More

    ಮಕ್ಕಳಲ್ಲೇ ಶ್ರವಣ ದೋಷ ಹೆಚ್ಚು

    ಕನಕಗಿರಿ: ದೇಶದಲ್ಲಿ ಒಂದು ಲಕ್ಷಕ್ಕೆ 291 ಜನರಲ್ಲಿ ಶ್ರವಣ ದೋಷ ಕಂಡು ಬರುತ್ತಿದೆ. ನವಜಾತ ಶಿಶುಗಳಿಂದ 14 ವರ್ಷದೊಳಗಿನ ಮಕ್ಕಳಲ್ಲಿ ಶ್ರವಣ ದೋಷ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ್ ಹೇಳಿದರು.

    ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರವಣ ದೋಷ ನಿವಾರಣೆ ಹಾಗೂ ನಿಯಂತ್ರಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಲಾ ಹಂತದಲ್ಲಿ ಕಿವಿಗೆ ಸಂಬಂಧಿಸಿದ ದೋಷಗಳನ್ನು ಗುರುತಿಸಿ ಪರೀಕ್ಷೆಗೆ ಒಳಪಡಿಸಬೇಕು. ದೋಷವಿದ್ದರೆ ಚಿಕಿತ್ಸೆ ಪಡೆಯುವುದು ಒಳ್ಳೆಯದು ಎಂದರು.

    ಎನ್‌ಎಸ್‌ಎಸ್ ಅಧಿಕಾರಿ ವೀರೇಶ ಮಾತನಾಡಿ, ಜೋರಾದ ಸಂಗೀತ ಕೇಳುವುದು, ಗದ್ದಲದ ಪರಿಸರದಲ್ಲಿ ಕೆಲಸ ಮಾಡುವುದರಿಂದ ಶ್ರವಣ ದೋಷ ಕಾಣಿಸಿಕೊಳ್ಳುತ್ತದೆ. ವಿದ್ಯಾರ್ಥಿಗಳು ಜೋರಾದ ಸಂಗೀತ ಹಾಗೂ ಗದ್ದಲದ ಪರಿಸರದಿಂದ ದೂರವಿರಬೇಕು ಎಂದು ತಿಳಿಸಿದರು. ಭಾಷಣ ಸ್ಪರ್ಧೆಯಲ್ಲಿ ಶಾಹೀನ್ (ಪ್ರಥಮ), ಅರ್ಷಿಯಾ (ದ್ವಿತೀಯ), ಗದ್ದೆಪ್ಪ (ತೃತೀಯ) ಬಹುಮಾನ ಪಡೆದರು. ಉಪನ್ಯಾಸಕರಾದ ಮರ್ವಿನ್ ಡಿಸೋಜ, ತಬಸ್ಸುಮ್, ಲಲಿತಾ, ಶೋಭಾ, ಮಹ್ಮದ್ ಸರ್ಫರಾಜ್, ಆರೋಗ್ಯ ಇಲಾಖೆ ಆಪ್ತ ಸಮಾಲೋಚಕ ಸಿದ್ರಾಮಪ್ಪ, ಅಮೀನಸಾಬ್, ಹಿರಿಯ ಆರೋಗ್ಯ ಸಹಾಯಕ ಕಲ್ಲಪ್ಪ ಬೂದಿಹಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts