More

    ಸರ್ವಧರ್ಮ ಸಮನ್ವಯತೆ ಪಾಲಿಸಿ

    ಚಿಕ್ಕಮಗಳೂರು: ಕನಕದಾಸರು ಸಾಹಿತ್ಯದಲ್ಲಿ ಪ್ರಚುರಪಡಿಸಿದ ಸರ್ವಧರ್ಮ ಸಮಭಾವ ಹಾಗೂ ಸಮ ಸಮಾಜ ತತ್ವ ಎಲ್ಲರೂ ಪಾಲಿಸಬೇಕು ಎಂದು ಜಿಪಂ ಉಪಾಧ್ಯಕ್ಷ ಬಿ.ಜೆ.ಸೋಮಶೇಖರ ಹೇಳಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕನಕದಾಸರ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಕನಕದಾಸರ ತತ್ವ, ಆದರ್ಶ, ಸಿದ್ಧಾಂತಗಳನ್ನು ತಿಳಿದುಕೊಂಡು ದಾಸ ಸಾಹಿತ್ಯವನ್ನು ಯುವ ಜನರು ಪಾಲಿಸುವಂತೆ ತಿಳಿಸಿಕೊಡಬೇಕು ಎಂದರು.

    ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಮಾತನಾಡಿ, ಕೆಳವರ್ಗದವರೂ ಸಾಹಿತ್ಯ ಓದಿ, ತಿಳಿದುಕೊಳ್ಳುವಂತೆ ದಾಸ ಸಾಹಿತ್ಯ ರಚಿಸಿದ್ದಾರೆ. ಕನಕದಾಸರ ಆದರ್ಶ ಚಿಂತನೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

    ಜಿಪಂ ಸಿಇಒ ಎಸ್.ಪೂವಿತಾ, ಎಸ್​ಪಿ ಎಂ.ಎಚ್.ಅಕ್ಷಯ್, ಎಡಿಸಿ ಡಾ. ಕುಮಾರ್, ಪೌರಾಯುಕ್ತ ಬಸವರಾಜ್, ವಿಧಾನಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ, ಜಿಪಂ ಮಾಜಿ ಅಧ್ಯಕ್ಷರಾದ ಜೆ.ಎಚ್.ರೇಖಾಹುಲಿಯಪ್ಪ ಗೌಡ, ಎ.ಎನ್.ಮಹೇಶ್ ಇತರರಿದ್ದರು.

    ವಿಚಾರಧಾರೆ ತಲುಪಿಸುವಲ್ಲಿ ವಿಫಲ: ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರ ಚಿಂತನೆಗಳೇ ಬೇರೆಯಿತ್ತು. ಅಂತಹ ಮಹಾತ್ಮರು ಹಾಕಿಕೊಟ್ಟ ವಿಚಾರಧಾರೆಗಳನ್ನು ಯುವಪೀಳಿಗೆಗೆ ತಲುಪಿಸುವಲ್ಲಿ ವಿಫಲರಾಗಿದ್ದೇವೆ ಎಂದು ಉಪ ಸಭಾಪತಿ ಎಸ್.ಎಲ್.ಧಮೇಗೌಡ ಹೇಳಿದರು.

    ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ದಾಸಶ್ರೇಷ್ಠರು ಆರೋಗ್ಯರ ಸಮಾಜ ನಿರ್ವಣಕ್ಕೆ ಕೈಗೊಂಡ ಕಾರ್ಯಕ್ರಮ ಹಲವಾರು. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿದ್ದರೆ ಸದ್ಯ ಉತ್ತಮ ಸಮಾಜ ನಿರ್ವಣವಾಗಿರುತ್ತಿತ್ತು ಎಂದರು.

    ಮಾಜಿ ಸಚಿವ ಬಿ.ಬಿ.ಬಿ.ನಿಂಗಯ್ಯ, ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್, ಜಿಲ್ಲಾಧ್ಯಕ್ಷ ರಂಜನ್ ಅಜಿತ್​ಕುಮಾರ್, ಜಿಲ್ಲಾ ವಕ್ತಾರ ಹೊಲದಗದ್ದೆ ಗಿರೀಶ್, ಮಂಜಪ್ಪ, ಚಂದ್ರಪ್ಪ, ಬಾಲಕೃಷ್ಣ, ಎಂ.ಡಿ.ರಮೇಶ್, ಜಯರಾಜ್ ಅರಸ್, ಮಾನುಮಿರಂಡಾ, ವಿನಯ್ರಾಜ್, ಜಯಂತಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts