More

    ಕನಕಗಿರಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ: ವ್ಯಾಪಾರ-ವಹಿವಾಟು, ಬಸ್ ಸಂಚಾರ ಸ್ಥಗಿತ

    ಕನಕಗಿರಿ: ರಾಯಚೂರಲ್ಲಿ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಖಂಡಿಸಿ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ಕನಕಗಿರಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

    ಬೆಳಗ್ಗೆಯಿಂದ ಮಧ್ಯಾಹ್ನ 3 ಗಂಟೆವರೆಗೆ ವ್ಯಾಪಾರ ವಹಿವಾಟು, ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದವು. ಸಹಕಾರಿ ಸಂಸ್ಥೆಗಳು ಬಂದ್ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದವು.. ಸರ್ಕಾರಿ ಕಚೇರಿಗಳು, ಶಾಲೆಗಳು ಎಂದಿನಂತೆ ನಡೆದವು.

    ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮೇಲುಗಡೆ ಅಗಸೆಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ರಾಜಬೀದಿ ಮೂಲಕ ವಾಲ್ಮೀಕಿ ವೃತ್ತದವರೆಗೆ ಸಾಗಿತು. ಸ್ಥಳೀಯ ಕಾಲೇಜಿನ ಪ್ರೊಫೆಸರ್ ನಿಂಗಣ್ಣ ಜಂಗಮರಹಳ್ಳಿ ಮಾತನಾಡಿ, ಡಾ.ಅಂಬೇಡ್ಕರ್‌ರಂತಹ ಧೀಮಂತ ವ್ಯಕ್ತಿಯನ್ನು ಒಂದು ಜಾತಿ, ಧರ್ಮ, ಪ್ರದೇಶಕ್ಕೆ ಸೀಮಿತಗೊಳಿಸಬಾರದು. ನಮ್ಮ ಹೋರಾಟ ಒಂದು ಜಾತಿ, ಧರ್ಮದ ವಿರುದ್ಧವಲ್ಲ. ಸಂವಿಧಾನ ಹಾಗೂ ಅದರ ಕರ್ತೃವಿಗೆ ಆದ ಅನ್ಯಾಯದ ವಿರುದ್ಧ ಎಂದರು.

    ಪ್ರಗತಿಪರ ಹೋರಾಟಗಾರ ಎಚ್.ಎನ್.ಬಡಿಗೇರ ಮಾತನಾಡಿ, ಸಂವಿಧಾನಕ್ಕೆ ಗೌರವಿಸುವ ಕೆಲಸವಾಗಬೇಕು ಎಂದರು. ತಹಸೀಲ್ದಾರ್ ಧನಂಜಯ ಮಾಲಗಿತ್ತಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಬೈಲಕ್ಕುಂಪುರ ದುರ್ಗಪ್ಪ ದೊಡ್ಡಮನಿ, ವೆಂಕಟೇಶ ನಿರ್ಲೂಟಿ, ಪಾಮಣ್ಣ ಅರಳಿಗನೂರು, ಶಾಂತಪ್ಪ ಬಸರಿಗಿಡ, ರವಿ ಭಜಂತ್ರಿ, ಪೂಜಪ್ಪ ಚಿಕ್ಕ ಮಾದಿನಾಳ, ಸಣ್ಣ ಕನಕಪ್ಪ, ಗ್ಯಾನಪ್ಪ ಗಾಣದಾಳ, ದೇವಪ್ಪ ತೋಳದ, ಸಿದ್ದಪ್ಪ ನಿರ್ಲೂಟಿ, ಹೊನ್ನೂರಸಾಬ್ ಮೇಸ್ತ್ರಿ, ನೂರ್ ಸಾಬ್ ಗಡ್ಡಿಗಾಲ, ಶೇಷಪ್ಪ ಪೂಜಾರ, ರಾಜಾಸಾಬ್ ನಂದಾಪುರ, ಹನುಮಂತ ಬಸರಿಗಿಡ, ಸಣ್ಣ ಕನಕಪ್ಪ, ಕನಕಪ್ಪ ಮ್ಯಾಗಡೆ, ಕಂಠಿ ಮ್ಯಾಗಡೆ, ನಿಂಗಪ್ಪ ಪೂಜಾರ, ಹಂಪೇಶ ಹರಿಗೋಲು, ವೀರೇಶ ನವಲಿ, ಕೆಂಚಪ್ಪ ಹಿರೇಖೇಡ, ನೀಲಕಂಠ ಬಡಿಗೇರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts