More

    ಸಮ ಸಮಾಜ ನಿರ್ಮಾಣಕ್ಕೆ ವಚನ ಪೂರಕ

    ಕಾನಹೊಸಹಳ್ಳಿ: 12ನೇ ಶತಮಾನದ ಬಸವಾದಿ ಶರಣರಲ್ಲಿ ಸರ್ವ ಶೇಷ್ಠರಾದ ಶ್ರೀ ಮಡಿವಾಳ ಮಾಚಿದೇವರು ಸಾರಿದ ವಚನಗಳು, ಪ್ರಸುತ್ತ ಸಮಸಮಾಜದ ನಿಮಾರ್ಣಕ್ಕೆ ಪೂರಕವಾಗಿವೆ ಎಂದು ಉಪ ತಹಸೀಲ್ದಾರ್ ಚಂದ್ರಮೋಹನ್ ತಿಳಿಸಿದರು.

    ಪಟ್ಟಣದ ನಾಡಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಮಾಚಿದೇವರು ತನ್ನ ಕಸಬುನಿಂದ ಗುರುತಿಸಿಕೊಂಡು ಅವರು ಸಾರಿದ ವಚನಗಳು ಸಮಾಜಕ್ಕೆ ಮಾದರಿಯಾಗಿವೆ. ಬಸವಾದಿ ಶರಣರಲ್ಲಿ ಕಾಂತ್ರಿಕಾರಿಯಾಗಿದ್ದು, ಅವರ ಶ್ರಮದ ಫಲವಾಗಿ ಅನೇಕ ಶರಣ, ಶರಣೆಯರ ವಚನಗಳನ್ನು ಇಂದು ನಾವುಗಳು ಕೇಳುವಂತಾಗಿದೆ. ಈ ನಿಟ್ಟಿನಲ್ಲಿ ಶರಣ ಚನ್ನಬಸವಣ್ಣನವರ ಕೊಡುಗೆ ಮರೆಯುವಂತ್ತಿಲ್ಲ ಎಂದರು.

    ಕಂದಾಯ ನಿರೀಕ್ಷಕ ಮುರಳಿಕೃಷ್ಣ, ಸಿಬ್ಬಂದಿ ಅನಿತಾಪೂಜಾರ್, ಕುಂಬಾರ ಮುರುಗೇಶ್, ಆಗ್ರಹಾರ ಮಂಜುನಾಥ, ರಮೇಶ್, ಬೋರಣ್ಣ, ತಿಪ್ಪೇಶ್, ಮುಖಂಡರಾದ ಕೆ.ವೀರೇಶ್, ಕೆ.ಎಸ್.ವೀರೇಶ್, ಶರಣಪ್ಪ, ನಾಗರಾಜ್, ಯಶವಂತ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts