More

    ಕನಕಗಿರಿಯಿಂದ ನವಲಿಗೆ ಪಾದಯಾತ್ರೆ

    ಕನಕಗಿರಿ, ಪಾದಯಾತ್ರೆ, ಕನಕಾಚಲಪತಿ ದೇವಸ್ಥಾನ, ಕನಕಗಿರಿಯಿಂದ ನವಲಿ ಭೋಗಾಪುರೇಶ ದೇವಸ್ಥಾನದವರೆಗೆ,

    Kanakagiri, hiking, Kanakachalapathy Temple, from Kanakagiri to the Navali Bhogapureshwara Temple,


    ಕನಕಗಿರಿ: ಇತಿಹಾಸ ಪ್ರಸಿದ್ಧ ಕನಕಾಚಲಪತಿ ದೇವಸ್ಥಾನದಿಂದ ತಾಲೂಕಿನ ಮತ್ತೊಂದು ಪುರಾಣ ಪ್ರಸಿದ್ಧ ದೇವಸ್ಥಾನವಾದ ನವಲಿ ಗ್ರಾಮದ ಭೋಗಾಪುರೇಶ ದೇವಸ್ಥಾನದ ವರೆಗೆ 200ಕ್ಕೂ ಅಧಿಕ ಬ್ರಾಹ್ಮಣ ಸಮುದಾಯದವರು ಭಾನುವಾರ ಪಾದಯಾತ್ರೆ ಕೈಗೊಂಡರು.

    ಕಲಬುರ್ಗಿಯಿಂದ ಆಗಮಿಸಿದ್ದ ಪಾದಯಾತ್ರಿಗಳು ಶನಿವಾರ ರಾತ್ರಿಯೇ ಕನಕಾಚಲಪತಿ ದೇವಸ್ಥಾನದಲ್ಲಿ ತಂಗಿದ್ದು, ಭಾನುವಾರ ಬೆಳಗ್ಗೆ ನವಲಿಯಲ್ಲಿ ಪಾದಯಾತ್ರೆ ಕೈಗೊಂಡರು.

    ನವಲಿ ಭೋಗಾಪುರೇಶ ದೇವಸ್ಥಾನದಲ್ಲಿ ಪಾರಾಯಣ, ಭಜನೆ, ಪವಮಾನ ಹೋಮ ಮೊದಲಾದ ಧಾರ್ಮಿಕ ಕಾರ್ಯಕ್ರಮ ನಡೆದವು. ಪಂ.ಗೋಪಾಲ ಆಚಾರ್ಯ ಅಕಮಂಚಿ ಮತ್ತು ಶ್ರೀನಿವಾಸ ಆಚಾರ್ಯ ಪದಕಿ ಭೋಗಾಪುರೇಶನ ಮಹಿಮೆ ಕುರಿತು ಉಪನ್ಯಾಸ ನೀಡಿದರು.

    ಶೇಷಗಿರಿ ಜ್ಯೋಷಿ, ಅನಂತ್ ಕಾಮೆ, ಅನೀಲ ಕಕ್ಕೇರಿ, ಕೆ.ಬಿ ಕುಲಕರ್ಣಿ, ಪ್ರಸಾದ ಹರಿದಾಸ, ರಘು ಘಂಟಿ, ನಾರಾಯಣಾಚಾರ್ಯ ಕಮಲಾಪುರ, ಜ್ಯೋತಿ ಲಾತೂಕರ್, ಅನುಪಮಾ ಕುಲಕರ್ಣಿ, ಮೀನಾಕ್ಷಿ, ರೇಖಾ, ಉಮಾ ಇತರರು ಇದ್ದರು.

    ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತಿರ್ಥರ ಸಂಕಲ್ಪದಂತೆ ವಿಶ್ವ ಮಧ್ವ ಮಹಾ ಪರಿಷತ್‌ನ ಕಲಬುರ್ಗಿ ಘಟಕ ಈ ಪಾದಯಾತ್ರೆ ಹಮ್ಮಿಕೊಂಡಿದೆ. ಈ ಮೂಲಕ ಕನಕಾಚಲಪತಿ, ಭೋಗಾಪುರೇಶರ ಕೃಪೆಗೆ ಪಾತ್ರರಾಗುವ ಸತ್ಕರ್ಮ ಇದಾಗಿದೆ. ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಕ್ಕೆ ಸಾರ್ಥಕ ಭಾವ ಮೂಡಿದೆ.
    | ರಾಮಾಚಾರ್ಯ ಮೋಗೆರೆ ಪಾದೆಯಾತ್ರೆ ತಂಡದ ಮುಖ್ಯಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts