More

    100 ಹಾಸಿಗೆ ಆಸ್ಪತ್ರೆಗಾಗಿ ಸೆ.15ಕ್ಕೆ ಕನಕಗಿರಿ ಬಂದ್: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಗಂಗಾಧರಸ್ವಾಮಿ ಮಾಹಿತಿ

    ಕನಕಗಿರಿ: ಮಂಜೂರಾದ 100 ಹಾಸಿಗೆ ಆಸ್ಪತ್ರೆಯನ್ನು ಪಟ್ಟಣದಲ್ಲೇ ಆರಂಭಿಸಬೇಕೆಂದು ಆಗ್ರಹಿಸಿ ಸೆ.15ರಂದು ಕನಕಗಿರಿ ಬಂದ್ ಹಾಗೂ ಅರೆಬೆತ್ತಲೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಗಂಗಾಧರಸ್ವಾಮಿ ಹೇಳಿದರು.

    ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಹಿಂದುಳಿದ ತಾಲೂಕಾಗಿರುವ ಕನಕಗಿರಿಗೆ 100 ಹಾಸಿಗೆ ಆಸ್ಪತ್ರೆ ಮಂಜೂರಾಗಿದ್ದರೂ ಶಾಸಕ ಬಸವರಾಜ ದಢೇಸುಗೂರು ಸ್ಥಳದ ಕೊರತೆಯ ನೆಪ ಹೇಳುತ್ತಿದ್ದಾರೆ. ಅಲ್ಲದೆ, ತಾವೇ ಬರೆದಿರುವ ಶಿಫಾರಸು ಪತ್ರದಲ್ಲಿ ಕನಕಗಿರಿಗಿಂತ ಕಾರಟಗಿಗೆ ಜರೂರು ಎಂದಿದ್ದು, ಇದು ಸಹ ಜಗಜ್ಜ್ಜಾಹೀರಾಗಿದೆ. ಶಾಸಕರು ಕ್ಷೇತ್ರದಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಸೆ.15ರಂದು ಅಂಗಡಿ ಮುಂಗಟ್ಟು, ವ್ಯಾಪಾರ ವಹಿವಾಟನ್ನು ಸಂಪೂರ್ಣ ಬಂದ್ ಮಾಡಿ ಅರೆಬೆತ್ತಲೆ ಮೆರವಣಿಗೆ ನಡೆಸಲಾಗುವುದು ಎಂದರು.

    ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ ಮಾತನಾಡಿ, ಈ ಭಾಗದ ಬಡಜನರು ಚಿಕಿತ್ಸೆಗಾಗಿ ನಗರ ಪ್ರದೇಶಗಳಿಗೆ ತೆರಳುವುದು ಕಷ್ಟವಾಗುತ್ತದೆ. ಹೀಗಾಗಿ 100 ಹಾಸಿಗೆಯ ಆಸ್ಪತ್ರೆಯನ್ನು ಕನಕಗಿರಿಯಲ್ಲೇ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

    ಪಪಂ ಸದಸ್ಯರಾದ ಅನಿಲ್ ಕುಮಾರ ಬಿಜ್ಜಳ, ರಾಜಾಸಾಬ್ ನಂದಾಪುರ, ಶರಣೇಗೌಡ ಪಾಟೀಲ್, ಪ್ರಮುಖರಾದ ಶರಣಬಸಪ್ಪ ಭತ್ತದ, ರವಿ ಪಾಟೀಲ್, ಹುಲಗಪ್ಪ ವಾಲೇಕಾರ್, ರಾಮನಗೌಡ ಬುನ್ನಟ್ಟಿ, ಪಂಪಾಪತಿ ತರ‌್ಲಕಟ್ಟಿ, ಶಾಂತಪ್ಪ ಬಸರಿಗಿಡದ, ನೀಲಕಂಠ ಬಡಿಗೇರ, ಪಾಮಣ್ಣ ಅರಳಿಗನೂರು, ಕನಕಪ್ಪ ಮ್ಯಾಗಡೆ, ಹೊನ್ನೂರ ಉಪ್ಪು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts