More

    ಕನಕಗಿರಿಯಲ್ಲಿ ಮತಗಟ್ಟೆ ಅಧಿಕಾರಿ, ಸಿಬ್ಬಂದಿ ತರಬೇತಿ

    ಕನಕಗಿರಿ: ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಪಿಆರ್‌ಒ ಹಾಗೂ ಎಪಿಆರ್‌ಒಗಳಿಗೆ ಪಿಪಿಟಿ ಮೂಲಕ ಆಯೋಗದ ಮಾಹಿತಿ ನೀಡಲಾಗುತ್ತಿದೆ ಎಂದು ಚುನಾವಣಾಧಿಕಾರಿ ಸಮೀರ್ ಮುಲ್ಲಾ ಹೇಳಿದರು.

    ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ(ಪ್ರೌಢ ವಿಭಾಗ)ಯಲ್ಲಿ ಪಿಆರ್‌ಒ ಹಾಗೂ ಎಪಿಆರ್‌ಒಗಳಿಗೆ ಭಾನುವಾರ ಏರ್ಪಡಿಸಿದ್ದ ಚುನಾವಣಾ ತರಬೇತಿ ಕಾರ್ಯಾಗಾರ ವೀಕ್ಷಿಸಿ ಮಾತನಾಡಿದರು. ಮೇ 10ರಂದು ನಡೆಯುವ ಮತದಾನ ಪ್ರಕ್ರಿಯೆ ಹಿನ್ನೆಲೆಯಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರವಾರು ಅಧೀಕ್ಷಕರು ಹಾಗೂ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ.

    ಇದನ್ನೂ ಓದಿ: ಪೊಲೀಸರಿಗೆ ಗುಡ್​ ನ್ಯೂಸ್; ಚುನಾವಣೆ ಕರ್ತವ್ಯ ಭತ್ಯೆ ಹೆಚ್ಚಳ

    ಮತಗಟ್ಟೆಗಳಿಗೆ ಒಟ್ಟು 172 ಪಿಆರ್‌ಒ, 276 ಎಪಿಆರ್‌ಒಗಳು ನಿಯೋಜನೆಗೊಂಡಿದ್ದು, ಪ್ರತಿ ಕೊಠಡಿಗೆ 50 ಅಭ್ಯರ್ಥಿಗಳನ್ನು ಮೀರದಂತೆ ಪಿಪಿಟಿ ಮೂಲಕ ಚುನಾವಣಾ ಆಯೋಗದ ಮಾಹಿತಿ ನೀಡಲಾಗುತ್ತಿದೆ. ಅಲ್ಲದೆ, ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳ ಕುರಿತು ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

    ಶಿಶು ಪಾಲನಾ ಕೇಂದ್ರ ಆರಂಭ

    ಒಟ್ಟು 9 ಕೊಠಡಿಯಲ್ಲಿ ಸೆಕ್ಟರ್ ಆಫಿಸರ್ಸ್ ಹಾಗೂ ಅಸ್ಲೆಂಬಿ ಲೆವೆಲ್ ಮಾಸ್ಟರ್ ಟ್ರೈನರ್‌ಗಳ ಮೂಲಕ ತರಬೇತಿ ನೀಡಲಾಗುತ್ತಿದೆ. ತರಬೇತಿಯಲ್ಲಿ ಮಾಹಿತಿ ಕೇಂದ್ರವನ್ನು (ಹೆಲ್ಪ್ ಡೆಸ್ಕ್) ತೆರೆಯಲಾಗಿದೆ. ಎಲ್ಲ ಸಿಬ್ಬಂದಿಗೆ ಫಾರ್ಮ್ 12, 12ಎ ಅನ್ನು ಕಲ್ಪಿಸಲಾಗಿದೆ.

    ಅದನ್ನು ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಭರ್ತಿ ಮಾಡಿಕೊಟ್ಟರೆ ಅವರಿಗೆ ಮತ ಚಲಾಯಿಸಲು ಅನುಕೂಲ ಮಾಡಿಕೊಡಲಾಗುವುದು. ಅಲ್ಲದೆ, ಆರೋಗ್ಯ ಕೇಂದ್ರ, ಮಹಿಳಾ ಮತಗಟ್ಟೆ ಸಿಬ್ಬಂದಿ ಚುನಾವಣೆ ಕರ್ತವ್ಯಕ್ಕೆ ಮಕ್ಕಳನ್ನು ಕರೆ ತಂದಿರುವ ಹಿನ್ನೆಲೆಯಲ್ಲಿ ಅವರಿಗೆ ತೊಂದರೆ ಆಗಬಾರದೆಂಬ ನಿಟ್ಟಿನಲ್ಲಿ ಶಿಶು ಪಾಲನಾ ಕೇಂದ್ರವನ್ನು ತೆರೆಯಲಾಗಿದೆ ಎಂದರು.

    ಸಹಾಯಕ ಚುನಾವಣಾಧಿಕಾರಿಗಳಾದ ಸಂಜಯ್ ಕಾಂಬ್ಳೆ, ಬಸವರಾಜ್ ಎನ್, ತಾಪಂ ಇಒಗಳಾದ ಚಂದ್ರಶೇಖರ್ ಕಂದಕೂರ, ನರಸಪ್ಪ ಎನ್. ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts