More

    ಬಿಜೆಪಿ ತೆಕ್ಕೆಗೆ ಗೌರಿಪುರ ಗ್ರಾಮ ಪಂಚಾಯಿತಿ: ಅಧ್ಯಕ್ಷೆಯಾದ ಸರಸ್ವತಿ ಚವ್ಹಾಣ್, ಕಾಂಗ್ರೆಸ್ ಮುಯ್ಯಿಗೆ ಮುಯ್ಯಿ?

    ಕನಕಗಿರಿ: ಗೌರಿಪುರ ಗ್ರಾಮ ಪಂಚಾಯಿತಿ ಅಧಿಕಾರ ಎರಡು ವರ್ಷದ ಬಳಿಕ ಬಿಜೆಪಿ ಬೆಂಬಲಿತ ಸದಸ್ಯರಿಗೆ ಒಲಿದಿದೆ. ಕಾಂಗ್ರೆಸ್ ಬೆಂಬಲಿತ ಸದಸ್ಯೆ ಸಾವಿತ್ರಿ ರಾಠೋಡ್‌ರನ್ನು ಸೆಳೆದ ಕಮಲ ಪಡೆ ಅಧ್ಯಕ್ಷರನ್ನಾಗಿ ಅವಿರೋಧ ಆಯ್ಕೆ ಮಾಡಿ ಚುಕ್ಕಾಣಿ ಹಿಡಿದಿದೆ.

    ಒಟ್ಟು 15 ಸದಸ್ಯ ಬಲದ ಗ್ರಾಪಂನಲ್ಲಿ ಬಿಜೆಪಿ ಬೆಂಬಲಿತ 10 ಸದಸ್ಯರಿದ್ದಾರೆ. ಬಹುಮತವಿದ್ದರೂ ಅಧ್ಯಕ್ಷ ಸ್ಥಾನ (ಸಾಮಾನ್ಯ ಮಹಿಳೆ) ಆಯ್ಕೆಯಲ್ಲಿ ಗೊಂದಲಕ್ಕೆ ಒಳಗಾಗಿತ್ತು. ಇದರ ಲಾಭ ಪಡೆದ ಕಾಂಗ್ರೆಸ್, ಬಿಜೆಪಿ ಬೆಂಬಲಿತರನ್ನು ಸೆಳೆದು ಆ ಪೈಕಿ ಸಾವಿತ್ರಿ ರಾಠೋಡ್‌ಗೆ ಅಧ್ಯಕ್ಷ ಸ್ಥಾನ ನೀಡಿ ಶಾಕ್ ನೀಡಿತ್ತು. ಇದು ಶಾಸಕರು ಹಾಗೂ ಬಿಜೆಪಿ ಮುಖಂಡರ ಮುಜುಗರಕ್ಕೂ ಕಾರಣವಾಗಿತ್ತು.

    ಆದರೆ, ಇತ್ತೀಚೆಗೆ ಅಧ್ಯಕ್ಷೆ ವಿರುದ್ಧ 12 ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿ ಪ್ರವಾಸ ಕೈಗೊಂಡಿದ್ದರು. ಗುರುವಾರ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿಗರು ಕಾಂಗ್ರೆಸ್ ಬೆಂಬಲಿತ ಸದಸ್ಯೆ ಸರಸ್ವತಿ ಚವ್ಹಾಣ ಸೇರಿದಂತೆ ಇತರ ಸದಸ್ಯರನ್ನು ಸೆಳೆದಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಸರಸ್ವತಿ ಒಬ್ಬರಿಗೆ ಅವಕಾಶ ಮಾಡಿಕೊಟ್ಟು ಅವಿರೋಧ ಆಯ್ಕೆಯಾಗುವಂತೆ ನೋಡಿಕೊಂಡಿದ್ದಾರೆ. ಬಳಿಕ ಅಧ್ಯಕ್ಷೆ ಸರಸ್ವತಿ, ಶಾಸಕ ಬಸವರಾಜ ದಢೇಸುಗೂರು ನೇತೃತ್ವದಲ್ಲಿ ಬಿಜೆಪಿ ಸೇರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts