ನ.4ರಂದು ಕರ್ನಾಟಕ ನರೇಗಾ ಟ್ವಿಟ್ಟರ್ ಖಾತೆಯಲ್ಲಿ ಕನಕಗಿರಿ ತಾಲೂಕು ಅಡವಿಬಾವಿ ದೊಡ್ಡತಾಂಡಾದಲ್ಲಿ ನರೇಗಾದಲ್ಲಿ ನಿರ್ಮಿಸಿರುವ ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕ ಶೌಚಗೃಹಗಳು ಶಾಲಾ ಮೈದಾನದಲ್ಲಿ ವಿದ್ಯಾರ್ಥಿಗಳಿಗೆ ಸ್ವಚ್ಛತೆ ಹಾಗೂ ನೈರ್ಮಲ್ಯದ ಜಾಗೃತಿ ಹೆಚ್ಚಿಸಲು ಸಹಕಾರಿಯಾಗಿದೆ ಎಂದು ಬರೆಯಲಾಗಿದ್ದು, ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಶಾಲೆಯಲ್ಲಿ ಹೈ ಟೆಕ್ ಶೌಚಗೃಹ ನಿರ್ಮಾಣದಿಂದ ಮಕ್ಕಳು ಹಾಗೂ ಶಿಕ್ಷಕರಿಗೆ ಖುಷಿ ತಂದಿದೆ. ನರೇಗಾದಡಿ ಈ ಹೈ ಟೆಕ್ ಶೌಚಗೃಹವಲ್ಲದೇ, ಅಡುಗೆ ಕೋಣೆ, ಆಟದ ಮೈದಾನವನ್ನು ನಿರ್ಮಿಸಿದ್ದು, ನರೇಗಾ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಗೌರಿಪುರ ಪಿಡಿಒ ನಾಗಲಿಂಗಪ್ಪ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts