More

    ತೋಟಗಾರಿಕೆ ಪಾರ್ಕ್‌ಗೆ ಬಜೆಟ್‌ನಲ್ಲಿ ಅನುದಾನ: ಶಾಸಕ ಬಸವರಾಜ ದಢೇಸುಗೂರು ಭರವಸೆ

    ಕನಕಗಿರಿ: ತಾಲೂಕಿನ ಸಿರಿವಾರ ಬಳಿ 186 ಎಕರೆ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ತೋಟಗಾರಿಕೆ ಪಾರ್ಕ್‌ನ ಡಿಪಿಆರ್‌ಗೆ ರಾಜ್ಯ ಬಜೆಟ್‌ನಲ್ಲಿ ಸರ್ಕಾರ ಅನುದಾನ ಮೀಸಲಿಡಲಿದೆ ಎಂದು ಶಾಸಕ ಬಸವರಾಜ ದಢೇಸುಗೂರು ಹೇಳಿದರು.

    ಪಟ್ಟಣದ ಬಿಜೆಪಿ ಮಂಡಲ ಕಚೇರಿ ಬಳಿ ಭಾನುವಾರ ಹಮ್ಮಿಕೊಂಡಿದ್ದ ವಿವಿಧ ಕಾಮಗಾರಿ ಉದ್ಘಾಟನೆ ಹಾಗೂ ಶಂಕು ಸ್ಥಾಪನೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ಷೇತ್ರದ ತೋಟಗಾರಿಕೆ ಬೆಳೆಗಳಿಗೆ ಉತ್ತಮ ದರ ದೊರೆಯುವುದರ ಜತೆಗೆ ಬೆಳೆಯಲು ಬೇಕಾದ ತಂತ್ರಜ್ಞಾನ, ಶೇಖರಣೆ ಮಾಡುವ ಘಟಕಗಳ ಸಹಿತ ಇಸ್ರೇಲ್ ಮಾದರಿಯಲ್ಲಿ ಪಾರ್ಕ್ ನಿರ್ಮಿಸಲು ಉದ್ದೇಶಿಸಿದ್ದು, ಸಿಎಂ ಬೊಮ್ಮಾಯಿ ಒಪ್ಪಿಗೆ ಸೂಚಿಸಿದ್ದಾರೆ. ಭೂಮಿ ಹಸ್ತಾಂತರ ಪ್ರಕ್ರಿಯೆ ನಡೆದಿದೆ. ಯೋಜನೆಯ ಡಿಪಿಆರ್‌ಗೆ ಅನುದಾನ ಮೀಸಲಿಟ್ಟು ಜೂನ್-ಜುಲೈ ವೇಳೆಗೆ ಶಂಕು ಸ್ಥಾಪನೆ ಮಾಡುವ ಭರವಸೆ ಸಿಎಂ ನೀಡಿದ್ದಾರೆ ಎಂದರು.

    ಕನಕಗಿರಿ ತಾಲೂಕನ್ನು ನೀರಾವರಿಯಾಗಿಸುವ ನವಲಿ ಸಮಾನಾಂತರ ಜಲಾಶಯಕ್ಕೆ ಎರಡು ಮೂರು ಡಿಪಿಆರ್‌ಗಳಿದ್ದು, 33 ಟಿಎಂಸಿ ನೀರು ಸಂಗ್ರಹದ ಯೋಜನೆಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಯೋಜನೆಯಲ್ಲಿ ತಾಲೂಕಿನ 7 ಗ್ರಾಮ ಮುಳುಗಡೆಯಾಗಲಿದ್ದು, ನೂರು ಗ್ರಾಮಗಳು ನೀರಾವರಿಯಾಗಲಿವೆ. ರೈತರಿಗೆ ಅನ್ಯಾಯವಾಗದಂತೆ ಯೋಜನೆ ಜಾರಿಗೆ ತಂದು, ಸೂಕ್ತ ಪರಿಹಾರದ ಜತೆಗೆ ಸ್ಥಳಾಂತರ ಮಾಡಲಾಗುವುದು.

    ಕೃಷ್ಣ ಬಿ ಸ್ಕೀಂನಡಿ ತಾಲೂಕಿಗೆ ನೀರೊದಗಿಸುವ ಕಾಮಗಾರಿಗೆ ಪೂಜೆ ಸಲ್ಲಿಸಲಾಗುವುದು. 62 ಕೋಟಿ ರೂ. ವೆಚ್ಚದಲ್ಲಿ ಕಾರಟಗಿ-ಕನಕಗಿರಿ ರಸ್ತೆ ಕಾಮಗಾರಿ ಮಾಡಲಾಗುತ್ತಿದ್ದು, ಈಗಾಗಲೇ ಮೊದಲ ಹಂತದದ ಟೆಂಡರ್ ನಡೆದಿದೆ ಎಂದು ತಿಳಿಸಿದರು. ಪಕ್ಷದ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಸಣ್ಣ ಕನಕಪ್ಪ ಮಾತನಾಡಿದರು. ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ, ಕಾರ್ಯದರ್ಶಿ ವಾಗೇಶ ಹಿರೇಮಠ, ಪ್ರಮುಖರಾದ ಕನಕಪ್ಪ ಗುಡುದೂರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts