More

    ತೋಟಗಾರಿಕಾ ಪಾರ್ಕ್ ಡಿಪಿಆರ್ ಸಿದ್ಧ: ಸರ್ಕಾರಕ್ಕೆ ಇನ್ನೊಂದು ವಾರದಲ್ಲಿ ವರದಿ ಸಲ್ಲಿಕೆ

    ಕನಕಗಿರಿ: ತಾಲೂಕಿನ ಸಿರಿವಾರ ಬಳಿ ನಿರ್ಮಿಸಲು ಉದ್ದೇಶಿಸಿರುವ ತೋಟಗಾರಿಕೆ ಪಾರ್ಕ್‌ನ ಡಿಪಿಆರ್ ಸಿದ್ಧಗೊಂಡಿದ್ದು, ವಾರದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಶಾಸಕ ಬಸವರಾಜ ದಢೇಸುಗೂರು ಹೇಳಿದರು.

    ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತೋಟಗಾರಿಕೆ ಪಾರ್ಕ್‌ಗೆ 242 ಎಕರೆ ಭೂಮಿ ಅವಶ್ಯವಿದೆ. ಹುಲಿಹೈದರ್ ಹೋಬಳಿಯ ಸಿರಿವಾರ ಗ್ರಾಮದ ಸರ್ವೇ ನಂ.124ರ 192 ಎಕರೆ ಸರ್ಕಾರಿ ಭೂಮಿ ಜತೆಗೆ ಇನ್ನುಳಿದ 50 ಎಕರೆ ಭೂಮಿಯನ್ನು ರೈತರಿಂದ ಖರೀದಿಸಲಾಗುವುದು. ಇಸ್ರೇಲ್ ಮಾದರಿಯಲ್ಲಿ ಹೈಟೆಕ್ ತೋಟಗಾರಿಕೆ ಪಾರ್ಕ್ ನಿರ್ಮಾಣದ ಉದ್ದೇಶವನ್ನು ಸರ್ಕಾರ ಹೊಂದಿದೆ. ಡಿಪಿಆರ್ ಸಿದ್ಧಪಡಿಸಲು ಒಂದು ಕೋಟಿ ರೂ. ಮಂಜೂರಾಗಿತ್ತು. ಈಗ ಕ್ರಿಯಾಯೋಜನೆ ತಯಾರಿಸಿದ್ದು, ವಾರದೊಳಗೆ ಇಲಾಖೆ ಅಧಿಕಾರಿಗಳು ಹಾಗೂ ಸಚಿವರ ಜತೆ ಚರ್ಚಿಸಿ ಯೋಜನೆಯ ವಿಸ್ತ್ರತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ತೋಟಗಾರಿಕೆ ಪಾರ್ಕ್ ನಿರ್ಮಾಣವಾದರೆ ಈ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ತರಕಾರಿ ಹಾಗೂ ವಿವಿಧ ಬಗೆಯ ಹಣ್ಣುಗಳಿಗೆ ನ್ಯಾಯಯುತ ಬೆಲೆ ಸಿಗಲಿದ್ದು, ರೈತರಿಗೆ ಅನುಕೂಲವಾಗಲಿದೆ. ಯೋಜನೆಯಿಂದ 15 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರೆಯಲಿದೆ ಎಂದರು.

    ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಮಾತನಾಡಿ, ಅಗತ್ಯ ಭೂಸ್ವಾಧೀನದ ಬಳಿಕ ಪಾರ್ಕ್ ನಿರ್ಮಾಣದ ಕಾರ್ಯ ಆರಂಭವಾಗಲಿದೆ. ಕಡಿಮೆ ನೀರು ಹಾಗೂ ಖರ್ಚಿನಲ್ಲಿ ಹೆಚ್ಚು ಲಾಭಗಳಿಸುವ ಉತ್ತಮ ಯೋಜನೆ ಇದಾಗಿದೆ. ದೇಶದ ಪ್ರಮುಖ ನಗರಗಳಿಗೆ ಈ ಭಾಗದಿಂದ ಹಣ್ಣುಗಳನ್ನು ಕಳಿಸಲು ಸಹಕರಿಯಾಗಲಿದೆ ಎಂದರು. ತಹಸೀಲ್ದಾರ್ ಧನಂಜಯ ಮಾಲಗಿತ್ತಿ, ಡಿಪಿಆರ್‌ನ ನಿರ್ದೇಶಕ ಶಿವ ಪ್ರಕಾಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts