More

    ಕುಲ ಕುಲವೆಂದು ಹೊಡೆದಾಡದಿರಿ

    ವಿಜಯಪುರ: ಮಾನವ ಕುಲ ಒಂದೇ. ಜಾತಿ, ಮತ, ಬೇಧ, ಭಾವ ಮಾಡಬಾರದು ಎಂದು ಜಗತ್ತಿಗೆ ತಿಳಿಸಿದವರು ಶ್ರೇಷ್ಠ ಸಂತ ಕನಕದಾಸರು ಎಂದು ಮಖಣಾಪುರದ ಗುರುಪೀಠದ ಶ್ರೀ ಸೋಮೇಶ್ವರ ಗುರೂಜಿ ಹೇಳಿದರು.

    ಇಲ್ಲಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂತ ಕನಕದಾಸರ ಜಯಂತಿ ಹಾಗೂ ಕಡಣಿ ಸಾಹಿತ್ಯ ಸಮ್ಮೇಳನ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

    ಶರಣರು, ಮಹಾತ್ಮರು ಹೇಳಿದಂತೆ ಎಲ್ಲರ ಜಾತಿ ಒಂದೇ ಎಂಬುದನ್ನು ಒಪ್ಪಿಕೊಳ್ಳಬೇಕು. ನಾವು ಜಾತಿಗಳನ್ನು ಹುಡುಕಬಾರದು. ಧರ್ಮಗಳನ್ನು ಹುಡುಕುವಂತಾಗಬೇಕು. ಸಂತ ಶ್ರೇಷ್ಠನಾದವರು ತಮ್ಮ ಜೀವನವನ್ನು ತಮಗಾಗಿ ಅಲ್ಲ ಎಲ್ಲರಿಗೋಸ್ಕ್ಕರ ತಮ್ಮ ಜೀವನವನ್ನು ಮುಡುಪಾಗಿಟ್ಟವರು. ಶರಣರು ಮತ್ತು ಮಹಾತ್ಮರನ್ನು ಪೂಜಿಸಬೇಕು ಎಂದು ತಿಳಿಸಿದರು.

    ಜಿಪಂ ಮಾಜಿ ಉಪಾಧ್ಯಕ್ಷ ಕೆಂಚಪ್ಪ ಬಿರಾದಾರ ಮಾತನಾಡಿ, ಕನಕದಾಸರು ಕೇವಲ ಕವಿಯಲ್ಲ ಅನೇಕ ರೂಪವನ್ನು ಪಡೆದುಕೊಂಡ ದಾಸಶ್ರೇಷ್ಠರು. ಕನಕದಾಸರಂತೆ ಎಲ್ಲರೂ ಒಂದೇ ಧರ್ಮದವರಂತೆ ಬಾಳಬೇಕಿದೆ. ಎಲ್ಲ ಸಮಾಜದ ಸುಧಾರಣೆ ಆಗಬೇಕು. ಕನಕದಾಸರು ಮೂಢನಂಬಿಕೆ ವಿರೋಧಿಸಿದ್ದರು. ಕೀರ್ತನೆಗಳ ಮುಖಾಂತರ ಸಮಾಜವನ್ನು ತಿದ್ದುವ ಕೆಲಸ ಮಾಡಿದರು ಎಂದು ಸ್ಮರಿಸಿದರು.
    ಉಪನ್ಯಾಸ ನೀಡಿದ ಮೋಹನೇಶ್ವರ ಮೇಟಿ, ಮಾನವ ಜನ್ಮ ಬಹುದೊಡ್ಡದು. ಕಲಿಯಾಗಿದ್ದವರು ಕವಿಯಾಗಿ ಸೇವೆ ಮಾಡಿದ ಕನಕದಾಸರ ಚಿಂತನೆಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

    ಸಾಹಿತಿ ಮಂಜುಳಾ ಗೋನಾಳ ಮಾತನಾಡಿ, ಕನಕದಾಸರು ಕೇವಲ ಹಾಲುಮತದವರಿಗೆ ಮತ್ತು ಕುರುಬರಿಗೆ ಅಷ್ಟೇ ಸೀಮಿತ ಅಲ್ಲ. ನಮ್ಮಲಿರುವ ಒಗ್ಗಟ್ಟು ನಮ್ಮನ್ನು ಕಾಪಾಡುತ್ತೆ. ಕನಕದಾಸರ ಸಂದೇಶಗಳ ಸಾಹಿತ್ಯ ಬದುಕಿನ ನೋಟ ಕ್ರಮಗಳನ್ನು ಅಳವಡಿಸಿಕೊಂಡರೆ ಸಾಕು ಕನಕದಾಸರ ಆಸೆಗಳು ಜಗತ್ತನ್ನು ಪರಿವರ್ತನೆ ಮಾಡುತ್ತವೆ. ನಾವೆಲ್ಲರೂ ಒಂದೇ ಸರ್ವರಿಗೂ ಸಮಪಾಲು ಎಂದು ತಿಳಿಸಿಕೊಟ್ಟಿದ್ದಾರೆ ಎಂದರು.

    ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಧ್ಯಕ್ಷತೆವಹಿಸಿದ್ದರು. ವಿದ್ಯಾವತಿ ಅಂಕಲಗಿ, ರುಕ್ಮೀಣಿ ಚವ್ಹಾಣ, ಶಿವಶರಣ ಗುಗ್ಗರಿ, ಬಸವರಾಜ ತಾವರಗೇರೆ ಇನ್ನಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts