More

    ಅಂಬೇಡ್ಕರ್‌ಗೆ ಅವಮಾನಿಸಿದವರಿಗೆ ಶಿಕ್ಷೆಯಾಗಲಿ

    ಕನಕಗಿರಿ: ಕಲಬುರಗಿ ಜಿಲ್ಲೆಯ ಕೋಟನೂರು ಗ್ರಾಮದ ಲುಂಬಿಣಿವನದ ಅಂಬೇಡ್ಕರ್ ಪ್ರತಿಮೆಗೆ ಅವಮಾನಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕ ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಸೋಮವಾರ ಮನವಿ ಸಲ್ಲಿಸಿತು.

    ಭಾರತ ದೇಶಕ್ಕೆ ಸಂವಿಧಾನ ನೀಡಿದವರನ್ನು ಅಪಮಾನಿಸುವುದು ಸರಿಯಲ್ಲ

    ಕನಕಗಿರಿ ತಾಲೂಕು ಸಂಚಾಲಕ ದುರುಗೇಶ ಮಾತನಾಡಿ, ಈ ಹಿಂದೆ ಗಂಗಾವತಿಯ ಕೋರ್ಟ್ ಮುಂಭಾಗದ ಅಂಬೇಡ್ಕರ್ ಪ್ರತಿಮೆಗೆ ಅವಮಾನ ಮಾಡಲಾಗಿತ್ತು. ಈಗ ಕೋಟನೂರು ಗ್ರಾಮದ ಪುತ್ಥಳಿಗೆ ಅವಮಾನಿಸಿರುವುದು ಇಡೀ ನಾಗರೀಕ ಸಮಾಜವೇ ತಲೆತಗ್ಗಿಸುವಂತದ್ದಾಗಿದೆ. ಭಾರತ ದೇಶಕ್ಕೆ ಸಂವಿಧಾನ ನೀಡಿದವರನ್ನು ಅಪಮಾನಿಸುವುದು ಸರಿಯಲ್ಲ. ಇದು ಜಾತಿ-ಜಾತಿ, ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕೆಲಸವಾಗಿದೆ. ಇಂತಹ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

    ಇದನ್ನೂ ಓದಿ: ಅಕ್ರಮವಾಗಿ ಮದ್ಯ ಮಾರಾಟ ಮಾಡುತಿದ್ದವನ ಬಂಧನ

    ಸಮಿತಿಯ ರಾಜ್ಯ ಸಂಚಾಲಕ ಯಲ್ಲಪ್ಪ ಹಳೇಮನಿ, ಜಿಲ್ಲಾಧ್ಯಕ್ಷ ಮರಿಸ್ವಾಮಿ ಬರಗೂರು, ಜಿಲ್ಲಾ ಸಂಚಾಲಕರಾದ ಪ್ರಕಾಶ ವೀರಾಪುರ, ಸುಹಿಲ್, ಕೊಪ್ಪಳ ತಾಲೂಕಾಧ್ಯಕ್ಷ ರವಿಚಂದ್ರ ಗುಡ್ಲಾನೂರು, ಕನಕಗಿರಿ ತಾಲೂಕಾಧ್ಯಕ್ಷ ಹನುಮೇಶ, ಗಂಗಾವತಿ ತಾಲೂಕಾಧ್ಯಕ್ಷ ಯಲ್ಲಪ್ಪ, ಪ್ರಮುಖರಾದ ತಿಪ್ಪಣ್ಣ ಕಾರಟಗಿ, ಓಂಕಾರಪ್ಪ, ಯಮನೂರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts