More

    ನೇರ-ನಿಷ್ಠುರವಾದಿಯಾಗಿದ್ದ ಉಮೇಶ ಕತ್ತಿ: ಬಣಜಿಗ ಸಮುದಾಯದ ತಾಲೂಕು ಅಧ್ಯಕ್ಷ ಶರಣಪ್ಪ ಹೇಳಿಕೆ

    ಕನಕಗಿರಿ: ಅಭಿವೃದ್ಧಯಲ್ಲಿ ಹಿಂದುಳಿದಿರುವ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವಾಗಿಸಬೇಕೆಂದು ಗಟ್ಟಿ ಧ್ವನಿಯೆತ್ತಿದವರು ಉಮೇಶ ಕತ್ತಿ ಎಂದು ಬಣಜಿಗ ಸಮುದಾಯದ ತಾಲೂಕು ಅಧ್ಯಕ್ಷ ಶರಣಪ್ಪ ಭತ್ತದ್ ಹೇಳಿದರು.

    ಪಟ್ಟಣದ ಎಪಿಎಂಸಿ ಶ್ರಮಿಕ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಚಿವ ಉಮೇಶ ಕತ್ತಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ರಾಜಕೀಯ ಹಿನ್ನೆಲೆಯುಳ್ಳ ಮನೆತನದಿಂದ ಬಂದಿದ್ದ ಉಮೇಶ ಕತ್ತಿ ನೇರ ಹಾಗೂ ನಿಷ್ಠುರವಾದಿಯಾಗಿದ್ದರು. 2010ರಲ್ಲಿ ಕೃಷಿ ಸಚಿವರಾಗಿ ಮೊದಲ ಬಾರಿಗೆ ರಾಜ್ಯದಲ್ಲಿ ಕೃಷಿ ಬಜೆಟ್ ಮಂಡಿಸಿದ್ದರು. ಅಲ್ಲದೆ, ಅಭಿವೃದ್ಧಿಗಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಘೋಷಿಸಬೇಕೆಂದು ಒತ್ತಾಯಿಸುತ್ತಿದ್ದರು. ಅವರ ಅಕಾಲಿಕ ಮರಣ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

    ಪ್ರಮುಖರಾದ ಸಂಗಪ್ಪ ಟೆಂಗಿನಕಾಯಿ, ಅಂದಾನಪ್ಪ, ವಿರೂಪಾಕ್ಷಪ್ಪ ಭತ್ತದ್, ಸಂತೋಷ ಹಾದಿಮನಿ, ಕರಬಸಪ್ಪ ಹಾದಿಮನಿ, ಕಳಕಪ್ಪ ಹಾದಿಮನಿ, ರುದ್ರಮುನಿಯಪ್ಪ ಪ್ರಭುಶೆಟ್ಟರ್, ಸಿದ್ದಪ್ಪ ಕಪಲಿ, ಸಂಗಪ್ಪ ಅವಲಿ, ಪ್ರಶಾಂತ, ಶ್ರೀಶೈಲ ಪಾಟೀಲ್, ಕರಬಸಪ್ಪ ಉಡುಮಕಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts