More

    ಗುಳೆ ತಪ್ಪಿಸಲು ಕೆರೆಗಳಿಗೆ ನೀರು, ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿಕೆ

    ಕಾನಹೊಸಹಳ್ಳಿ: ಕ್ಷೇತ್ರದ 80 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ಜನರ ಗುಳೆ ತಪ್ಪಲಿದೆ ಎಂದು ಎನ್.ವೈ.ಗೋಪಾಲಕೃಷ್ಣ ಹೇಳಿದರು.

    ಗುಡೇಕೋಟೆ ಕರಡಿಧಾಮ ಆವರಣದಲ್ಲಿ ಗುರುವಾರ 15 ಕೋಟಿ ರೂ. ವೆಚ್ಚದಲ್ಲಿ ಚೆಕ್‌ಡ್ಯಾಂ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಇಲ್ಲಿನ ಕೂಲಿಕಾರ್ಮಿಕರು ಜೀವನ ಮಾಡಲು ಗುಳೆಹೋಗುವುದು ಸಾಮಾನ್ಯವಾಗಿದೆ. ಇದನ್ನು ತಪ್ಪಿಸಲು ತಾಲೂಕಿನ 80 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಯಾಗಿದೆ. ಇದಕ್ಕಾಗಿ 710 ಕೋಟಿ ರೂ. ಅನುದಾನವಿದೆ. ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ರಗುಡೇಕೋಟೆ, ಅಪ್ಪೇನಹಳ್ಳಿ, ನಾಗರಹುಣಿಸೆ, ಭೀಮಸಮುದ್ರ, ಯರೋಬನಹಟ್ಟಿ, ಶ್ರೀಕಂಠಾಪುರ, ಬೆಳಗಟ್ಟೆ, ಹುರುಡಿಹಳ್ಳಿ ಗ್ರಾಮಗಳಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಗುವುದು ಎಂದರು.

    ಸಣ್ಣ ನೀರಾವರಿ ಇಲಾಖೆ ಉಪ ವಿಭಾಗಾಧಿಕಾರಿ ರಾಮಾಂಜಿನೇಯ ಪ್ರಾಸ್ತಾವಿಕ ಮಾತನಾಡಿದರು. ಬಿಜೆಪಿ ಮುಖಂಡರಾದ ಎಚ್.ರೇವಣ್ಣ, ಎಸ್.ಪಿ.ಪ್ರಕಾಶ್, ಸೂರ್ಯಪಾಪಣ್ಣ, ಜಿ.ಟಿ,ಮಲ್ಲಿಕಾರ್ಜುನಗೌಡ, ಬಿ,ಭೀಮೇಶ್, ಹುಡೇಂ ಪಾಪನಾಯಕ, ಪ್ರಾಣೇಶ್‌ಸ್ವಾಮಿ, ಪಿ.ಚಂದ್ರು, ದಿಬ್ಬದಹಳ್ಳಿ ಪಾಪಣ್ಣ, ಅಧಿಕಾರಿಗಳಾದ ಟಿ.ಜಗದೀಶ್, ವೈ.ರವಿಕುಮಾರ್, ದೇವದಾಸ್, ಮಲ್ಲಿಕಾರ್ಜುನ, ಸುದರ್ಶನರೆಡ್ಡಿ, ನಾಗನಗೌಡ,ಹರೀಶ್ ರೆಡ್ಡಿ, ರೇಣುಕಾ, ಪಿ.ಮಂಜುನಾಥ ನಾಯಕ, ಮುತ್ತೆಪಾಲಯ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts