More

    ಹನುಮ ಮಾಲಾಧಾರಿಗಳಿಗೆ ನಿತ್ಯ ಪೂಜೆ

    ಕನಕಗಿರಿ: ಹನುಮ ಜಯಂತಿ ನಿಮಿತ್ತ ಇಲ್ಲಿನ ತೊಂಡಿತೇವರಪ್ಪ ದೇವಸ್ಥಾನದಲ್ಲಿ ಶನಿವಾರ 50ಕ್ಕೂ ಹೆಚ್ಚು ಭಕ್ತರು ಹನುಮಮಾಲೆ ಧರಿಸಿದರು.

    ಏ.23 ರಂದು ಹನುಮ ಜಯಂತಿ ಇದ್ದು, ನಾನಾ ಕಡೆಯಿಂದ ಭಕ್ತರು ಹನುಮ ಮಾಲೆ ಧರಿಸಿ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಲಿದ್ದಾರೆ. ಅದರಂತೆ ಇಲ್ಲಿನ ಹನುಮಮಾಲಾಧಿಕಾರಿಗಳು ಅಂಜನಾದ್ರಿಗೆ ತೆರಳಿ ಮಾಲೆ ವಿಸರ್ಜಿಸಲಿದ್ದಾರೆ. ಪ್ರತಿ ನಿತ್ಯ ಮಾರುತಿಗೆ ಎರಡು ಬಾರಿ ಪೂಜೆ ಮಾಡಲಾಗುತ್ತದೆ.

    ಭಕ್ತರ ಮನೆಗಳಲ್ಲಿ ನಡೆಯುವ ವಿಶೇಷ ಪೂಜಾ ಕಾರ್ಯಗಳಲ್ಲಿ ಮಾಲಾಧಾರಿಗಳು ಭಾಗವಹಿಸಲಿದ್ದಾರೆ. ಸಾಮೂಹಿಕ ಹನುಮಾನ್ ಚಾಲೀಸ್ ಪಠಣ, ಸ್ತೋತ್ರ ಸೇರಿ ಭಜನಾ ಕಾರ್ಯಕ್ರಮಗಳು ನೆರವೇರುತ್ತಿವೆ ಎಂದು ಗುರುಸ್ವಾಮಿ ಪಂಪಾಪತಿ ತಿಳಿಸಿದರು.

    ಪ್ರಮುಖರಾದ ವೆಂಕೋಬ ಪೂಜಾರ, ಮಂಜುನಾಥ ಗ್ಯಾಸ್, ಗೋಪಿನಾಥ ಗೊಂದಳೆ, ಸಿದ್ದು ಹಡಪದ, ತಿಮ್ಮಣ್ಣ ಅಂಬಿಗ, ದಶರಥ, ಶ್ರೀನಿವಾಸ ಪೂಜಾರ, ವಿಶ್ವನಾಥ ಲಕ್ಕಂಪುರ, ಪ್ರವೀಣ ಮುಸಲಾಪೂರ, ಸಂಪತ್, ಮನೋಜ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts