More

    ತೊಗರಿ ಬೆಳೆ ಹಾನಿ ಪರಿಹಾರ ನೀಡಿ: ತಹಸೀಲ್ದಾರ್‌ಗೆ ಕನಕಗಿರಿ ರೈತ ಸಂಘ-ಹಸಿರು ಸೇನೆ ಮನವಿ

    ಕನಕಗಿರಿ: ಅಕಾಲಿಕ ಮಳೆಯಿಂದ ತೊಗರಿ ಗಿಡದಲ್ಲೇ ಮೊಳಕೆಯೊಡೆದು ನಷ್ಟಕ್ಕೀಡಾದ ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕ ಗುರುವಾರ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡಗೆ ಮನವಿ ಸಲ್ಲಿಸಿತು.

    ತಾಲೂಕು ಅಧ್ಯಕ್ಷ ಭೀಮನಗೌಡ ಮಾತನಾಡಿ, ಕನಕಗಿರಿ ತಾಲೂಕು ಒಣ ಬೇಸಾಯ ಪ್ರದೇಶವಾಗಿದ್ದು, ಈ ಬಾರಿ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ಹೆಚ್ಚಿನ ಪ್ರಮಾಣದಲ್ಲಿ ತೊಗರಿ ಬಿತ್ತನೆ ಮಾಡಿದ್ದು, ಫಸಲು ಚೆನ್ನಾಗಿದೆ. ಆದರೆ ಮಾಂಡೌಸ್ ಚಂಡಮಾರುತದ ಪರಿಣಾಮ ಸುರಿದ ಅಕಾಲಿಕ ಮಳೆಗೆ ಗಿಡದಲ್ಲಿಯೇ ಮೊಳಕೆಯೊಡದಿದೆ. ಇದರಿಂದ ಬಾಯಿಗೆ ಬಂದ ತುತ್ತು ಕೈಯಿಗೆ ಬಾರದಂತಾಗಿದೆ. ಮಾಹಿತಿ ಇದ್ದರೂ ಕೃಷಿ ಅಧಿಕಾರಿ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಬೆಳೆ ಪರಿಶೀಲನೆ ನಡೆಸಿಲ್ಲ. ನಷ್ಟಕ್ಕೀಡಾದ ರೈತರಲ್ಲಿ ಕೆಲವರು ಕುರಿ ಬಿಟ್ಟು ಮೇಯಿಸಿದ್ದರೆ, ಕೆಲವರು ಬಂದಷ್ಟು ಫಸಲನ್ನು ಕೊಯ್ದು ಮನೆಗೆ ಸೇರಿಸಿದ್ದಾರೆ. ನಷ್ಟ ಅನುಭವಿಸಿದ ತೊಗರಿ ಬೆಳೆಗಾರರಿಗೆ ರೈತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts