More

    ಜನರ ನಾಲಗೆಯಲ್ಲಿವೆ ಶರಣರ ವಚನಗಳು -ವಿದ್ವಾನ್ ಬಿ.ಎಂ.ಗುರುಸಿದ್ದಯ್ಯ ದತ್ತಿ ಉಪನ್ಯಾಸ

    ಕಾನಹೊಸಹಳ್ಳಿ: 12ನೇ ಶತಮಾನದಲ್ಲಿ ಬಸವಾದಿ ಶರಣರು ರಚಿಸಿದ ವಚನಗಳು ಗ್ರಾಮೀಣ ಭಾಗದ ಜನಸಾಮಾನ್ಯರ ತುದಿನಾಲಿಗೆಯಲ್ಲಿರುವ ಕಾರಣ, ವಚನಗಳ ಜನಪದರ ನಡುವೆ ಇಂದಿಗೂ ಜೀವಂತಿಕೆ ಉಳಿಸಿಕೊಂಡಿವೆ ಎಂದು ಹಿರಿಯ ಸಾಹಿತಿ ಬಿ.ಎಂ.ಪ್ರಭುದೇವ ಅಭಿಪ್ರಾಯಪಟ್ಟರು.

    ಸಮೀಪದ ಎಂ.ಬಿ.ಅಯ್ಯನಹಳ್ಳಿಯ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ವಚನ ದಿನಾಚರಣೆ ನಿಮಿತ್ತ ವಿದ್ವಾನ್ ಬಿ.ಎಂ.ಗುರುಸಿದ್ದಯ್ಯ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯ ಕಳಸವಿದ್ದಂತೆ. ಬೌದ್ಧಧರ್ಮ ಮತ್ತು ಸಾಹಿತ್ಯಕ್ಕೆ ಸಿಕ್ಕಂತಹ ರಾಜಾಶ್ರಯ, ಶರಣಧರ್ಮ ಮತ್ತು ವಚನ ಸಾಹಿತ್ಯಕ್ಕೆ ಸಿಕ್ಕಿದ್ದರೆ ಶರಣ ಸಾಹಿತ್ಯವವೂ ವಿಶ್ವಮನ್ನಣೆ ಪಡೆಯುತ್ತಿತು. ಅಲ್ಲದೆ, ಸಮಗ್ರ ಅಧ್ಯಯನ ಅಗತ್ಯವಿದ್ದು ವಿದ್ವಾಂಸರು ಮತ್ತು ವಿಶ್ವವಿದ್ಯಾಲಯಗಳ ಈ ನಿಟ್ಟಿನಲ್ಲಿ ಕಾರ್ಯಪ್ರವೃತರಾಗಬೇಕು ಎಂದರು.

    ವಿಶೇಷ ಉಪನ್ಯಾಸ ನೀಡಿದ ಪತ್ರಕರ್ತ ಹಿ.ಮ.ಬಸವರಾಜ್ ಮಾತನಾಡಿ, ಶರಣರು ರಚಿಸಿದ ವಚನಗಳು ಬಹುತೇಕವಾಗಿ ಜೀವನಾನುಭವ ಮತ್ತು ಕಾಯಕದಿಂದ ಹುಟ್ಟಿಕೊಂಡಿವೆ. ನಿತ್ಯ ಬದುಕಿಗೆ ಹತ್ತಿರವಾಗಿವೆ ಎಂದರು. ಲೇಖಕ ಭೀಮಣ್ಣ ಗಜಾಪುರ ಮತ್ತು ಹುಡೇಂ ಕೃಷ್ಣಮೂರ್ತಿ ಮಾತನಾಡಿದರು. ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ಎನ್.ಎಂ.ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಮುಖ್ಯಸ್ಥ ಹೊಸಮನೆ ಚಿದಾನಂದಪ್ಪ ಅಧ್ಯಕ್ಷತೆ ವಹಿಸಿದ್ದರು.

    ಇದಕ್ಕೂ ಮೊದಲು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯಶಿಕ್ಷಕರಾದ ಸಂಗಮೇಶ್ವರಯ್ಯ, ಬಿ.ಎಂ.ಶಿವಪ್ರಕಾಶ, ಮಂಜುನಾಥಸ್ವಾಮಿ, ಕೆ.ಎಸ್.ವೀರೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts