More

    ಜಮೀನುಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಿ: ನಾಗಲಾಪುರ ರೈತ ಸಂಘ-ಹಸಿರು ಸೇನೆ ಮುಖಂಡರ ಆಗ್ರಹ

    ಕನಕಗಿರಿ: ಸೋಮಸಾಗರ ಗ್ರಾಮದ ಎಫ್-1 ವ್ಯಾಪ್ತಿಯ ಜಮೀನುಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸಬೇಕೆಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ನಾಗಲಾಪುರ ಗ್ರಾಮ ಘಟಕ ಭಾನುವಾರ ಜೆಸ್ಕಾಂನ ಮುಸಲಾಪುರ ಶಾಖೆಯ ಲೈನ್‌ಮನ್ ರಾಯಪ್ಪಗೆ ಮನವಿ ಸಲ್ಲಿಸಿತು.

    ಗ್ರಾಮ ಘಟಕದ ಅಧ್ಯಕ್ಷ ಹನುಮೇಶ ಪೂಜಾರಿ ಮಾತನಾಡಿ, ಒಂದು ವಾರದಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಾಸವಾಗುತ್ತಿದೆ. ಏಳು ತಾಸು ವಿದ್ಯುತ್ ಸರಬರಾಜು ಆಗುತ್ತಿಲ್ಲ. ಪದೇಪದೆ ವಿದ್ಯುತ್ ಕಡಿತಗೊಳಿಸುವುದರಿಂದ ಮೋಟಾರ್‌ಗಳು ಕೆಟ್ಟು ಹೋಗುತ್ತಿವೆ. ಈಗಾಗಲೇ ಬಿತ್ತನೆ, ರಾಸಾಯನಿಕ ಸೇರಿದಂತೆ ಸಾವಿರಾರು ರೂ. ಖರ್ಚು ಮಾಡಿಕೊಂಡಿರುವ ರೈತನಿಗೆ ಪಂಪ್‌ಸೆಟ್‌ಗಳ ರಿಪೇರಿ ಮಾಡಿಸುವುದೆಂದರೆ ಹೆಚ್ಚಿನ ಹೊರೆಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮುಸಲಾಪುರ ಗ್ರಾಮ ಘಟಕದ ಅಧ್ಯಕ್ಷ ಮಾದೇವ ಕೊಳಜಿ ಮಾತನಾಡಿ, ರೈತರ ಜಮೀನುಗಳಿಗೆ ರಾತ್ರಿ ವೇಳೆ ವಿದ್ಯುತ್ ಸರಬರಾಜಾಗುತ್ತಿದೆ. ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗುಡ್ಡಗಾಡು ಪ್ರದೇಶವಾಗಿದ್ದು, ಚಿರತೆ, ಕರಡಿಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದ ರೈತರು ರಾತ್ರಿ ವೇಳೆ ಜಮೀನುಗಳಿಗೆ ತೆರಳಿ ನೀರು ಹಾಯಿಸುವುದು ಕಷ್ಟವಾಗುತ್ತಿದೆ. ಆದ್ದರಿಂದ ಮೊದಲಿನಂತೆ ಹಗಲು ವೇಳೆ ವಿದ್ಯುತ್ ಪೂರೈಸಬೇಕು. ರಾತ್ರಿ ವೇಳೆ ಸಿಂಗಲ್ ಫೇಸ್ ಕರೆಂಟ್ ನೀಡಬೇಕು ಎಂದು ಆಗ್ರಹಿಸಿದರು. ಪದಾಧಿಕಾರಿಗಳಾದ ಕರಿಯಪ್ಪ ಗೋವಿಂದಪ್ಪ ಬೋದೂರು, ಶಿವಲಿಂಗಪ್ಪ ಗೌಡ್ರು, ಅಯ್ಯನಗೌಡ, ಹನುಮನಗೌಡ, ಸೋಮನಾಥ, ರಮೇಶ ಜಗಲಿ, ಸೋಮಪ್ಪ ಮ್ಯಾದ್ನೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts